*ಗೋಣಿಕೊಪ್ಪ, ಡಿ. ೨೮: ಇಲ್ಲಿನ "ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ" ಪಿಗ್ಮಿ ಸಂಗ್ರಹದ ಮೂಲಕ ಸೊಸೈಟಿ ಏಳಿಗೆಗೆ ಶ್ರಮಿಸಿದವರನ್ನು ಸೊಸೈಟಿ ಆಡಳಿತ ಮಂಡಳಿ ವತಿಯಿಂದ ಪ್ರೋತ್ಸಾಹಕರ ಬಹುಮಾನ ನೀಡಿ ಗೌರವಿಸಲಾಯಿತು.

ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಕಿರಿಯಮಾಡ ಅರುಣ್ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಸೊಸೈಟಿಯ ಮಹಾಸಭೆಯಲ್ಲಿ ಪಿಗ್ಮಿ ಸಂಗ್ರಹಕಾರರು ಸನ್ಮಾನ ಸ್ವೀಕರಿಸಿದರು.

ಗೋಣಿಕೊಪ್ಪ ಮುಖ್ಯ ಕಚೇರಿಯಲ್ಲಿ ರೂ. ೮೯.೪೫ ಲಕ್ಷ ಸಂಗ್ರಹಿಸಿರುವ ಮೂಲಕ ಪ್ರಥಮ ಸ್ಥಾನ ಪಡೆದ ಜಿ.ಪಿ. ಸ್ವಾಮಿ, ರೂ. ೮೬. ೪೩ ಲಕ್ಷ ಸಂಗ್ರಹಿಸಿ ದ್ವಿತೀಯ ಸ್ಥಾನ ಪಡೆದ ಜಯಶ್ರೀ ಹಾಗೂ ರೂ. ೮೧.೮೫ ಲಕ್ಷ ಸಂಗ್ರಹಿಸಿದ ಡಿ.ಜೆ. ಆಂತೋಣಿ, ವೀರಾಜಪೇಟೆ ಶಾಖೆಯಲ್ಲಿ ರೂ. ೧.೨೮ ಕೋಟಿ ಸಂಗ್ರಹಿಸಿದ ಕೆ.ಪಿ. ಲವ, ರೂ. ೧.೨೭ ಕೋಟಿ ಸಂಗ್ರಹಿಸಿದ ಟಿ.ಎನ್. ರಂಜನ್, ರೂ. ೭೩ ಲಕ್ಷ ಸಂಗ್ರಹಿಸಿದ ಓಂ ಪ್ರಕಾಶ್, ಶ್ರೀಮಂಗಲ ಶಾಖೆಯಲ್ಲಿ ರೂ. ೫೦.೩೪ ಲಕ್ಷ ಪಿಗ್ಮಿ ಸಂಗ್ರಹಿಸಿರುವ ತುಳಸಿ ಅವರುಗಳಿಗೆ ಬಹುಮಾನ ನೀಡಲಾಯಿತು.

ಶಿಕ್ಷಣದಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯ ಡಾ. ಆಶಿಕ್ ಚಂಗಪ್ಪ ಅವರ ಪುತ್ರ ರಿಯಾನ್ ಚಂಗಪ್ಪ, ಹಾಗೂ ಜಿ.ಪಿ. ಸ್ವಾಮಿ ಅವರ ಪುತ್ರಿ ಎ.ಎಸ್. ನಿಕಿತಾ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನಾಮೇರ ದೇವಯ್ಯ ಅವರ ಪುತ್ರ ಎನ್.ಡಿ. ಪ್ರೀತಮ್, ದೀಪಾ ಅವರ ಪುತ್ರಿ ಕೆ. ಅಜನ್ಯ ಪ್ರೋತ್ಸಾಹ ಧನ ಪಡೆದುಕೊಂಡರು.

ಸಂಘದ ಉಪಾಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್. ಪ್ರಕಾಶ್, ಸುಮಿ ಸುಬ್ಬಯ್ಯ, ಎ.ಜೆ. ಬಾಬು, ಪಿ.ಜಿ. ರಾಜಶೇಖರ್, ಸಿ.ಡಿ. ಮಾದಪ್ಪ, ಎ.ಕೆ. ಉಮ್ಮರ್, ಕೆ.ಪಿ. ಪ್ರಶಾಂತ್‌ಕುಮಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಉಪಸ್ಥಿತರಿದ್ದರು.