೮ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಡಿ. ೩೧: ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿಟ್ಟಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ೮ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಷದ ಕೊನೆಯ ದಿನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನಿರ್ಭಯಾ ಸೇಫ್ ಸಿಟಿ ಯೋಜನೆ ಟೆಂಡರ್ ಕುರಿತು ಜಟಾಪಟಿಗಿಳಿದಿದ್ದ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ ಆದೇಶಿಸಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ಕುಂದುಕೊರತೆ ಮತ್ತು ಮಾನವ ಹಕ್ಕುಗಳ ಎಡಿಜಿಪಿ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಗ್ರೇವಿಯೆನ್ಸ್ ಅಂಡ್ ಹ್ಯೂಮನ್ ರೈಟ್ಸ್ ಎಡಿಜಿಪಿಯಾಗಿದ್ದಂತ ಮಾಲಿನಿ ಕೃಷ್ಣಮೂರ್ತಿಯವರನ್ನು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ. ರೂಪಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಡಿ. ರೂಪಾ ಅವರನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ರೂಪಾ ಜೊತೆ ಜೊತೆಗೆ ಐಜಿಪಿ ಹಾಗೂ ಎಸಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಐಎಸ್ ಡಿಯ ಐಜಿಪಿಯಾಗಿ ವರ್ಗಾವಣೆ ಮಾಡಿದೆ. ಎಸಿಬಿಯ ಐಜಿಪಿಯ ಚಂದ್ರಶೇಖರ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

ವಾರಿಯರ್ಸ್ಗಳನ್ನು ನೆನಪಿಸಿಕೊಳ್ಳಬೇಕು

ರಾಜ್‌ಕೋಟ್, ಡಿ. ೩೧: ೨೦೨೦ ಕಳೆದು ನಾಳೆ ೨೦೨೧ನೇ ಇಸವಿಗೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಗತಿಸಿದ ವರ್ಷದಲ್ಲಿ ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್ಸ್ಗಳ ಬಗ್ಗೆ ನೆನೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಕೊರೊನಾ ವೈರಸ್ ಮಹಾಮಾರಿ ಲಗ್ಗೆಯಿಟ್ಟ ನಂತರ ಆರೋಗ್ಯ ವಲಯದಲ್ಲಿ ತಮ್ಮ ಜೀವವನ್ನು ಒತ್ತೆಯಿಟ್ಟು ಸಮಾಜದ ಜನರ ಜೀವ ರಕ್ಷಣೆಗಾಗಿ ದುಡಿದವರಿಗೆ ಈ ಸಮಯದಲ್ಲಿ ಕೃತಜ್ಞತೆಗಳನ್ನು ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು. ೨೦೨೦ನೇ ಇಸವಿಯ ಈ ಕೊನೆ ದಿನ ಭಾರತದ ಕೋಟ್ಯಂತರ ವೈದ್ಯರು, ಆರೋಗ್ಯ ವಲಯ ಕಾರ್ಯಕರ್ತರು, ಶುಚಿತ್ವ ವಲಯದಲ್ಲಿ ಕೆಲಸ ಮಾಡುವವರು, ಕೊರೊನಾ ವಾರಿಯರ್ಸ್ಗಳನ್ನು ನೆನೆದು ಅವರಿಗೆ ಅಭಿನಂದನೆ ಹೇಳಬೇಕು. ಎಲ್ಲರೂ ಒಗ್ಗಟ್ಟಾದರೆ ಎಂತಹ ಕಠಿಣ ಪರಿಸ್ಥಿತಿಗಳನ್ನು ಕೂಡ ಎದುರಿಸಬಹುದು ಎಂಬುದನ್ನು ಈ ವರ್ಷದ ಸವಾಲು ನಮಗೆ ತೋರಿಸಿಕೊಟ್ಟಿದೆ ಎಂದರು. ಅವರು ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಏಮ್ಸ್) ಸಂಸ್ಥೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ೯ ಸೋಂಕಿತರ ಸಾವು

ಬೆಂಗಳೂರು, ಡಿ. ೩೧: ರಾಜ್ಯದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದು, ಗುರುವಾರ ೯೫೨ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೯,೧೯,೪೯೬ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿAದ ೯ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ೧೨,೦೯೦ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇಂದು ಬೆಂಗಳೂರಿನಲ್ಲಿ ೫೫೪ ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ನಗರದಲ್ಲಿ ಸೋಂಕಿನಿAದ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ೧೨೮೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೮,೯೬,೧೧೬ಕ್ಕೆ ಏರಿಕೆಯಾಗಿದೆ. ಇನ್ನು ೧೧,೨೭೧ ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ ೧೯೪ ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇಂದ್ರದಿAದ ಸಂವಹನ ಕಾರ್ಯತಂತ್ರ ಬಿಡುಗಡೆ

