ಮಡಿಕೇರಿ, ಡಿ. ೨೮: ಸರಿ ಸುಮಾರು ೨೦೦ ವರ್ಷಗಳ ಇತಿಹಾಸವಿರುವ, ಕೊಡಗಿನ ಅರಸ ೨ನೇ ಲಿಂಗರಾಜೇAದ್ರ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕ¯ಶೋತ್ಸವ ತಾ.೨೬ರಿಂದ ಆರಂಭಗೊAಡಿದ್ದು, ಇಂದು ಮೂರನೇ ದಿನದ ಧಾರ್ಮಿಕ ಕಾರ್ಯಗಳು ಭಕ್ತವೃಂದದ ಸಮಕ್ಷಮ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಸುಮಾರು ೨೬ ವರ್ಷಗಳ ಬಳಿಕ ಇದೀಗ ಓಂಕಾರೇಶ್ವರ ದೇವಾಲಯ ಸಮಿತಿ ಬ್ರಹ್ಮ ಕಲಶೋತ್ಸವ ಕಾರ್ಯಕ್ಕೆ ಮುಂದಾಗಿದ್ದು, ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತಿವೆ. ಮೂರನೇ ದಿನವಾದ ಇಂದು ಬೆಳಿಗ್ಗೆ ೬ ಗಂಟೆಯಿAದ ಗಣಪತಿ ಹೋಮ, ಅಂಕುರ ಪೂಜೆ, ಚೋರ ಶಾಂತಿ, ಸ್ವಶಾಂತಿ, ಅದ್ಭುತ ಶಾಂತಿ ಹೋಮ ಗಳು, ಹೋಮ ಕಲಶಾಭಿಷೇಕ ನಡೆದು ಮಧ್ಯಾಹ್ನ ಪೂರ್ಣಾಹುತಿ ಯೊಂದಿಗೆ ಎಂದಿನAತೆ ಮಧ್ಯಾಹ್ನ ಪೂಜೆ ನೆರವೇರಿತು. ಮೊದಲ ಪುಟದಿಂದ) ರಾತ್ರಿ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಬ್ರಹ್ಮಕಲಶ ಮಂmಪ ಸಂಸ್ಕಾರ ಪೂಜೆ ನೆರವೇರಿತು.

ದೇಗುಲದಲ್ಲಿ ಪೂಜಾದಿ ಕಾರ್ಯಗಳು ನಡೆಯುತ್ತಿರು ವದರಿಂದ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಪ್ರವಾಸಿಗರೂ ಕೂಡ ದೇವಾಲಯಕ್ಕೆ ಆಗಮಿಸುತ್ತಿದ್ದು, ದೇವರಿಗೆ ನಮಿಸಿ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಪೂಜೆಗೆ ಆಗಮಿಸುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡ ಲಾಗಿದ್ದು, ಹೋಮ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಹೋಮ ಕುಂಡದ ಬಳಿ ವ್ಯವಸ್ಥೆ ಮಾಡಲಾಗಿದೆ. ಹೋಮ ಪೂರ್ಣಾಹುತಿ ಬಳಿಕ ಮಧ್ಯಾಹ್ನದ ಮಹಾಪೂಜೆ ಸಂದರ್ಭದಲ್ಲಿ ಇರುವಂತಹ ಭಕ್ತರಿಗೆ ಭೋಜನದ ವ್ಯವಸ್ಥೆ ಕೂಡಾ ದೇವಾಲಯ ಸಮಿತಿಯಿಂದ ಮಾಡಲಾಗಿದ್ದು, ದಿನನಿತ್ಯ ನೂರಾರು ಭಕ್ತರು ಭೋಜನಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತರು ಬೆಳಿಗ್ಗೆಯಿಂದಲೇ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ತೆರಳುತ್ತಿದ್ದಾರೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ಹೇಳುತ್ತಾರೆ. ಪ್ರತಿನಿತ್ಯ ದೇವತಾ ಕಾರ್ಯಗಳಲ್ಲಿ ಸಮಿತಿ ಅಧ್ಯಕ್ಷರು, ಸದಸ್ಯರುಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಹಗಲೂ ರಾತ್ರಿ ಶ್ರಮವಹಿಸುತ್ತಿದ್ದಾರೆ.

ಶಾಸಕರುಗಳು ಭಾಗಿ: ಇಂದಿನ ಪೂಜಾ ಕಾರ್ಯದಲ್ಲಿ ಶಾಸಕರು ಗಳಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಭಾಗಿಯಾಗಿದ್ದರು. ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಉದಯಕುಮಾರ್, ಪ್ರಭುರೈ, ಚಿ.ನಾ. ಸೋಮೇಶ್ ಮುಂತಾದವರು ಪಾಲ್ಗೊಂಡಿದ್ದರು.

ಇAದಿನ ಕಾರ್ಯಗಳು

ತಾ. ೨೯ ರಂದು (ಇಂದು) ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ತತ್ವ ಕಲಶ ಪೂಜೆ, ತತ್ವ ಕಲಶಾಭಿಷೇಕ, ೧೨.೩೦ಕ್ಕೆ ಮಧ್ಯಾಹ್ನ ಪೂಜೆ, ರಾತ್ರಿ ಅಂಕುರ ಪೂಜೆ, ಭಾಗವತಿ ಸೇವೆ ನಡೆಯಲಿದೆ.