ಕುಶಾಲನಗರ, ಡಿ. ೩೧: ರಾಜ್ಯ ಸರಕಾರ ಕುಶಾಲನಗರವನ್ನು ನೂತನ ತಾಲೂಕು ರಚಿಸಿ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಕುಶಾಲನಗರ ತಾಲೂಕಿನಲ್ಲಿ ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿಗಳನ್ನು ಮುಖ್ಯವಾಗಿಟ್ಟುಕೊಂಡು ಒಟ್ಟು ೧೨ ಕಂದಾಯ ಗ್ರಾಮಗಳನ್ನು ರಚಿಸಲಾಗಿದೆ. ಪ್ರತ್ಯೇಕಿತಗೊಂಡ ಸೋಮವಾರಪೇಟೆ ತಾಲೂಕು ನಾಲ್ಕು ಹೋಬಳಿಗಳಿದ್ದು, ೨೧ ಕಂದಾಯ ಗ್ರಾಮಗಳನ್ನೊಳಗೊಂಡಿದೆ. ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ರಚನೆ ಮಾಡಬೇಕೆಂದು ಕಳೆದ ಹಲವು ವರ್ಷಗಳಿಂದ ತಾಲೂಕು ಹೋರಾಟ ಸಮಿತಿ ನಡೆಸಿದ ಹೋರಾಟದ ಫಲವಾಗಿ ಹಿಂದಿನ ಸಮ್ಮಿಶ್ರ ಸರಕಾರ ತಾಲೂಕು ರಚನೆ ಮಾಡಿ ಘೋಷಣೆ ಮಾಡಿತ್ತು. ಇದೀಗ ವರ್ಷಾಂತ್ಯಕ್ಕೆ ಕಂದಾಯ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.ಮುಳ್ಳುಸೋಗೆ ಕಂದಾಯ ಗ್ರಾಮ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು ಏಳು ಕಂದಾಯ ಗ್ರಾಮಗಳು ಒಳಪಡುತ್ತವೆ. ಮುಳ್ಳುಸೋಗೆ ಕಂದಾಯ ಗ್ರಾಮದಡಿಯಲ್ಲಿ ಮುಳ್ಳುಸೋಗೆಯ ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ, ಬಸವನಹಳ್ಳಿ ಗ್ರಾಮದ ಗುಡ್ಡೆಹೊಸೂರು, ಬೊಳ್ಳೂರು, ದೊಡ್ಡಬೆಟಗೇರಿ, ಅತ್ತೂರು, ಅತ್ತೂರು ಅರಣ್ಯ, ಆನೆಕಾಡು ಅರಣ್ಯ ವಿಭಾಗ, ಬೈಚನಹಳ್ಳಿಯ ಮಾದಾಪಟ್ಟಣ ಒಳಪಡಲಿದೆ.ಕೂಡಿಗೆ ಕಂದಾಯ ಗ್ರಾಮ: ಕೂಡಿಗೆ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ ಕೂಡಿಗೆಯ ಹುದುಗೂರು, ಮಲ್ಲೇನಹಳ್ಳಿ, ಬ್ಯಾಡಗೊಟ್ಟ, ಶಿರಹೊಳಲು, ಸೀಗೆಹೊಸೂರು, ಕಾಳಿದೇವನ ಹೊಸೂರು, ಬೆಂಡೆಬೆಟ್ಟ, ಮಾವಿನಹಳ್ಳ, ಜೇನುಕಲ್ಲು ಬೆಟ್ಟ ಅರಣ್ಯ ಪ್ರದೇಶ, ಹೆಗ್ಗಡಹಳ್ಳಿ, ಭುವನಗಿರಿ ಒಳಗೊಂಡರೆ, ಕೂಡುಮಂಗಳೂರು ಗ್ರಾಮದ ಚಿಕ್ಕತ್ತೂರು, ಕೂಡ್ಲೂರು, ಬಸವನತ್ತೂರು, ದೊಡ್ಡತ್ತೂರು, ಹುಲುಗುಂದ ಗ್ರಾಮಗಳು ಒಳಪಡಲಿವೆ.

