ಕೂಡಿಗೆ, ಡಿ. ೨೯: ರಾಜ್ಯದಲ್ಲಿ ಪ್ರಥಮವಾಗಿ ಪ್ರಾರಂಭವಾದ ಕೂಡಿಗೆಯ ಕ್ರೀಡಾ ಶಾಲೆ ಅನೇಕ ಎಡರು ತೊಡರುಗಳ ನಡುವೆ ಉತ್ತಮವಾಗಿ ಸಾಗಿ ೩೮ ವರ್ಷಗಳು ಕಳೆಯುತ್ತಾ ಬಂದಿದೆ. ಇವುಗಳ ನಡುವೆ ಕೂಡಿಗೆಯಲ್ಲಿ ಹಾಕಿ ಮತ್ತು ಅಥ್ಲೆಟಿಕ್ಸ್ನಲ್ಲಿ ತರಬೇತಿ ಪಡೆದ ಕ್ರೀಡಾ ವಿದ್ಯಾರ್ಥಿಗಳು ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ತಮ್ಮ ಆಟದ ಪ್ರತಿಭೆಯನ್ನು ಪ್ರದರ್ಶಿಸಿ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆದರೆ ಜಿಲ್ಲೆಯ ಪ್ರಮುಖ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಹಾಕಿ ಅಭ್ಯಾಸಕ್ಕೆ ಅನುಕೂಲವಾಗಲೆಂದು ಐದು ವರ್ಷದ ಹಿಂದೆ ಕ್ರೀಡಾ ಸಚಿವರಾಗಿದ್ದ ಅಪ್ಪಚ್ಚು ರಂಜನ್ ಅವರ ಪ್ರಯತ್ನದಲ್ಲಿ ಹಾಕಿ ಟರ್ಫ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಹಣ ಬಿಡುಗಡೆಯಾಗಿ ಕಾಮಗಾರಿ ನಡೆದರೂ ಸಹ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಕಾಲ ಕೂಡಿಬಂದಿಲ್ಲ.

ಕೂಡಿಗೆ ಸರಕಾರಿ ಕ್ರೀಡಾ ಶಾಲೆಯ ಆವರಣದಲ್ಲಿ ಕಳೆದ ಐದು ವರ್ಷಗಳಿಂದಲೂ ಹಾಕಿ ಟರ್ಫ್ನ ಕಾಮಗಾರಿಯು ನಡೆಯುತ್ತಲೇ ಇದೆ. ಆದರೆ ಅಲ್ಲಿಗೆ ಬರುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭರವಸೆಗಳನ್ನು ನೀಡುತ್ತಾ ಹೋಗುತ್ತಿದ್ದಾರೆ. ಆದರೂ ಇದುವರೆಗೂ ಪೂರ್ಣ ಪ್ರಮಾಣದ ಕಾಮಗಾರಿ ಮುಗಿಯದೆ ಇನ್ನೂ ಹಾಕಿ ಅಭ್ಯಾಸದ ಭಾಗ್ಯ ಕ್ರೀಡಾಪಟುಗಳಿಗೆ ದೊರೆತಿಲ್ಲ.

ಇದಕ್ಕೆ ಸಂಬAಧಿಸಿದAತೆ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆ ಮಾಡಿದರೆ ಹಾಕಿ ಮೈದಾನ ಕಾಮಗಾರಿಯು ಶೇ. ೯೫ ರಷ್ಟು ಮುಗಿದಿದೆ. ಆದರೆ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ಮೈದಾನಕ್ಕೆ ಸಿಂಪಡಣೆ ಮಾಡುವ ಯಂತ್ರಗಳ ಅಳವಡಿಕೆಗೆ ಮತ್ತು ಅದಕ್ಕೆ ಬೇಕಾಗುವ ವಿದ್ಯುತ್ ಕೆಲಸ ಮಾತ್ರ ಆಗಬೇಕಾಗಿದೆ ಎನ್ನುತ್ತಾರೆ.

ಮುಂದಿನ ಸಾಲಿನಲ್ಲಾದರೂ ಜಿಲ್ಲೆಯ ವಿದ್ಯಾರ್ಥಿಗಳ ಹಾಕಿ ಅಭ್ಯಾಸಕ್ಕೆ ಈ ಹಾಕಿ ಮೈದಾನ ಸಿಗುವಂತೆ ಆಗಲಿ ಎಂಬದು ಕ್ರೀಡಾಭಿಮಾನಿಗಳ ಆಶಯವಾಗಿದೆ. - ಕೆ.ಕೆ. ನಾಗರಾಜಶೆಟ್ಟಿ.