ಕಣಿವೆ, ಜ. ೩: ನಿಜಕ್ಕೂ ಇದು ಕಥೆಯಲ್ಲ. ಒಂದು ಹೆಣ್ಣಿನ ಬಾಳಲ್ಲಿ ನಡೆದಂತಹ ಕಹಿ ಘಟನೆ. ಲಾಕ್‌ಡೌನ್ ಅವಧಿಯಲ್ಲಿ ನಡೆದ ವಿವಾಹ ಎಂಬ ಬಂಧನದಲ್ಲಿ ಸಿಲುಕಿ ಸುಂದರವಾದ ಜೀವನ ನರಕ ಸದೃಶವಾದ ನೈಜ ಕಥೆ ಇದು.

ಕೊರೊನಾ ಎಂಬ ಮಹಾಮಾರಿ ಕಳೆದ ವರ್ಷ ಜಗವನ್ನೆಲ್ಲಾ ಬಿಡದೇ ಕಾಡಿದಾಗ ಕುಶಾಲನಗರದಲ್ಲಿ ನಡೆದ ಲಾಕ್‌ಡೌನ್ ಮದುವೆಯ ವಿಚಿತ್ರ ಬೆಳವಣಿಗೆ ನಡೆದಿದೆ.

ಅಷ್ಟಕ್ಕೂ ಆ ಯುವತಿ ಇಂಜಿನಿಯರಿAಗ್ ಪದವೀಧರೆ. ಈ ಯುವತಿಯ ತಾಯಿ ಶಾಲೆಯಲ್ಲಿ ಶಿಕ್ಷಕಿ. ತಂದೆ ಬಿಸಿನೆಸ್‌ಮೆನ್. ಲಾಕ್‌ಡೌನ್ ಸಂದರ್ಭದಲ್ಲಿ ನಡೆಯುತ್ತಿದ್ದ ಸರಳ ಮದುವೆ ಸಮಾರಂಭವೊAದಕ್ಕೆ ತೆರಳಿದಾಗ ಈ ಯುವತಿಯ ಹೆತ್ತವರಿಗೆ ಪರಿಚಯವಾದ ವ್ಯಕ್ತಿಯೊಬ್ಬರ ಬಳಿ ತÀಮ್ಮ ಮಗಳು ಇಂಜಿನಿಯರಿAಗ್ ಮುಗಿಸಿದ್ದಾಳೆ, ಎಲ್ಲಿಯಾದರು ಒಳ್ಳೆಯ ವರ ಇದ್ದರೆ ನೋಡಿ ಎಂದುಬಿಟ್ಟಿದ್ದರು.

ಕೆಲ ದಿನಗಳ ಬಳಿಕ ಅದೇ ವ್ಯಕ್ತಿ ಈ ಯುವತಿಯ ಪಾಲಕರಿಗೆ ಕರೆ ಮಾಡಿ, ಹಾಸನದ ಕಂದಾಯ ಕಚೇರಿಯಲ್ಲೊಬ್ಬ ವರ ಇದ್ದಾನೆ. ಸರ್ಕಾರಿ ಉದ್ಯೋಗ. ಹಾಸನದಲ್ಲಿ ಸ್ವಂತ ಮನೆ ಇದೆ. ಕೈ ತುಂಬಾ ಸಂಬಳ ಮತ್ತು ಗಿಂಬಳ. ನೋಡಿ ಮಾಡಬಹುದಾ ಮದುವೆ? ಒಮ್ಮೆ ಬಂದು ನೋಡಿ ಎಂದು ಬಿಟ್ಟ ಆ ಬ್ರೋಕರ್.

ಬಳಿಕ ಕೆಲ ಕಾಲ ಯೋಚಿಸಿದ ಪಾಲಕರು ಆ ವರನ ಹಾಸನದ ಸ್ವಗೃಹಕ್ಕೆ ಹೋಗಿ ಬಂದರಾಯಿತು ಎಂದು ನಿಶ್ಚಯಿಸಿದರು. ಹಾಗೆಯೇ ಹೋಗಿ ಬಂದದ್ದೂ ಆಯಿತು. ಆ ವರನನ್ನು ಅಳೆದು ತೂಗಿ ನೋಡಿದಾಗ, ನೋಡೋಕೆ ಒಂದಿಷ್ಟು ಪರವಾಗಿಲ್ಲ. ಆದರೂನು ಕೈ ತುಂಬಾ ಸಂಬಳದ ಉದ್ಯೋಗವಲ್ಲವೇ?

ಮಗಳನ್ನು ಸಾಕುವಷ್ಟು ಯೋಗ್ಯತೆ ಇದೆಯಲ್ಲಾ ಸಾಕು ಎಂದು ಲಾಕ್ ಡೌನ್ ಸಂದರ್ಭದಲ್ಲಿ ವಿವಾಹದ ದಿನಾಂಕವನ್ನು ನಿಗದಿಗೊಳಿಸಿಯೂ ಆಯಿತು. ಅಂತೆಯೇ ಕುಶಾಲನಗರದ ಯುವತಿ ಮನೆಯ ಬಳಿ ಸರಳ ವಿವಾಹವೂ ಆಯಿತು.

