ವೀರಾಜಪೇಟೆ, ಡಿ. ೨೮: ಆರ್ಮಿ ಸರ್ವೀಸ್ ಕಾರ್ಪ್ಸ್ (ಂSಅ) ಆಟಗಾರರಾದ ಕೂತಂಡ ಪೂಣಚ್ಚ, ಬೊಳೆಯಪಂಡ ಕಾರ್ಯಪ್ಪ ಅವರುಗಳು ಆಟವನ್ನು ವೀಕ್ಷಿಸುತ್ತಿದು ನಾನೂ ಅವರಂತೆ ಆಡಬೇಕು ಎಂಬ ಕನಸು ನನಸಾಗಿದೆ ಎಂದು ಹಾಕಿ ಪಟು ಸುನಿಲ್ ನುಡಿದರು.
ಎರಡು ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಕ್ರೀಡಾಕೂಟ, ಏಷ್ಯಾಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ ಹಾಕಿಯಂತಹ ಹಲವು ಪ್ರಮುಖ ಪಂದ್ಯಾವಳಿಗಳಲ್ಲಿ ಭಾರತವನ್ನು ೨೬೮ ಅಂತರರಾಷ್ಟಿçÃಯ ಪಂದ್ಯಗಳಲ್ಲಿ ಪ್ರತಿನಿಧಿಸಿದ ‘ಇಂಡಿಯನ್ ಬೋಲ್ಟ್’ ಖ್ಯಾತಿಯ ಎಸ್.ವಿ. ಸುನಿಲ್ ಆಚಾರ್ಯ ಅವರು ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರು ಗ್ರಾಮದ ಕೋಟೆಕೊಪ್ಪದಲ್ಲಿ ಕೊಡಗಿನ (ಂSಅ) ಹಾಕಿ ಆಟಗಾರರ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ೧೯೮೭ರಲ್ಲಿ ಕೊಡಗಿನ ೧೧ ಯುವಕರು ಕರ್ನಲ್ ಎ.ಸಿ. ಗಣಪತಿ ಅವರ ಮಾರ್ಗದರ್ಶನದಲ್ಲಿ ಆರ್ಮಿ ಸರ್ವಿಸ್ ಕಾರ್ಪ್ಸ್ನ ಹಾಕಿ ತಂಡಕ್ಕೆ ಆಯ್ಕೆಯಾಗಿ ಹೊಸ ಅಧ್ಯಾಯವನ್ನೇ ಸೃಷ್ಟಿ ಮಾಡಿದರು.
ಈ ತಂಡವು ದೇಶಿಯ ಹಾಕಿ ಕ್ರೀಡಾಕೂಟಗಳಾದ ನೆಹರು ಕಪ್, ಸುರ್ಜಿತ್ ಕಪ್, ಎಂ.ಸಿ.ಸಿ ಕಪ್ ಮತ್ತು ಇತರ ಪಂದ್ಯಾಟದಲ್ಲಿ ಭಾಗವಹಿಸಿ ತನ್ನ ಉತ್ತಮ ಪ್ರದರ್ಶನದೊಂದಿಗೆ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿತು.
ಸೇವೆಯಿಂದ ನಿವೃತ್ತಿ ಹೊಂದಿದ್ದರೂ ಹಾಕಿ ಕ್ರೀಡೆಯ ಮೇಲಿರುವ ಪ್ರೀತಿಯಿಂದ ಇಂದಿಗೂ ಹಾಕಿ ಕ್ರೀಡೆಗೆ ಸೇವೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಇವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಮಂದಿ ತರುಣರು ರಾಜ್ಯ, ರಾಷ್ಟç ತಂಡದಲ್ಲಿ ಸ್ಥಾನಗಳನ್ನು ಪಡೆದು ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.
‘ಂSಅ’ ಹಾಕಿ ಕುಟುಂಬದ ಸದಸ್ಯರನ್ನು ಪರಿಚಯಿಸುವ ನಿಟ್ಟಿನಲ್ಲಿ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದು ಪ್ರಮುಖ ಹಾಕಿ ಆಟಗಾರಲ್ಲಿ ಒಬ್ಬರಾದ ಕೂತಂಡ ಪೂಣಚ್ಚ ರಾಷ್ಟç ತಂಡವನ್ನು ಪ್ರತಿನಿಧಿಸಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಓಮಾನ್ ರಾಷ್ಟçದ ಹಾಕಿ ತರಬೇತುದಾರರಾಗಿ ಜನಪ್ರಿಯರಾಗಿ ದ್ದಾರೆ. ವೀರಾಜಪೇಟೆ ಆರ್ಜಿ ಗ್ರಾಮದ ನಿವಾಸಿ ಬೊಳೆಯಪಂಡ ಕಾರ್ಯಪ್ಪ ಭಾರತ ಜೂನಿರ‍್ಸ್ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಯಿಮಂಡ ಕಿರಣ್ ರಾಷ್ಟೀಯ ಮಟ್ಟದಲ್ಲಿ ಹಾಕಿ ತೀರ್ಪುಗಾರರಾಗಿ ಸೇವೆಸಲ್ಲಿಸುತ್ತಿದ್ದಾರೆ. ಕೋಡಿಮಣಿಯಂಡ ಗಣಪತಿ ಕೊಡಗಿನಾದ್ಯಂತ ನಡೆಯುವ ಹಾಕಿ ಪಂದ್ಯಾಟಕ್ಕೆ ರಾಜ್ಯ ತೀರ್ಪುಗಾರರಾಗಿ ಸೇವೆ ಸಲ್ಲಿಸುತಿದ್ದಾರೆ.
ಕಾರ್ಯಕ್ರಮದಲ್ಲಿ ಬಿ.ಎಂ. ಗಣೇಶ್, ಕೋಡಿರ ರೋಷನ್ ಬೆಳ್ಯಪ್ಪ, ಸುನಿಲ್, ಕೋಣೆರಿರ ಕುಟ್ಟಪ್ಪ, ಗಣೇಶ್ ಸೋಮಯ್ಯ, ಅಂಜಪರವAಡ ದೀಪಕ್ ಮತ್ತು ಸಿ.ಪಿ. ತಿಮ್ಮಯ್ಯ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.