ನಂಜರಾಯಪಟ್ಟಣ ಕಂದಾಯ ಗ್ರಾಮ: ನಂಜರಾಯಪಟ್ಟಣ ಕಂದಾಯ ಗ್ರಾಮದಲ್ಲಿ ನಂಜರಾಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ, ವಿರೂಪಾಕ್ಷಪುರ, ವಾಲ್ನೂರು ತ್ಯಾಗತ್ತೂರು, ರಸಲ್‌ಪುರ ಚಿಕ್ಕಬೆಟಗೇರಿ ಗ್ರಾಮಗಳು ಒಳಪಡಲಿವೆ.

ಅಭ್ಯತ್‌ಮಂಗಲ ಗ್ರಾಮ: ಅಭ್ಯತ್ ಮಂಗಲ ಕಂದಾಯ ಕೇಂದ್ರದಡಿಯಲ್ಲಿ ಅಭ್ಯತ್‌ಮಂಗಲ, ಕೂಡ್ಲೂರು ಚೆಟ್ಟಳ್ಳಿ, ನೆಲ್ಲಿಹುದಿಕೇರಿ ಗ್ರಾಮಗಳು ಸೇರಿವೆ.

ಹೆಬ್ಬಾಲೆ ಹೋಬಳಿ ಗ್ರಾಮ: ಹೆಬ್ಬಾಲೆ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ ಹೆಬ್ಬಾಲೆ, ಮರೂರು, ಹಳಗೋಟೆ, ೬ನೇ ಹೊಸಕೋಟೆ,

(ಮೊದಲ ಪುಟದಿಂದ) ಚಿನ್ನೇನಹಳ್ಳಿ, ಕಸಲಗೋಡು, ಹುಲುಸೆ, ರಾಮಪುರ ಗ್ರಾಮಗಳು ಒಳಪಡಲಿವೆ.

ಶಿರಂಗಾಲ ಕಂದಾಯ ಗ್ರಾಮ: ಶಿರಂಗಾಲ ಕಂದಾಯ ಗ್ರಾಮದಲ್ಲಿ ಶಿರಂಗಾಲ, ಮಣಜೂರು, ಚಿಕ್ಕನಾಯಕನ ಹಳ್ಳಿ, ಹೊಸಳ್ಳಿ, ನಲ್ಲೂರು ಗ್ರಾಮಗಳು ಸೇರಿವೆ.

ತೊರೆನೂರು ಗ್ರಾಮ: ತೊರೆನೂರು ಕಂದಾಯ ಗ್ರಾಮದಡಿ ತೊರೆನೂರು, ಚಿಕ್ಕಅಳುವಾರ, ದೊಡ್ಡಅಳುವಾರ, ಅರಿಸಿನಗುಪ್ಪೆ, ಅಳಿಲುಗುಪ್ಪೆ, ಬಸಿರುಗುಪ್ಪೆ, ಸಿದ್ದಲಿಂಗಪುರ, ಅಂದಾನಿಪುರ, ಗದ್ದೆಹೊಸಳ್ಳಿ ಗ್ರಾಮಗಳು ಒಳಪಡಲಿವೆ.

ಉಲುಗುಲಿ ಗ್ರಾಮ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು ಐದು ಕಂದಾಯ ಗ್ರಾಮಗಳು ಒಳಪಡಲಿವೆ. ಉಲುಗುಲಿ ಕಂದಾಯ ಗ್ರಾಮ ವೃತ್ತದಡಿಯಲ್ಲಿ ಉಲುಗುಲಿ ನಾರ್ಗಾಣೆ, ಸುಂಟಿಕೊಪ್ಪ ಪಟ್ಟಣ ಸೇರಿಕೊಂಡಿವೆ. ಕೆದಕಲ್ ಕಂದಾಯ ಗ್ರಾಮ: ಕೆದಕಲ್ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ ಕೆದಕಲ್ ನೇಗದಾಳು, ಹಾಲೇರಿ, ಹೊರೂರು, ಮೋದೂರು ಗ್ರಾಮಗಳು ಒಳಪಡಲಿವೆ.

ಕೊಡಗರಹಳ್ಳಿ ಕಂದಾಯ ಗ್ರಾಮ: ಕೊಡಗರಹಳ್ಳಿ ಕಂದಾಯ ಗ್ರಾಮದಲ್ಲಿ ಅಂದಗೋವೆ, ಕೊಡಗರಹಳ್ಳಿ, ಕಾನ್‌ಬೈಲ್, ಬೈಚನಹಳ್ಳಿ, ಹೆರೂರು, ಹಾದ್ರೆ, ಮಳೂರು ಸೇರ್ಪಡೆಗೊಂಡಿವೆ.