ಆಮೇಲೆ ನೋಡಿ ಶುರುವಾಯ್ತು...

ಇಂಜಿನಿಯರಿAಗ್ ಪದವಿ ವ್ಯಾಸಂಗ ಮಾಡಿದ ಈ ಕಾಲಮಾನದ ಯಾವುದೇ ಹೆಣ್ಣು ಮಗಳು, ಯಾರದ್ದೇ ಹೆಣ್ಣು ಮಗಳು ಬಯಸುವುದು ಅದು ಒಂದೇ-ಒAದು. ನಾನು ನನ್ನ ಪತಿ ಹಾಯಾಗಿರಬೇಕು. ಎಲ್ಲಾ ಕಡೆ ಜೋಡಿಯಾಗಿ ಜೋಡಿ ಹಕ್ಕಿಗಳಂತೆ ಸುತ್ತಾಟ ನಡೆಸಬೇಕು ಎಂದು.

ಆದರೆ ಇಲ್ಲಿ ಈ ಯುವತಿಯ ಬಾಳಲ್ಲಿ ನಡೆದದ್ದೇ ಬೇರೆ...

ವಿವಾಹವಾದ ಕಳೆದ ಆರು ತಿಂಗಳಲ್ಲಿ ಒಂದೇ ಒಂದು ರಾತ್ರಿ ಆ ಅಯೋಗ್ಯ ಈ ಹೆಣ್ಣಿನ ಸಂಗಡ ಸೇರದೆ, ನವ ವಿವಾಹಿತೆಯ ಸಾಂಗತ್ಯ ಬಯಸದೇ ದೂರವೇ ಉಳಿಯತೊಡಗಿದ.

ವಿವಾಹವಾದ ನವ ವಧುವನ್ನು ಪ್ರತ್ಯೇಕ ಕೊಠಡಿಯಲ್ಲಿ ಏಕಾಂಗಿಯಾಗಿ ಬಿಟ್ಟು ತಾನು ತನ್ನ ತಾಯಿಯ ಜೊತೆ ಮತ್ತೊಂದು ಕೊಠಡಿಯೊಳಗೆ ಮಲಗುತ್ತಿದ್ದ. ಈ ಬಗ್ಗೆ ನವವಿವಾಹಿತೆ ಸಾಕಷ್ಟು ನೊಂದು-ಬೆAದು ಪಡಬಾರದ ಸಂಕಟವನ್ನು ತಾನೊಬ್ಬಳೇ ಅನುಭವಿಸಿದಳು. ವಿವಾಹ ವಾದ ಎರಡು ತಿಂಗಳು ತಾನು ಪಡುತ್ತಿರುವ ಸಂಕಟವನ್ನು ಹೇಳದೇ ತನ್ನೊಳಗೇ ಬಚ್ಚಿಟ್ಟುಕೊಂಡು ವ್ಯಥೆ ಪಡುತ್ತಿದ್ದ ವಿಚಾರ ಆಕೆಯ ಅಮ್ಮನಿಗೆ ಹಾಗೋ ಹೇಗೋ ತಿಳಿದಾಕ್ಷಣ ಆ ಹೆತ್ತ ಕರುಳು ಅರೆ ಕ್ಷಣ ದಿಗ್ಬಾçಂತವಾಯಿತು.

ಕೊನೆಗೆ ಆ ಮೋಸದಾತನನ್ನು ಅರೆ ಕ್ಷಣ ಕ್ಷಮಿಸಿ ಮಗಳ ಮುಂದಿನ ಭವಿಷ್ಯಕ್ಕೋಸ್ಕರ ಆಸ್ಪತ್ರೆಗೆ ಕರೆದೊಯ್ದು ಪುರುಷತ್ವ ಪರೀಕ್ಷಿಸಿ ಚಿಕಿತ್ಸೆ ಕೊಡಿಸಲು ಹಾತೊರೆಯಿತು. ಆದರೆ ಸತ್ಯದರ್ಶನವಾಗುವ ಭಯದಿಂದ ಆ ಪಾಪಿ ಅಳಿಯನಿಗೆ ಅತ್ತೆಯ ವೇದನೆ ಹಾಗೂ ನಿವೇದನೆ ಕೇಳಿಸದಾಯಿತು.

ಮಗಳ ಭವಿಷ್ಯದ ದೃಷ್ಟಿಯಿಂದ ಆ ಯುವತಿಯ ಪಾಲಕರು ಕಳೆದ ನಾಲ್ಕು ತಿಂಗಳಿAದಲೂ ಕಾಡಿ-ಬೇಡಿ ಸಾಕಾದರು.

