ಮಡಿಕೇರಿ, ಡಿ. ೩೦: ನಗರದ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ೫ನೇ ದಿನದ ಪೂಜಾ ವಿಧಿವಿಧಾನ ಸುಸೂತ್ರವಾಗಿ ನೆರವೇರಿತು. ಬೆಳಿಗ್ಗೆ ೬ ಗಂಟೆಯಿAದಲೇ ಅಂಕುರ ಪೂಜೆ, ಗಣಪತಿ ಹೋಮ, ರುದ್ರಹೋಮ ಸಂಕಲ್ಪ, ರುದ್ರಹೋಮ ಪೂರ್ಣಾಹುತಿ, ಅನುಜ್ಞಾಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಪರಿವಾರ ಪ್ರಾರ್ಥನೆ ನೆರವೇರಿತು. ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಸಂಜೆ ೭ ರಿಂದ ಕುಂಭೇಶ ಕರ್ಕರಿ ಕಲಶಪೂಜೆ, ಆಧಿವಾಸಹೋಮ, ಪರಿಕಲಶ ಹೋಮ, ಬ್ರಹ್ಮಕಲಶ ಪೂಜೆ, ಕಲಶಾಧಿವಾಸ ನೆರವೇರಿತು.

ಸುಮನ್, ವೀಣಾ ಅಚ್ಚಯ್ಯ ಭೇಟಿ

ಈ ಹಿಂದೆ ಕೊಡಗು ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಡಾ. ಸುಮನ್.ಡಿ ಪಣ್ಣೇಕರ್ ಹಾಗೂ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರುಗಳು ಇಂದು ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಮಂಡಲ ಪೂಜೋತ್ಸವ ಕಾರ್ಯದಲ್ಲಿ ಪಾಲ್ಗೊಂಡರು. ದೇವಾಲಯ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ಹಾಗೂ ಸದಸ್ಯರು ಹಾಜರಿದ್ದರು.

ಇಂದಿನ ಪೂಜಾ ಕಾರ್ಯಗಳು

ತಾ.೩೧ ರಂದು (ಇಂದು) ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೯.೧೨ರ ಮಕರ ಲಗ್ನದಲ್ಲಿ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ೧೧.೩೨ರ ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ೧೨.೩೦ಕ್ಕೆ ಮಹಾಪೂಜೆ ನಡೆಯಲಿದೆ.

ವಾರ್ಷಿಕ ಪೂಜೆಗಳ ನಿರ್ಧಾರ

ಈ ನಡುವೆ ಕ್ಷೇತ್ರ ತಂತ್ರಿಯವರ ಸಮ್ಮುಖದಲ್ಲಿ ದೇವಾಲಯ ಪ್ರಮುಖರು ಸಭೆ ಸೇರಿ ನಿತ್ಯ ಪೂಜೆಯಲ್ಲದೆ ವರ್ಷಂಪ್ರತಿ ಕೈಗೊಳ್ಳಬೇಕಾದ ವಿಶೇಷ ಪೂಜೆಗಳ ಕುರಿತು ನಿರ್ಧರಿಸಿದರು. ಸುಬ್ರಹ್ಮಣ್ಯ ಷಷ್ಠಿ ಪ್ರತಿವರ್ಷದಂತೆ ನಡೆಯುತ್ತದೆ. ಆ ದಿನ ಸುಬ್ರಹ್ಮಣ್ಯ ಮೂರ್ತಿಗೆ ಪಂಚಾಮೃತಾಭಿಷೇಕ ನೆರವೇರಿಸ ಬೇಕು. ಅನ್ನಸಂತರ್ಪಣೆಯನ್ನು ಮುಂದುವರಿಸಬೇಕು. ವಾರ್ಷಿಕ ಗಣೇಶ ಚತುರ್ಥಿ ದಿನ ಗಣಹೋಮ ನಡೆಸಬೇಕು. ದೇವಾಲಯ ಪ್ರತಿಷ್ಠಾಪನಾ ವಾರ್ಷಿಕ ದಿನದಂದು ಗಣಹೋಮ ರುದ್ರ ಹೋಮ ಅಥವಾ ಶತರುದ್ರಾಭಿಷೇಕ ನಡೆಸಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಬೇಕು. ಪ್ರತಿವರ್ಷ ಚಾಂದ್ರಮಾನ ಯುಗಾದಿಯಂದು ಪ್ರತಿಷ್ಠಾಪನಾ ದಿನವಾಗಿದ್ದ ಆ ದಿನ ಈ ಕಾರ್ಯಕ್ರಮಗಳನ್ನು ನಡೆಸಲಾಗುವದು. ಅಲ್ಲದೆ ತಿಂಗಳಿಗೆ ಒಂದು ಶುಕ್ರವಾರ ಸಂಜೆ ವೇಳೆ ದುರ್ಗಾ ನಮಸ್ಕಾರ ಪೂಜೆ ನಡೆಸಬೇಕು ಎಂದು ನಿರ್ಧಾರ ಕೈಗೊಳ್ಳಲಾಯಿತು. ಅಲ್ಲದೆ, ನಿತ್ಯಪೂಜೆಯಲ್ಲಿ ನಡೆಸಬೇಕಾದ ಅನ್ನನೈವೇದ್ಯಗಳ ಬಗ್ಗೆ ಈಗ ಇರುವ ಕ್ರಮದೊಂದಿಗೆ ಸುಧಾರಿತ ರೀತಿಯಲ್ಲಿ ಮುಂದುವರಿಸುವAತೆ ನಿರ್ಧರಿಸಲಾಯಿತು.