ಕಣಿವೆ, ಜ. ೨: ಭಾರತೀಯ ಸೇನೆಗೆ ಸೇರಬಯಸುವ ಆಸಕ್ತ ಯುವಕರಿಗೆ ಕೊಡಗು ಎಜುಕೇಷನಲ್ ಅಂಡ್ ಸೋಷಿಯಲ್ ಸರ್ವಿಸ್ ಸಂಸ್ಥೆ ವತಿಯಿಂದ ಉಚಿತವಾಗಿ ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಪೂರಕ ಲಿಖಿತ ಪರೀಕ್ಷೆಯ ಸಿದ್ಧತೆಯ ತರಬೇತಿ ಕಾರ್ಯಾಗಾರ ಆರಂಭಗೊAಡಿದೆ. ಕಾರ್ಯಾಗಾರದಲ್ಲಿ ೨೫ ಯುವಕರು ನೋಂದಣಿಯಾಗಿದ್ದಾರೆ. ತರಬೇತಿ ಪ್ರತಿ ಶನಿವಾರ ನಡೆಯಲಿದೆ ಎಂದು ಸೇನಾ ಆಯ್ಕೆಯ ಸಂಯೋಜಕ ಹವಾಲ್ದಾರ್ ಜನಾರ್ಧನ್ ತಿಳಿಸಿದರು.

ಈಗಾಗಲೇ ಇಲ್ಲಿ ನೋಂದಣಿಯಾಗಿರುವ ಯುವಕರು ದೈಹಿಕ ಹಾಗೂ ಮೆಡಿಕಲ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದು ಲಿಖಿತ ಪರೀಕ್ಷೆ ಫೆ. ೨೮ ರಂದು ನಡೆಯಲಿದೆ ಎಂದು ಜನಾರ್ಧನ್ ತಿಳಿಸಿದ್ದಾರೆ. ತರಬೇತಿಗೆ ನೋಂದಣಿಯಾಗಲು ೭೭೯೫೪ ೬೯೫೩೧ ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.