ನವದೆಹಲಿ, ಡಿ. ೩೧: ದೇಶದಲ್ಲಿ ಕೋವಿಡ್-೧೯ ಲಸಿಕೆ ವಿತರಣೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸಂವಹನ ಕಾರ್ಯತಂತ್ರವನ್ನು ಬಿಡುಗಡೆ ಮಾಡಿದೆ. ಆತಂಕಗಳನ್ನು ನಿವಾರಿಸಿ, ಲಸಿಕೆ ಸ್ವೀಕರಿಸಬಹುದು ಎಂಬ ಖಾತ್ರಿಯೊಂದಿಗೆ ನಿಖರ ಮತ್ತು ಪಾರದರ್ಶಕ ರೀತಿಯಲ್ಲಿ ಮಾಹಿತಿ ಪ್ರಸಾರಕ್ಕೆ ಪ್ರಯತ್ನಿಸಲಾಗುತ್ತಿದೆ. ೮೮ ಪುಟಗಳ ಸಮಗ್ರ ದಾಖಲೆಯ ಮಾಹಿತಿಯೊಂದಿಗೆ ರಾಷ್ಟಿçÃಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂವಹನ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಕೋವಿಡ್-೧೯ ಲಸಿಕೆ ಮತ್ತು ಲಸಿಕೆ ವಿತರಣಾ ಪ್ರಕ್ರಿಯೆ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಜನರಿಗೂ ತಲುಪುವಂತೆ ಮಾಹಿತಿ ನೀಡಲಾಗುತ್ತಿದೆ. ಲಸಿಕೆಗಾಗಿ ಅನಿಯಮಿತ ಬೇಡಿಕೆ ಎದುರಾಗದಂತೆ ನಿರ್ವಹಣೆ ಅಥವಾ ಲಸಿಕೆ ಬಗ್ಗೆಗಿನ ತಪುö್ಪ ಕಲ್ಪನೆಗಳ ಹೊರತಾಗಿಯೂ ಅದರ ಸುರಕ್ಷತೆ, ದಕ್ಷತೆ ಸುತ್ತಲಿನ ಆತಂಕ ಎದ್ದಿರುವುದರಿಂದ ಜನರಲ್ಲಿನ ಹಿಂಜರಿಕೆಯನ್ನು ತೊಡೆದುಹಾಕುವುದು ಈ ಕಾರ್ಯತಂತ್ರದ ಗುರಿಯಾಗಿದೆ ಎಂದು ಹೇಳಲಾಗಿದೆ.

ಮೇ ೪ ರಿಂದ ಪರೀಕ್ಷೆಗಳು ಆರಂಭ

ನವದೆಹಲಿ, ಡಿ. ೩೧: ಸಿಬಿಎಸ್‌ಇ ಬೋರ್ಡ್ನ ೧೦ನೇ ಮತ್ತು ೧೨ನೇ ತರಗತಿ ಪರೀಕ್ಷೆಗಳು ೨೦೨೧ರ ಮೇ ೪ ರಿಂದ ಆರಂಭವಾಗಲಿದ್ದು, ಜೂ. ೧೦ ರವರೆಗೂ ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಗುರುವಾರ ಮಾತನಾಡಿದ ಅವರು, ಜೂನ್ ೧೦ ರವರೆಗೂ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗಳ ಫಲಿತಾಂಶ ಜುಲೈ ೧೫ ರಂದು ಪ್ರಕಟವಾಗಲಿದೆ. ಶಾಲೆಗಳು ಹತ್ತು ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಗ, ಪ್ರಾಜೆಕ್ಟ್ ಹಾಗೂ ಇಂಟರ್‌ನಲ್ ಅಸೆಸ್ಮೆಂಟ್‌ಗಳನ್ನು ಮಾರ್ಚ್ ೧ ರಿಂದ ನಡೆಸಬಹುದಾಗಿದೆ. ಇದಕ್ಕೆ ಸಂಬAಧಿಸಿದAತೆ ವೇಳಾಪಟ್ಟಿಯನ್ನು ಸಿಬಿಎಸ್‌ಇ ಶೀಘ್ರದಲ್ಲಿಯೇ ಹೊರಡಿಸಲಿದೆ ಎಂದು ಹೇಳಿದರು.

ದೇವಾಲಯ ನಾಶಪಡಿಸಿದವರ ಬಂಧನ

ಕರಕ್, ಡಿ. ೩೧: ಪಾಕಿಸ್ತಾನದ ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದ ಘಟನೆಗೆ ಸಂಬAಧಿಸಿದAತೆ ೨೬ ಮಂದಿಯನ್ನು ಬಂಧಿಸಲಾಗಿದೆ. ತೀವ್ರಗಾಮಿಗಳ ಸಂಘಟನೆಯಾದ ಜಮಾತ್ ಉಲೇಮಾ-ಎ- ಇಸ್ಲಾಮ್ ಪಕ್ಷದ ನಾಯಕ ರೆಹಮತ್ ಸಲ್ಮಾನ್ ಖಟ್ಟಕ್ ಈ ಬಂಧಿತ ೨೬ ಮಂದಿಯ ಪೈಕಿ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ ರೆಹಮತುಲ್ಲಾ ಖಾನ್ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಜಮಾಅತ್ ಉಲೇಮಾ-ಎ-ಇಸ್ಲಾಮ್ ಪಕ್ಷದ ಬೆಂಬಲಿಗರ ನೇತೃತ್ವದ ಗುಂಪು ದೆವಾಲಯದ ಕಾಮಗಾರಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಇಡೀ ದೇವಾಲಯವನ್ನೇ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಸಮುದಾಯದ ವಿರುದ್ಧದ ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ವ್ಯಾಪಕವಾಗಿ ಖಂಡಿಸಿದ್ದಾರೆ.