ಕುಶಾಲನಗರ, ಡಿ. ೨೮: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಸಹ ಕಾರ್ಯ ದರ್ಶಿಯಾಗಿ ಅವಿರೋಧ ವಾಗಿ ಆಯ್ಕೆಗೊಂಡ ಹೆಚ್.ಎಸ್. ಚೇತನ್ ಅವರನ್ನು ಸ್ಥಳೀಯ ಶಿಕ್ಷಕರು ಮತ್ತು ಸಂಘದ ಪ್ರಮುಖರು ಸಂಭ್ರಮದಿAದ ಬರಮಾಡಿಕೊಂಡರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು, ಬೆಂಬಲಿಗರು ಕುಶಾಲನಗರ ಗಡಿಯಲ್ಲಿ ಮಾಲಾರ್ಪಣೆ ಮಾಡಿ ಅದ್ಧೂರಿ ಸ್ವಾಗತ ಕೋರಿದರು. ವಾದ್ಯಗೋಷ್ಠಿಗ ಳೊಂದಿಗೆ ಮೆರವಣಿಗೆ ಮೂಲಕ ಸಾಗಿ ಕೊಪ್ಪ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, ಸಾಮಾಜಿಕ ಬದ್ದತೆ, ತತ್ವಗಳ ಉಳಿವಿಗೆ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕಿದೆ. ಉಳ್ಳವರ ಮಕ್ಕಳು, ಬಡವರ ಮಕ್ಕಳ ನಡುವೆ ಇರುವ ಶಿಕ್ಷಣ ತಾರತಮ್ಯ ನೀಗಿಸುವಲ್ಲಿ ಸಂಘದ ಮೂಲಕ ಹೋರಾಟ ರೂಪಿಸಲಾಗುವುದು.

ಸರಕಾರಿ ನೌಕರರ ಸಂಘ ಮತ್ತು ಶಿಕ್ಷಕರ ಸಂಘದ ಮೂಲಕ ಕೊಡಗು ಜಿಲ್ಲೆಯಲ್ಲಿ ಗುರುಭವನ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ. ಎನ್‌ಪಿಎಸ್ ಯೋಜನೆ ರದ್ದು, ಸಿ & ಆರ್ ನಿಯಮಾವಳಿ ರದ್ದು, ಶಿಕ್ಷಕರ ವರ್ಗಾವಣೆ, ಗಿರಿಭತ್ಯೆ ಮತ್ತಿತರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಟಿ.ಕೆ. ಬಸವರಾಜು, ಮಡಿಕೇರಿ ತಾಲೂಕು ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಕಾರ್ಯದರ್ಶಿ ಗಳಾದ ಜಿ.ಪಿ. ಕವಿತಾ, ಆಕಾಶ್, ಪದಾಧಿಕಾರಿಗಳಾದ ರಾಜು, ಸಂದೇಶ್, ಜ್ಯೋತಿ, ಮೀನಾಕುಮಾರ್, ಯೋಗೇಶ್, ಕರುಂಬಯ್ಯ, ಶಿವ ಕುಮಾರ್, ಸೌಭಾಗ್ಯ, ರಮಾನಂದ, ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ. ಮಂಜುನಾಥ್‌ಕುಮಾರ್ ಮತ್ತಿತರರು ಇದ್ದರು.