ಮಡಿಕೇರಿ, ಡಿ. ೨೮: ಜಿಲ್ಲೆಯಲ್ಲಿ ಕೋವಿಡ್ ಸಂಬAಧ ೩ ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ ೭೮ ಕ್ಕೇರಿದೆ. ವೀರಾಜಪೇಟೆ ಕುರ್ಚಿ ಸಮೀಪದ ಬೀರುಗ ಗ್ರಾಮದ ೩೫ ವರ್ಷದ ಮಹಿಳೆ, ಬೆಳ್ಳೂರಿನ ೭೮ ವರ್ಷದ ಪುರುಷ, ಮಡಿಕೇರಿ ಎಫ್.ಎಂ.ಸಿ. ಕಾಲೇಜು ಹಿಂಭಾಗದ ನಿವಾಸಿ ೬೮ ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ. ೨೮ ರಂದು ಹೊಸದಾಗಿ ೨೧ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೧೧,೭೫೬ ಮಂದಿಯ ಗಂಟಲು ದ್ರವ ಮಾದರಿ ಹೊಸ ೨೧ ಪ್ರಕರಣಗಳು ೩ ಸಾವು(ಮೊದಲ ಪುಟದಿಂದ) ಪರೀಕ್ಷಿಸಿದ್ದು, ೫,೭೩೨ ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ೫,೫೮೬ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೭೮ ಮಂದಿ ೬೮ ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ೨೪ ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, ೪೪ ಮಂದಿ ಹೋಮ್ ಐಸೋಲೇಷನ್‌ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ ೬೯ ನಿಯಂತ್ರಿತ ವಲಯಗಳಿವೆ.