ಶ್ರೀಮಂಗಲ, ಡಿ. ೩೧: ಯುಕೊ ಸಂಸ್ಥೆ ಆಶ್ರಯದಲ್ಲಿ ಡಿ. ೨೫ ರಂದು ಪೊನ್ನಂಪೇಟೆ ಸಮೀಪ ಬೇಗೂರು ಗ್ರಾಮದಲ್ಲಿ ಆಯೋಜಿಸಿದ್ದ ಕೊಡವ ತಕ್ಕೋರ್ಮೆ-೨೦೨೦ ರ ತಕ್ಕಮುಖ್ಯಸ್ಥರ ಸಮಾವೇಶದ ವೇದಿಕೆಯಲ್ಲಿ ಬೇಗೂರು ಊರ್‌ತಕ್ಕ ಕುಟುಂಬದ ಬೈರಂಡ ಪೂಣಚ್ಚ, ಹುದಿಕೇರಿ ಅಂಜಿಕೇರಿ ನಾಡ್ ಜೋಡಿತಕ್ಕ ಕುಟುಂಬದ ಅಜ್ಜಿಕುಟ್ಟಿರ ಗಿರೀಶ್, ಚೆಕ್ಕೇರ ರಾಜೇಶ್, ಕೊಡಗಿನ ೮ ಸೀಮೆಗೆ ಒಳಪಡುವ ೮ ದೇಶತಕ್ಕ ಕುಟುಂಬಗಳ ಪರವಾಗಿ ಮಾತಂಡ ಸಿ. ಮೊಣ್ಣಪ್ಪ, ಕಳ್ಳಂಗಡ ಬೋಪಯ್ಯ ಅಪ್ಪಾಜಿ, ಬೊಳ್ಳೆರ ರಾಜ ಸುಬ್ಬಯ್ಯ, ಪಾಂಡಿರ ಅಯ್ಯಣ್ಣ, ಪರದಂಡ ವಿಠಲ ಭೀಮಯ್ಯ, ಪರುವಂಡ ಪೊನ್ನಪ್ಪ ಹಾಜರಿದ್ದರು. ಪೋರೆರ ಮತ್ತು ಬಡುವಂಡ ಕುಟುಂಬದ ಅನುಪಸ್ಥಿತಿಯಲ್ಲಿ ವೇದಿಕೆಯಲ್ಲಿ ಆ ಸ್ಥಾನಕ್ಕೆ ‘ಸಾಂಪ್ರದಾಯಿಕ ಪಟ್ಟು (ಚೆಕ್‌ವಸ್ತç)’ ಇಟ್ಟು ಗೌರವ ನೀಡಲಾಯಿತು.

ಈ ಸಮಾವೇಶದ ವರದಿಯಲ್ಲಿ ೮ ಸೀಮೆಯ ದೇಶತಕ್ಕರು ಎಂದಾಗಬೇಕಿತ್ತು. ಆದರೆ, ಕಣ್ತಪ್ಪಿನಿಂದ ಕೇವಲ ಸೀಮೆ ತಕ್ಕರು ಎಂದಾಗಿತ್ತು ಎಂದು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸ್ಪಷ್ಟೀಕರಣ ನೀಡಿದ್ದಾರೆ.