ಸೋಮವಾರಪೇಟೆ, ಡಿ. ೩೦: ವರ್ಷಾಚರಣೆ ಅಂಗವಾಗಿ ತಾಲೂಕಿನ ಹೋಂಸ್ಟೇ, ರೆಸಾರ್ಟ್ಗಳಿಗೆ ಪ್ರವಾಸಿಗರು ಆಗಮಿಸಲಿದ್ದು, ಮಾಲೀಕರು ಕಡ್ಡಾಯವಾಗಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಡಿವೈಎಸ್‌ಪಿ ಶೈಲೇಂದ್ರ ಹೇಳಿದರು.

ಪೊಲೀಸ್ ಇಲಾಖೆಯ ವತಿಯಿಂದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಹೋಂಸ್ಟೇ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು. ಪ್ರತಿಯೊಬ್ಬರ ವಿಳಾಸವನ್ನು ಬರೆದಿಡಬೇಕು. ಮೋಜು ಮಸ್ತಿಗೆ ಅವಕಾಶ ಮಾಡಿಕೊಡಬಾರದು. ರಾತ್ರಿ ಹತ್ತು ಗಂಟೆಯ ನಂತರ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಹೇಳಿದರು. ವೇದಿಕೆಯಲ್ಲಿ ಸರ್ಕಲ್‌ಇನ್ಸ್ಪೆಕ್ಟರ್ ಮಹೇಶ್, ಠಾಣಾಧಿಕಾರಿ ಶ್ರೀಧರ್ ಇದ್ದರು.ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಹೇಳಿದರು. ವೇದಿಕೆಯಲ್ಲಿ ಸರ್ಕಲ್‌ಇನ್ಸ್ಪೆಕ್ಟರ್ ಮಹೇಶ್, ಠಾಣಾಧಿಕಾರಿ ಶ್ರೀಧರ್ ಇದ್ದರು.