ಕುಶಾಲನಗರ, ಡಿ. ೩೦: ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆಯಾಗಿರುವ ಕುಶಾಲನಗರ ತಾಲೂಕನ್ನು ಅಂತಿಮ ಅಧಿಸೂಚನೆ ಹೊರಡಿಸಲು ಸರಕಾರ ಆದೇಶ ಹೊರಡಿಸಿದೆ ಎಂದು ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ತಿಳಿಸಿದ್ದಾರೆ. ಅವರು ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಗ್ರಾಪಂ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಅಧಿಸೂಚನೆ ಹೊರಡಿಸಲು ಅಡ್ಡಿಯುಂಟಾಗಿದೆ. ನವೆಂಬರ್ ೧೯ ರಂದು ಸರಕಾರ ದಿಂದ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಗ್ರಾಮಗಳನ್ನು ಸೇರ್ಪಡೆ ಮಾಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ರಂಜನ್ ಮಾಹಿತಿ ನೀಡಿದರು.ಅಧಿಸೂಚನೆಗೆ ಯಾವುದೇ ಆಕ್ಷೇಪಗಳು ಸ್ವೀಕೃತವಾಗದ ಕಾರಣ ನಿಯಮಾನುಸಾರ ಅಂತಿಮ ಅಧಿಸೂಚನೆ ಹೊರಡಿಸಬೇಕಾದರೂ ಭಾರತ ಜನಗಣತಿ ನಿರ್ದೇಶನಾಲಯದ ಹಿನ್ನೆಲೆಯಲ್ಲಿ ಜನವರಿ ೧ ರಿಂದ ಅನ್ವಯವಾಗುವಂತೆ ಜನಗಣತಿ ಕಾರ್ಯ ಪೂರ್ಣಗೊಳ್ಳುವ ತನಕ ಯಾವುದೇ ಆಡಳಿತಾತ್ಮಕ ಗಡಿ ಬದಲಾಯಿಸಲು ಅವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ರಂಜನ್ ಅವರು ಸರಕಾರದ ಅಧೀನ ಕಾರ್ಯದರ್ಶಿ ಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ತಕ್ಷಣ ಆದೇಶ ಹೊರಡಿಸು ವಂತೆ ಮನವಿ ಮಾಡಿ ದರು. ಮುಂದುವರೆದು ಮಾತನಾಡಿದ ಶಾಸಕರು ಈ ತಿಂಗಳ ೩೧ ರೊಳಗೆ ಕುಶಾಲನಗರ ನೂತನ ತಾಲೂಕಿನ ಅಂತಿಮ ಅಧಿಸೂಚನೆ ರಚನೆಯಾಗು ವುದರೊಂದಿಗೆ ಎಲ್ಲಾ ಕಾರ್ಯಗಳು ಕೆಲವೇ ದಿನಗಳಲ್ಲಿ ಪೂರ್ಣ ಗೊಳ್ಳಲಿದೆ ಎಂದು ತಿಳಿಸಿದರು. ಈ ನಡುವೆ ಸರಕಾರದ ಕಂದಾಯ ಇಲಾಖೆಯ ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೂ ಪತ್ರ ಬರೆದಿದ್ದು ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಲು ಪತ್ರ ಬರೆದಿರುವ ಬಗ್ಗೆ ತಿಳಿದುಬಂದಿದೆ.