ನಾಪೆÉÇÃಕ್ಲು, ಡಿ. ೩೦: ಸಂತೆ ದಿನವಾದ ಸೋಮವಾರ ನಗರದಲ್ಲಿ ವಾಹನಗಳ ಓಡಾಟದಿಂದ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಚಾಲಕರು ಪರದಾಡು ವಂತಾಯಿತು. ನಾಪೆÉÇÃಕ್ಲು ನಗರ ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ ಎಂಬ ಖ್ಯಾತಿಯನ್ನು ಗಳಿಸಿದ್ದು ಇಲ್ಲಿ ಬಸ್ ನಿಲ್ದಾಣ ಇಲ್ಲದೆ ನಗರದ ರಸ್ತೆಗಳನ್ನು ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿರುವುದರಿಂದ ಇಲ್ಲಿ ಟ್ರಾಫಿಕ್ ಜಾಮ್ ಮಾಮೂಲಿಯಾಗಿದೆ. ನಗರದಲ್ಲಿ ೧೫ ದಿನಕ್ಕೊಮ್ಮೆ ಆಬದಿ, ಈಬದಿ ಎಂದು ವಾಹನ ನಿಲುಗಡೆಗೆ ಅವಕಾಶವನ್ನು ಕಲ್ಪಿಸಿದ್ದರು. ನಗರದ ವ್ಯಾಪಾರಸ್ಥರು ತಮ್ಮ ವಾಹನಗಳನ್ನು ತಮ್ಮ ಅಂಗಡಿಗಳ ಮುಂದೆ ದಿನಗಟ್ಟಲೇ ನಿಲ್ಲಿಸುವುದರಿಂದ ಗ್ರಾಮಗಳಿಂದ ಬರುವ ಸಾರ್ವಜನಿಕರಿಗೆ ನಿಲುಗಡೆಗೆ ಅವಕಾಶ ಇಲ್ಲದೆ ತೊಂದರೆಯಾಗಿದೆ.

ಬಸ್‌ಗಳು ಗ್ರಾಮ ಪಂಚಾಯಿತಿಯ ಎದುರಿನಲ್ಲಿ ಗಂಟೆಗಟ್ಟಲೇ ನಿಲ್ಲುತ್ತಿರುವುದರಿಂದ ಸಮಸ್ಯೆಯಾಗಿದೆ. ಇದರಿಂದ ಇಲ್ಲಿ ಜನರು ಅಂತರವನ್ನು ಕಾಯ್ದುಕೊಳ್ಳದೆ ನಗರದಲ್ಲಿ ನಡೆದಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಟ್ರಾಫಿಕ್ ನಿಯಂತ್ರಿಸಲು ಒಬ್ಬರು ಪೇದೆ ಮತ್ತು ಇಬ್ಬರು ಹೋಂ ಗಾರ್ಡ್ಗಳು ಇದ್ದರು ನಿಯಂತ್ರಿಸಲು ಅಸಾಧ್ಯ. ಕೊಡವ ಸಮಾಜ ರಸ್ತೆಯಲ್ಲಿ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸುವುದರಿಂದ ಸಮಾರಂಭಕ್ಕೆ ಹೋಗುವವರಿಗೂ ತೊಂದರೆ ಯಾಗಿದೆ. ಠಾಣಾಧಿಕಾರಿಯವರು ಸಂತೆ ದಿನ ಅವರೇ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿರುವುದು ಕಂಡು ಬಂತು. ಆದುದರಿಂದ ಕೂಡಲೇ ನಗರಕ್ಕೆ ಕನಿಷ್ಟ ಮೂವರು ಪೊಲೀಸರು ಮತ್ತು ಇಬ್ಬರು ಹೋಂ ಗಾರ್ಡ್ಗಳನ್ನು ಸಂತೆ ದಿನ ನಿಯೋಜಿಸಬೇಕೆಂದು ಸಾರ್ವಜನಿಕರು ಪೊಲೀಸ್ ಠಾಣಾಧಿಕಾರಿಯವರನ್ನು ಕೋರಿದ್ದಾರೆ.

- ದುಗ್ಗಳ