ಕಂಬಿಬಾಣೆ ಕಂದಾಯ ಗ್ರಾಮ: ಕಂಬಿಬಾಣೆ ಕಂದಾಯ ಗ್ರಾಮ ವ್ಯಾಪ್ತಿಗೆ ೭ನೇ ಹೊಸಕೋಟೆ, ಅತ್ತೂರು ನಲ್ಲೂರು, ನಾಕೂರು ಶಿರಂಗಾಲ ಗ್ರಾಮಗಳು ಒಳಪಡಲಿವೆ.

ಚೇರಳ ಶ್ರೀಮಂಗಲ ಗ್ರಾಮ: ಚೇರಳ ಶ್ರೀಮಂಗಲ ಕಂದಾಯ ಗ್ರಾಮ ವ್ಯಾಪ್ತಿಗೆ ಚೇರಳ ಶ್ರೀಮಂಗಲ, ಈರಳೆವಳಮುಡಿ ಗ್ರಾಮಗಳು ಸೇರ್ಪಡೆಗೊಳ್ಳಲಿವೆ ಎಂದು ಅಧಿಸೂಚನೆಯಲ್ಲಿ ಸಂಪೂರ್ಣ ಮಾಹಿತಿ ಒದಗಿಸಿದೆ.

ಪೂರ್ವದಲ್ಲಿ ಮೈಸೂರು ಜಿಲ್ಲೆಯ ಗಡಿಭಾಗ, ಪಶ್ಚಿಮದಲ್ಲಿ ಮಡಿಕೇರಿ ತಾಲೂಕು, ಉತ್ತರದಲ್ಲಿ ಸೋಮವಾರಪೇಟೆ ತಾಲೂಕು, ದಕ್ಷಿಣದಲ್ಲಿ ವೀರಾಜಪೇಟೆ ತಾಲೂಕು ಗಡಿಗುರುತು ಮಾಡಲಾಗಿದೆ.

ಸೋಮವಾರಪೇಟೆ ತಾಲೂಕು

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು ಹೋಬಳಿಗಳಿದ್ದು, ೨೧ ಕಂದಾಯ ಗ್ರಾಮಗಳನ್ನು ಒಳಗೊಂಡಿದೆ.

ಸೋಮವಾರಪೇಟೆ ಹೋಬಳಿಯಲ್ಲಿ ಹಾನಗಲ್ಲು, ಬೇಳೂರು, ಐಗೂರು, ಕಿರಗಂದೂರು, ನೇರುಗಳಲೆ, ಗಣಗೂರು, ಮಾದಾಪುರ, ಗರ್ವಾಲೆ, ಹರದೂರು ಸೇರಿದಂತೆ ಒಂಭತ್ತು ಕಂದಾಯ ಗ್ರಾಮಗಳಿವೆ.

ಶಾಂತಳ್ಳಿ ಹೋಬಳಿಯಲ್ಲಿ ಶಾಂತಳ್ಳಿ, ಕುಮಾರಳ್ಳಿ, ಕುಂದಳ್ಳಿ ತೋಳೂರು ಶೆಟ್ಟಳ್ಳಿ ಸೇರಿ ನಾಲ್ಕು ಕಂದಾಯ ಗ್ರಾಮಗಳಿವೆ. ಕೊಡ್ಲಿಪೇಟೆ ಹೋಬಳಿಯಲ್ಲಿ ಬೆಸೂರು, ಹಂಡ್ಲಿ, ದೊಡ್ಡಕೊಡ್ಲಿ, ಬೆಂಬಳೂರು ಸೇರಿ ನಾಲ್ಕು ಕಂದಾಯ ಗ್ರಾಮಗಳಿವೆ. ಶನಿವಾರಸಂತೆ ಹೋಬಳಿಯಲ್ಲಿ ದುಂಡಳ್ಳಿ, ನಿಡ್ತ, ಆಲೂರು, ಗೌಡಳ್ಳಿ ಸೇರಿ ನಾಲ್ಕು ಕಂದಾಯ ಗ್ರಾಮಗಳನ್ನು ಒಳಗೊಂಡಿದೆ.