ಶನಿವಾರಸAತೆ, ಡಿ. ೩೧: ಕೇರಳದ ಪಡಿಯೂರು ಗ್ರಾಮದ ಕಣ್ಣೂರು ಜಿಲ್ಲೆಯ ಆರೋಪಿ ಸುರ್ಜಿತ್ ತಾ. ೨೯ರ ರಾತ್ರಿ ವಾಹನದಲ್ಲಿ ಅಕ್ರಮವಾಗಿ ೫ ಬೀಟೆ ಮರದ ನಾಟಾಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿದ್ದಾಗ ಶನಿವಾರಸಂತೆ ಅರಣ್ಯ ಇಲಾಖೆ ಹಾರೋಹಳ್ಳಿ ಗಾರೆ ಕಟ್ಟೆಯಲ್ಲಿ ಗಸ್ತಿನಲ್ಲಿದ್ದಾಗ, ವಾಹನವನ್ನು ತಡೆದು ಆರೋಪಿಯನ್ನು ಬಂಧಿಸಿ ಮರ, ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಗೌಡಳ್ಳಿ ಗ್ರಾಮದಲ್ಲಿ ೧ ಬೀಟೆ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಗಾರೆಕಟ್ಟೆ ಗ್ರಾಮದ ಪೈಸಾರಿ ಜಾಗದಲ್ಲಿ ಬಚ್ಚಿಡಲಾಗಿತ್ತು. ಈ ಪ್ರಕರಣದಲ್ಲಿ ತಾ. ೨೪ರಂದು ಅರಣ್ಯ ಇಲಾಖೆ ಕಲಕಂದೂರು ಗ್ರಾಮದ ಆರೋಪಿ ಅವಿನಾಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೇ ಪ್ರಕರಣದಲ್ಲಿ ಆರೋಪಿಗಳಾದ ಕೊತ್ನಳ್ಳಿ ಗ್ರಾಮದ ಉಪೇಂದ್ರ, ಕಲಕಂದೂರಿನ ಪಾಲಾಕ್ಷ, ಗೌಡಳ್ಳಿ ಗ್ರಾಮದ ಸೋಮಶೇಖರ್ ಹಾಗೂ ಪಾಲಕಾಡು ಜಿಲ್ಲೆಯ ದೀಪಕ್ ತಲೆಮರೆಸಿಕೊಂಡಿರುತ್ತಾರೆ.ಕಾರ್ಯಾಚರಣೆಯಲ್ಲಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಪಿ., ಉಪವಲಯ ಅರಣ್ಯಾಧಿಕಾರಿಗಳಾದ ಸೂರ್ಯ, ಶ್ರೀನಿವಾಸ್, ಪ್ರಶಾಂತ್, ಶಿವಕುಮಾರ್, ಅರಣ್ಯ ರಕ್ಷಕರಾದ ಜಯಕುಮಾರ್, ಲೋಹಿತ್, ವೆಂಕಟೇಶ್, ನಾಗರಾಜ್, ರಮೇಶ್, ಹರೀಶ್ ಕುಮಾರ್, ಭರತ್, ಸಿಬ್ಬಂದಿಗಳಾದ ದೇವಿಕಾಂತ್, ಯಗ್ಲಪ್ರಸಾದ್, ಕೀರ್ತಿ, ಕಾರ್ತಿಕ್, ಹರ್ಷಿತ್, ರಾಜಿ, ಶಿವಪ್ಪ, ನಾಗೇಶ್ ಇದ್ದರು.