ಮಡಿಕೇರಿ, ಡಿ. ೩೦: ಗ್ರಾ.ಪಂ. ಚುನಾವಣಾ ಫಲಿತಾಂಶದ ಕುರಿತಾಗಿ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಂತಿವೆ.
ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್, ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಹಾಗೂ ಎಸ್‌ಡಿಪಿಐ ಅಧ್ಯಕ್ಷ ಮನ್ಸೂರ್ ಅವರುಗಳು ಫಲಿತಾಂಶವನ್ನು ತಮ್ಮದೇ ಧಾಟಿಯಲ್ಲಿ ವಿಶ್ಲೇಷಿಸಿದ್ದು, ಹೀಗಿದೆ.
ಬಿಜೆಪಿಗೆ ಶೇ. ೮೦ ರಷ್ಟು ಗೆಲುವು: ರಾಬಿನ್
ಗ್ರಾ.ಪಂ. ಚುನಾವಣಾ ಫಲಿತಾಂಶದೊAದಿಗೆ ಜಿಲ್ಲೆಯ ಜನತೆ ಬಿಜೆಪಿಯೊಂದಿಗಿದ್ದಾರೆ ಎಂಬದು ಮತ್ತೊಮ್ಮೆ ಸಾಬೀತಾಗಿದೆ. ಫಲಿತಾಂಶ ಹೆಚ್ಚಿನ ಸಂತಸ ತಂದಿದ್ದು, ಇದಕ್ಕೆ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರ ಸಹಕಾರ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹೇಳಿದರು.
ಶೇ. ೮೦ ರಷ್ಟು ಸ್ಥಾನಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಸರಕಾರದ ಸಾಧನೆಗಳ ಬಗ್ಗೆ ಜನರು ಮೆಚ್ಚುಗೆ ತೋರುತ್ತಿರುವುದು ಇದರಿಂದ ಕಂಡುಬAದಿದೆ. ನಿಖರವಾದ ಮಾಹಿತಿಯನ್ನು ನಂತರದಲ್ಲಿ ನೀಡುವುದಾಗಿ ರಾಬಿನ್ ದೇವಯ್ಯ ತಿಳಿಸಿದರು.
ಹಣ ಬಲದಿಂದ ಬಿಜೆಪಿ ಮೇಲುಗೈ: ಮಂಜುನಾಥ್
ಬಿಜೆಪಿ ಪ್ರಸ್ತುತ ಅಧಿಕಾರದಲ್ಲಿದ್ದು ಕೊರೊನಾ ಹೆಸರಲ್ಲಿ ಸಾಕಷ್ಟು ಹಣ ಮಾಡಿದೆ. ಈ ಹಣ ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಇದರಿಂದಾಗಿ ಕಾಂಗ್ರೆಸ್‌ಗಿAತ ಬಿಜೆಪಿ ಸ್ವಲ್ಪಮಟ್ಟಿಗೆ ಮೇಲುಗೈ ಸಾಧಿಸಿದೆ ಎಂಬದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಅವರ ಆರೋಪವಾಗಿದೆ. ಆದರೂ ಕಾಂಗ್ರೆಸ್‌ಗೆ ಸುಮಾರು ೪೦೦ ರಷ್ಟು ಸ್ಥಾನ ಲಭ್ಯವಾಗಿದೆ. ಸದ್ಯಕ್ಕೆ ಇದು ಅಧಿಕೃತವಲ್ಲ ಎಂದು ಹೇಳಿದ ಅವರು, ಫಲಿತಾಂಶದ ಕುರಿತಾಗಿ ಪಕ್ಷ ಕಾರಣಗಳ ಬಗ್ಗೆ ವಿಮರ್ಶೆ ನಡೆಸಲಿದೆ. ಮುಂದೆ ಬಿಜೆಪಿಯೇತರರನ್ನು ಒಗ್ಗೂಡಿಸುವ ಪ್ರಯತ್ನವನ್ನೂ ಮಾಡಲು ಚಿಂತನೆ ನಡೆಸಿದೆ ಎಂದು ಅವರು ನುಡಿದರು.
ಫಲಿತಾಂಶ ತೃಪ್ತಿ ತಂದಿದೆ: ಗಣೇಶ್
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಾಧನೆ ಉತ್ತಮವಾಗಿದ್ದು, ಫಲಿತಾಂಶ ತೃಪ್ತಿ ತಂದಿದೆ. ಪಕ್ಷ ನಿಖರವಾದ ಮಾಹಿತಿಯನ್ನು ನಂತರದಲ್ಲಿ ನೀಡುವುದಾಗಿ ರಾಬಿನ್ ದೇವಯ್ಯ ತಿಳಿಸಿದರು.
