ಗೋಣಿಕೊಪ್ಪ ವರದಿ, ಡಿ. ೩೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋಟ್ಸ್ ಹಾಸ್ಟೆಲ್ ವತಿಯಿಂದ ನಡೆಯುತ್ತಿರುವ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ೬ ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿವೆ.
ಬುಧವಾರ ನಡೆದ ಸೆಮಿಫೈನಲ್ ನಲ್ಲಿ ಗೆಲುವು ಪಡೆದ ೧೫ ವರ್ಷ ದೊಳಗಿನ ಬಾಲಕಿಯರಲ್ಲಿ ಜಾಂಬ್ರೋನೀಸ್, ಬ್ಲಾಸ್ರ‍್ಸ್, ಬಾಲಕರಲ್ಲಿ ಡ್ರಾö್ಯಗನ್, ಫ್ಲೆöÊಬಾಯ್ಸ್, ೧೯ ವರ್ಷದೊಳಗಿನ ಬಾಲಕರಲ್ಲಿ ರೆಟಲೇಟರ್ಸ್ ಹಾಗೂ ಸ್ನಿಪರ್ಸ್ ತಂಡಗಳು ಫೈನಲ್‌ಗೆ ಪ್ರವೇಶ ಪಡೆದವು. ಫೈನಲ್ ಪಂದ್ಯಗಳು ಗುರುವಾರ ಬೆಳಿಗ್ಗೆ ೧೦ ಗಂಟೆಯಿAದ ನಡೆಯಲಿದೆ.
ಸೆಮಿಫೈನಲ್ ಫಲಿತಾಂಶ
೧೯ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರೆಟಲೇಟರ್ಸ್ ತಂಡವು ವಿಜರ‍್ಡ್÷್ಸ ವಿರುದ್ಧ ಶೂಟೌಟ್‌ನಲ್ಲಿ ೮-೭ ಗೋಲುಗಳ ಜಯ ಸಾಧಿಸಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ೩-೩ ಗೋಲುಗಳ ಟೈ ಫಲಿತಾಂಶ ನೀಡಿತು. ಶೂಟೌಟ್‌ನಲ್ಲಿ ರೆಟಲೇಟರ್ಸ್ ತಂಡವು ೧ ಗೋಲು ಗಳಿಂದ ಮಣಿಸಿತು. ರೆಟಲೇಟರ್ಸ್ ತಂಡದ ಪೂವಣ್ಣ, ಸಪನ್ ೨, ಬೋಪಣ್ಣ, ದಿಶಾ, ತರುಣ್, ಪ್ರತ್ವಿ, ಪೂವಣ್ಣ, ವಿಜರ‍್ಡ್÷್ಸ ತಂಡದ ವಿಶ್ವಾಸ್ ೨, ಗ್ಯಾನ್ ೩, ಭವಿನ್ ೨ ಗೋಲು ಹೊಡೆದರು. ಸ್ನಿಪರ್ಸ್ ತಂಡವು ವೈಪರ್ಸ್ ವಿರುದ್ಧ ೧-೦ ಗೋಲುಗಳ ಗೆಲುವು ಪಡೆಯಿತು. ಸ್ನಿಪರ್ಸ್ ತಂಡದ ಪುನಿತ್ ಏಕೈಕ ಗೋಲು ಹೊಡೆದರು.
೧೫ ವರ್ಷದೊಳಗಿನ ಬಾಲಕಿ ಯರ ವಿಭಾಗದಲ್ಲಿ ಜಾಂಬ್ರೋನೀಸ್ ತಂಡವು ಸ್ರೆö್ಟöÊಕರ್ಸ್ ತಂಡವನ್ನು ೫-೨ ಗೋಲುಗಳಿಂದ ಮಣಿಸಿತು. ಜಾಂಬ್ರೋನೀಸ್ ತಂಡದ ನಿಸರ್ಗ ೩, ಸುರಕ್ಷಾ, ಶಯ, ಸ್ಟೆçöÊಕರ್ಸ್ ತಂಡದ ದೇಚಮ್ಮ, ಸಿದ್ದಗಂಗಾ ಗೋಲು ಹೊಡೆದರು. ಇದರೊಂದಿಗೆ ಬಾಲಕಿಯರ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಬ್ಲಾಸ್ರ‍್ಸ್ ತಂಡವು ನೇರವಾಗಿ ಫೈನಲ್ ಪ್ರವೇಶಿಸಿತು.
೧೫ ವರ್ಷದ ಬಾಲಕರಲ್ಲಿ ಡ್ರಾö್ಯಗನ್ ತಂಡವು ವಾರಿಯರ್ಸ್ ವಿರುದ್ಧ ೩-೨ ಗೋಲುಗಳಿಂದ ಜಯಗಳಿಸಿತು. ಡ್ರಾö್ಯಗನ್ ತಂಡದ ಸಿದ್ದಾಂತ್, ನಾಚಪ್ಪ, ಧನುಶ್, ವಾರಿಯರ್ಸ್ ತಂಡದ ಆಕಾಶ್ ಬಿದ್ದಪ್ಪ, ಪೂಣಚ್ಚ ಗೋಲು ಹೊಡೆದರು. ಫ್ಲೆöÊಬಾಯ್ಸ್ ತಂಡವು ಲೆರ‍್ಡ್÷್ಸ ತಂಡದ ವಿರುದ್ಧ ೩-೧ ಗೋಲುಗಳಿಂದ ಜಯಿಸಿತು. ಫ್ಲೆöÊಬಾಯ್ಸ್ ತಂಡದ ನಂಜುAಡ, ಸಾತ್ವಿಕ್, ದೃವ, ಲೆಪರ್ಡ್ಸ್ನ ಗೌರವ್ ಗೋಲು ಬಾರಿಸಿದರು.