ನಾಪೆೆÇÃಕ್ಲು, ಡಿ. ೨೯: ಡಿಸೆಂಬರ್ ೧೯ ರಂದು ನಡೆಸಬೇಕಾಗಿದ್ದ ನಾಲ್ ನಾಡ್ ಹಾಕಿ ಪಂದ್ಯಾಟವನ್ನು ಚುನಾವಣಾ ನಿಮಿತ್ತ ಮುಂದೂಡ ಲಾಗಿದ್ದು ಇದೇ ಪಂದ್ಯಾಟವನ್ನು ಜನವರಿ ತಿಂಗಳ ತಾ. ೮, ೯, ೧೦, ೧೧ ರಂದು ನಡೆಸಲಾಗುವುದು ಎಂದು ಪಂದ್ಯಾಟದ ಆಯೋಜಕ ಶಿವಾಜಿ ಯೂತ್ ಕ್ಲಬಿನ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಅಜ್ಜೇಟೀರ ಬೋಪಣ್ಣ, ಕಲೇಟೀರ ದೀಪು ದೇವಯ್ಯ ಮತ್ತು ಕೆಟೋಳಿರ ಶಮ್ಮಿ ಅಯ್ಯಪ್ಪ ತಿಳಿಸಿದ್ದಾರೆ. ಪಂದ್ಯಾಟದಲ್ಲಿ ನಾಲ್ಕು ನಾಡಿನ ತಂಡಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ. ಇದರಲ್ಲಿ ಜಾತಿ ಮತ ಬೇಧ ಇಲ್ಲದೆ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು. ಈಗಾಗಲೇ ಪಂದ್ಯಾಟಕ್ಕೆ ಸುಮಾರು ೧೬ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ ಎಂದು ತಿಳಿಸಿದ ಅವರು ಪುನಃ ತಂಡಗಳು ಇದ್ದರೆ ಕೂಡಲೇ ತಮ್ಮ ತಂಡದ ಹೆಸರನ್ನು ನೋಂದಾಯಿಸಲು ಕ್ಲಬಿನ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಪಂದ್ಯಾಟದಲ್ಲಿ ೧೪ ವರ್ಷದ ಒಳಗಿನ ಆಟಗಾರರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಈಗಾಗಲೇ ೬ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊAಡಿದ್ದಾರೆ ಎಂದರು. ಸಂಸದರ ನಿಧಿಯಿಂದ ನೂತನವಾಗಿ ನಿರ್ಮಿಸಲಾದ ಮಾದರಿ ಪ್ರಾಥಮಿಕ ಶಾಲೆಯ ಮಿನಿ ಕ್ರೀಡಾಂಗಣವನ್ನು ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಉದ್ಘಾಟನೆ ಮಾಡಲಿರುವುದಾಗಿ ಮಾಹಿತಿ ನೀಡಿದರು.