ಗೋಣಿಕೊಪ್ಪ ವರದಿ, ಡಿ. ೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ಸ್ಪೋಟ್ಸ್ ಹಾಸ್ಟೆಲ್ ವತಿಯಿಂದ ಆರಂಭಗೊAಡಿರುವ ೧೯ ವಯೋಮಿತಿಯ ಬಾಲಕರ, ೧೫ ವಯೋಮಿತಿಯ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ೬ ತಂಡಗಳು ಜಯಗಳಿಸಿದ್ದು, ೧ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.

೧೯ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ವಿಜಾರ್ಡ್ ತಂಡವು ೫-೦ ಗೋಲುಗಳಿಂದ ವೈಪರ್ಸ್ ತಂಡವನ್ನು ಮಣಿಸಿತು. ವಿಜೇತ ತಂಡದ ವಿಶ್ವಾಸ್ ೩, ನಿಶಾಖ್, ಮೌರ್ಯ ತಲಾ ಒಂದೊAದು ಗೋಲು ಹೊಡೆದರು.

ಸ್ನಿಪರ್ಸ್ ತಂಡವು ರಿಟಾಲಿಯೇಟರ್ಸ್ ತಂಡದ ವಿರುದ್ಧ ೧-೦ ಗೋಲುಗಳಿಂದ ಜಯಿಸಿತು. ಸ್ನಿಪರ್ಸ್ ಪರ ಪ್ರತಿಕ್ ಪೂವಣ್ಣ ಏಕೈಕ ಗೋಲು ಹೊಡೆದು ಗೆಲುವಿನ ರೂವಾರಿಯಾದರು.

೧೫ ವರ್ಷದೊಳಗಿನ ಬಾಲಕಿಯರಲ್ಲಿ ಸ್ಟೆçöÊಕರ್ಸ್ ಹಾಗೂ ಜಾಂಬ್ರೋನಿಸ್ ತಂಡಗಳ ನಡುವಿನ ಪಂದ್ಯ ೧-೧ ಡ್ರಾದಲ್ಲಿ ಅಂತ್ಯವಾಯಿತು. ಸ್ಟೆçöÊಕರ್ಸ್ ತಂಡದ ಕಾವ್ಯಶ್ರೀ, ಜಾಂಬ್ರೋನಿಸ್ ಆಟಗಾರ್ತಿ ಶಯಾ ಗೋಲು ಹೊಡೆದರು.ಬ್ಲಾಸ್ರ‍್ಸ್ ತಂಡವು ಜಾಂಬ್ರೋನಿಸ್ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ಬ್ಲಾಸ್ರ‍್ಸ್ ತಂಡದ ಶಿವಾಲಿ, ಅಪ್ಸರಾ, ತೆರ್ಯ, ಜಾಂಬ್ರೋನಿಸ್ ತಂಡದ ಜೀವಿತಾ ಗೋಲು ಬಾರಿಸಿದರು.

೧೫ ವರ್ಷದ ಬಾಲಕರಲ್ಲಿ ಡ್ರಾö್ಯಗನ್ಸ್ ತಂಡವು ಅವೆಂಜರ್ಸ್ ತಂಡದ ವಿರುದ್ಧ ೭-೧ ಗೋಲುಗಳ ಭರ್ಜರಿ ಗೋಲು ದಾಖಲಿಸಿತು. ಡ್ರಾö್ಯಗನ್ಸ್ ತಂಡದ ನಿರುಪ್ ೨, ಧನುಶ್ ೨, ಅಖಿಲ್ ೩, ಅವೆಂಜರ್ಸ್ ತಂಡದ ಮುತ್ತಣ್ಣ ಗೋಲು ಹೊಡೆದರು.

ವಾರಿಯರ್ಸ್ ತಂಡವು ೩-೧ ಗೋಲುಗಳಿಂದ ಲೆಪರ್ಡ್ ತಂಡವನ್ನು ಸೋಲಿಸಿತು. ವಾರಿಯರ್ಸ್ ತಂಡದ ಆಕರ್ಶ್ ೨, ಹರ್ಷಿತ್, ಲೆಪರ್ಡ್ನ ಗೌರವ್ ಗೋಲು ಹೊಡೆದರು.

ಫ್ಲೆöÊಬಾಯ್ಸ್ ತಂಡವು ಡ್ರಾಗನ್ಸ್ ತಂಡದ ವಿರುದ್ಧ ೩-೨ ಗೋಲುಗಳ ರೋಚಕ ಗೆಲುವು ದಾಖಲಿಸಿತು. ಫ್ಲೆöÊಬಾಯ್ಸ್ ತಂಡದ ದೃವ್, ಆರ್ಯನ್, ಸಾತ್ವಿಕ್, ಡ್ರಾಗನ್ ತಂಡದ ನಿರುಪ್, ನಾಚಪ್ಪ ತಲಾ ಒಂದೊAದು ಗೋಲು ಹೊಡೆದರು.