ಹಣ ಬಲದಿಂದ ಬಿಜೆಪಿ ಮೇಲುಗೈ: ಮಂಜುನಾಥ್
ಬಿಜೆಪಿ ಪ್ರಸ್ತುತ ಅಧಿಕಾರದಲ್ಲಿದ್ದು ಕೊರೊನಾ ಹೆಸರಲ್ಲಿ ಸಾಕಷ್ಟು ಹಣ ಮಾಡಿದೆ. ಈ ಹಣ ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಇದರಿಂದಾಗಿ ಕಾಂಗ್ರೆಸ್‌ಗಿAತ ಬಿಜೆಪಿ ಸ್ವಲ್ಪಮಟ್ಟಿಗೆ ಮೇಲುಗೈ ಸಾಧಿಸಿದೆ ಎಂಬದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಅವರ ಆರೋಪವಾಗಿದೆ. ಆದರೂ ಕಾಂಗ್ರೆಸ್‌ಗೆ ಸುಮಾರು ೪೦೦ ರಷ್ಟು ಸ್ಥಾನ ಲಭ್ಯವಾಗಿದೆ. ಸದ್ಯಕ್ಕೆ ಇದು ಅಧಿಕೃತವಲ್ಲ ಎಂದು ಹೇಳಿದ ಅವರು, ಫಲಿತಾಂಶದ ಕುರಿತಾಗಿ ಪಕ್ಷ ಕಾರಣಗಳ ಬಗ್ಗೆ ವಿಮರ್ಶೆ ನಡೆಸಲಿದೆ. ಮುಂದೆ ಬಿಜೆಪಿಯೇತರರನ್ನು ಒಗ್ಗೂಡಿಸುವ ಪ್ರಯತ್ನವನ್ನೂ ಮಾಡಲು ಚಿಂತನೆ ನಡೆಸಿದೆ ಎಂದು ಅವರು ನುಡಿದರು.
ಫಲಿತಾಂಶ ತೃಪ್ತಿ ತಂದಿದೆ: ಗಣೇಶ್
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಾಧನೆ ಉತ್ತಮವಾಗಿದ್ದು, ಫಲಿತಾಂಶ ತೃಪ್ತಿ ತಂದಿದೆ. ಪಕ್ಷ ಈ ಬಾರಿ ೧೫೦ ರಿಂದ ೨೦೦ ಸ್ಥಾನದ ನಿರೀಕ್ಷೆ ಮಾಡಿತ್ತು. ಇದರಲ್ಲಿ ಸಾಕಷ್ಟು ಸ್ಥಾನಗಳು ಪಕ್ಷಕ್ಕೆ ಲಭಿಸಿದೆ. ಅದರಲ್ಲೂ ಹೊಸ ಮುಖಗಳು ಗೆಲುವು ಸಾಧಿಸಿರುವುದು ಸಂತಸ ಮೂಡಿಸಿದೆ ಎಂದು ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ಹೇಳಿದರು.
ಇನ್ನಷ್ಟು ಸ್ಥಾನ ಸಿಗಬೇಕಿತ್ತಾದರೂ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿರುವುದರಿಂದ ಆ ಪಕ್ಷಕ್ಕೆ ಸಹಜವಾಗಿ ಹೆಚ್ಚು ಬೆಂಬಲ ದೊರೆತಿದೆ. ಆದರೆ ಬಿಜೆಪಿ ತಮ್ಮ ಬೆಂಬಲಿಗರಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದೆ ಎಂದು ಅವರು ಆಪಾದಿಸಿದರು.
ಜನ ಬೆಂಬಲ ದೊರೆತಿದೆ: ಮನ್ಸೂರ್
ಎಸ್‌ಡಿಪಿಐ ಪಕ್ಷ ಈ ಚುನಾವಣೆಗೆ ಸೀಮಿತ ಅಭ್ಯರ್ಥಿಗಳನ್ನು ಮಾತ್ರ ಸ್ಪರ್ಧೆಗೆ ಬೆಂಬಲ ನೀಡಿ ಕಣಕ್ಕೆ ಇಳಿಸಿತ್ತು. ಇದರಲ್ಲಿ ಉತ್ತಮ ಫಲಿತಾಂಶವೂ ಬಂದಿದ್ದು ಜನ ಬೆಂಬಲ ಸ್ಪಷ್ಟವಾಗಿದೆ. ಮುಂದೆ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲೂ ಎಸ್‌ಡಿಪಿಐ ಸ್ಪರ್ಧಿಸಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮನ್ಸೂರ್ ತಿಳಿಸಿದರು.