ಮಡಿಕೇರಿ, ಡಿ. ೨೯: ಮಡಿಕೇರಿಯ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸ್ಪೋರ್(ಜನತಾ ಬಜಾರ್)ನ ಮಹಾಸಭೆ ಇತ್ತೀಚೆಗೆ ನಗರದ ಬಾಲಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನಂದಿನೆರವAಡ ರವಿ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ವ್ಯವಹಾರ - ಕಾರ್ಯಚಟುವಟಿಕೆ, ಲಾಭದ ಕುರಿತು ಮಾಹಿತಿ ನೀಡಲಾಯಿತು. ಸಂಘ ಪ್ರಸಕ್ತ ಸಾಲಿನಲ್ಲಿ ಲಾಭಗಳಿಸಿರುವ ಕುರಿತು ಸಭೆಗೆ ವಿವರ ನೀಡಲಾಯಿತು.
ಉಪಾಧ್ಯಕ್ಷ ಧರ್ಮಪಾಲ ಪ್ರಭು, ಕಾರ್ಯದರ್ಶಿ ಕಳ್ಳಿರ ರೂಪ ದೇವಯ್ಯ ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.