ಕೊನೆಗೆ ಕಾನೂನು ಮೊರೆಯೊಂದೇ ತಮ್ಮ ಮುಂದಿರುವ ಏಕೈಕ ಮಾರ್ಗ ಎಂದು ತಿಳಿದ ಯುವತಿಯ ಪೋಷಕರು ತಮ್ಮ ಮಗಳಿಗೆ ಆ ಅಳಿಯನಾದವ ಮಾಡಿರುವ ಘನಘೋರವಾದ ಅನ್ಯಾಯದ ವಿರುದ್ಧ ಮಡಿಕೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಸಂದರ್ಭ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಆ ನತದೃಷ್ಟ ಹೆಣ್ಣುಮಗಳ ಪೋಷಕರು, ಹಾಸನದ ಕಂದಾಯ ಕಚೇರಿಯಲ್ಲಿ ರುವ ಪಾಪಿ ನಮ್ಮ ಮಗಳಿಗೆ ಅಘೋರವಾದ ದ್ರೋಹವೆಸಗಿದ್ದಾನೆ;

ಪುರುಷತ್ವವೇ ಇಲ್ಲದೆ ವಾಸ್ತವ ಸತ್ಯ ಮರೆಮಾಚಿ ನಮ್ಮ ಮಗಳ ಭವಿಷ್ಯವನ್ನು ಹಾಳು ಮಾಡಿದ್ದಾನೆ ಎಂದು ಕಣ್ಣೀರು ಹಾಕಿದರು.

ಲಾಕ್‌ಡೌನ್ ಸಂದರ್ಭ ಮಾಡಿದ ಮದುವೆಯಲ್ಲಿ ಮಗಳು ಹಾಗೂ ಅಳಿಯನ ಹಿತದೃಷ್ಟಿಯಿಂದ ಲಕ್ಷಾಂತರ ರೂ.ಗಳ ಚಿನ್ನಾಭರಣ ಮಾಡಿಸಿ ಅಪಾರ ಹಣ ವ್ಯಯಿಸಿದ್ದೆ. ಹಾಗೆಯೇ ನನ್ನ ಮಗಳು-ಅಳಿಯ ಚೆನ್ನಾಗಿರಬೇಕು ಎಂದು ೧೫ ಲಕ್ಷ ರೂ.ಗಳ ಹೊಸ ಕಾರನ್ನು ಖರೀದಿಸಿದ್ದೆ. ಆದರೆ ಪಾಪಿ ನಮಗೆ ಅನ್ಯಾಯ ಮಾಡಿದ್ದಾನೆ. ಈತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.

ಯುವತಿ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿ, ನನ್ನನ್ನು ವಿವಾಹವಾದ ಆರು ತಿಂಗಳಲ್ಲಿ ಒಮ್ಮೆಯೂ ನನ್ನ ಸಾಂಗತ್ಯ ಬಯಸದ ಆತ, ತನ್ನಮ್ಮನ ಸಂಗಡ ಮಲಗುತ್ತಿದ್ದ. ನಾನು ಅಲ್ಲಿ ತೆರಳಿ ಆತನನ್ನು ಪ್ರಶ್ನಿಸಿದರೆ ಅಮ್ಮ-ಮಗ ಸೇರಿ ನನ್ನ ಬಗ್ಗೆಯೇ ಅವಾಚ್ಯವಾಗಿ ನಿಂದಿಸುತ್ತಿದ್ದರು;

ಅಮ್ಮನ ಜೊತೆ ಈಗಲೂ ಮಲಗುವ ಈ ಪಾಪಿ ನನ್ನನ್ನೇಕೆ ವಿವಾಹವಾಗಿ ನನ್ನ ಜೀವನದ ಜೊತೆ ಚೆಲ್ಲಾಟವಾಡಿದ ಎಂದು ಪ್ರಶ್ನಿಸುತ್ತಿದ್ದಾಳೆ.

ಮಗನಿಗೆ ಬುದ್ದಿ ಹೇಳಿ ಹೆಂಡತಿ ಜೊತೆ ಮಲಗಲು ಬಿಡದೇ ತನ್ನ ಸಂಗಡವೇ ಮಲಗಿಸಿಕೊಳ್ಳುತ್ತಿರುವ ಕುರಿತು ಇಬ್ಬರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎನ್ನುತ್ತಾರೆ. ಒಟ್ಟಾರೆ ಈ ಪ್ರಕರಣದ ಹಿಂದಿರುವ ಕರಾಳ ಸತ್ಯದ ತನಿಖೆಯಾಗಬೇಕು. ನನ್ನ ಸುಂದರ ಜೀವನವನ್ನು ಹಾಳುಮಾಡಿದ ಪಾಪಿಗೆ ಶಿಕ್ಷೆಯಾಗಬೇಕು ಎಂದು ಯುವತಿ ಕಣ್ಣೀರಿಟ್ಟಳು. ಒಟ್ಟಾರೆ ಲಾಕ್‌ಡೌನ್ ಎಂಬ ಅವಸರದ ಹಾಗೂ ಆತುರದ ಮದುವೆ ಒಂದು ಹೆಣ್ಣಿನ ಜೀವನವನ್ನೇ ಹಾಳುಮಾಡಿದೆ. -ಕೆ.ಎಸ್. ಮೂರ್ತಿ