ಜ. ೧ ರಿಂದ ೧೦, ೧೨ನೇ ತರಗತಿಗಳು ಆರಂಭ

ಬೆAಗಳೂರು, ಡಿ. ೨೮: ನಿಗದಿಯಂತೆಯೇ ಜನವರಿ ೧ ರಿಂದ ೧೦ ಮತ್ತು ೧೨ನೇ ತರಗತಿಗಳನ್ನು ಆರಂಭ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಶಾಲಾ-ಕಾಲೇಜು ಪ್ರಾರಂಭದ ಕುರಿತು ಇಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಚರ್ಚೆ ಬಳಿಕ ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಶಾಲೆ ಆರಂಭ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ಪ್ರಸ್ತುತ ಶಾಲೆ-ಕಾಲೇಜುಗಳ ಆರಂಭಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಮುಂಜಾಗ್ರತಾ ಕ್ರಮಗಳೊಂದಿಗೆ ಆರಂಭಿಸಲು ತಜ್ಞರು ಸಲಹೆ ನೀಡಿದ್ದು, ಹೀಗಾಗಿ ಶಾಲೆ ಮತ್ತು ಕಾಲೇಜುಗಳ ಪ್ರಾರಂಭ ಮಾಡಲು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ, ಸಚಿವ ಸುರೇಶ್‌ಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. ಸಭೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಎಲ್ಲಾ ನಿಯಮಗಳೂ ಪಾಲನೆಯಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಚಾಲಕ ರಹಿತ ಮೆಟ್ರೋ ರೈಲು ಸೇವೆಗೆ ಚಾಲನೆ

ನವದೆಹಲಿ, ಡಿ. ೨೮: ದೆಹಲಿ ಮೆಟ್ರೋ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೆಹಲಿ ಮೆಟ್ರೋ ಮೆಜೆಂತಾ ಮಾರ್ಗದಲ್ಲಿ ಭಾರತದ ಮೊದಲ ಚಾಲಕ ರಹಿತ ರೈಲಿನ ಉದ್ಘಾಟನಾ ಕಾರ್ಯಕ್ರಮ ಮತ್ತು ವಿಮಾನ ನಿಲ್ದಾಣ ಎಕ್ಸ್ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುವ ರಾಷ್ಟಿçÃಯ ಸಾಮಾನ್ಯ ಚಲನಶೀಲತೆ ಕಾರ್ಡ್ (ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್) ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊದಲ ಚಾಲಕ ರಹಿತ ಮೆಟ್ರೋ ರೈಲಿನ ಉದ್ಘಾಟನೆಯು ಭಾರತವು ಸ್ಮಾರ್ಟ್ ವ್ಯವಸ್ಥೆಗಳತ್ತ ಎಷ್ಟು ವೇಗವಾಗಿ ಸಾಗುತ್ತಿದೆ ಎಂಬದನ್ನು ತೋರಿಸುತ್ತದೆ. ಅಟಲ್ ಜೀ ಪ್ರಯತ್ನದಿಂದ ದೇಶದ ಮೊದಲ ಮೆಟ್ರೋವನ್ನು ಪ್ರಾರಂಭಿಸಲಾಯಿತು. ೨೦೧೪ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಕೇವಲ ೫ ನಗರಗಳು ಮಾತ್ರ ಮೆಟ್ರೋ ಸೇವೆಗಳನ್ನು ಹೊಂದಿದ್ದವು ಮತ್ತು ಇಂದು ೧೮ ನಗರಗಳು ಮೆಟ್ರೋ ಸೌಲಭ್ಯ ಪಡೆದಿವೆ. ಅಲ್ಲದೆ ೨೦೨೫ ರ ಹೊತ್ತಿಗೆ ನಾವು ಈ ಸೇವೆಯನ್ನು ೨೫ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಗುರಿ ಹಾಕಿಕೊಂಡಿದ್ದೇವೆ. ಮೆಟ್ರೋ ಸೇವೆಗಳ ವಿಸ್ತರಣೆಗೆ ‘ಮೇಕ್ ಇನ್ ಇಂಡಿಯಾ’ ಬಹಳ ಮುಖ್ಯ ವೇದಿಕೆಯಾಗಿದೆ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ವಿದೇಶಿ ಕರೆನ್ಸಿಯನ್ನು ಉಳಿಸುತ್ತದೆ ಮತ್ತು ಭಾರತೀಯ ಜನರಿಗೆ ಹೆಚ್ಚಿನ ಉದ್ಯೋಗವನ್ನು ನೀಡುತ್ತದೆ ಎಂದು ಮೋದಿ ಹೇಳಿದರು.

ಹೊಸ ವರ್ಷಕ್ಕೆ ನೈಟ್ ಕರ್ಫ್ಯೂ ಇಲ್ಲ

ಬೆಂಗಳೂರು, ಡಿ. ೨೮: ಹೊಸ ವರ್ಷಾಚರಣೆ ಹಿನ್ನೆಲೆ ಎರಡು ದಿನಗಳಿಗೆ ಸೀಮಿತವಾಗಿ ಯಾವುದೇ ನೈಟ್ ಕರ್ಫ್ಯೂ ಹೇರುವುದಿಲ್ಲ. ಆದರೆ ಬಹಿರಂಗ ಆಚರಣೆ ನಿಷೇಧಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಹೊಸ ಆಚರಣೆ ಸಂಬAಧ ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿ ಜೊತೆ ಸಭೆ ನಡೆಸಿದ್ದೇವೆ. ತಾ. ೧೭ ರಂದು ಹೊರಡಿಸಿರುವ ಮಾರ್ಗಸೂಚಿಗೆ ಕೆಲ ಮಾರ್ಪಾಡು ಮಾಡಿ ಅಂತಿಮ ಮಾರ್ಗಸೂಚಿ ಹೊರಡಿಸುತ್ತೇವೆ. ನಗರ ಪೊಲೀಸ್ ಆಯುಕ್ತರು ಬೆಂಗಳೂರಿಗೆ ಸೀಮಿತವಾಗಿ ಮಾರ್ಗಸೂಚಿ ಹೊರಡಿಸಲಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರು ಇತರ ಜಿಲ್ಲೆಯ ನಗರಗಳಿಗೆ ಅನ್ವಯವಾಗುವ ಮಾರ್ಗಸೂಚಿ ಹೊರಡಿಸುತ್ತಾರೆ ಎಂದರು. ರೆಸಾರ್ಟ್ಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಇರಲಿದೆ. ಮ್ಯೂಸಿಕ್, ಬ್ಯಾಂಡ್ ಬಳಕೆ ನಿಷೇಧಿಸಲಾಗಿದೆ. ಸಾರ್ವಜನಿಕ ಬಹಿರಂಗ ಆಚರಣೆಯನ್ನು ನಿಷೇಧಿಸಲಾಗುತ್ತದೆ. ಆಂತರಿಕವಾಗಿ ಆಚರಣೆಗೆ ನಿರ್ಬಂಧ ಇಲ್ಲ. ಪ್ರಮುಖ ರಸ್ತೆ, ಪ್ರದೇಶವಾರು ನಿರ್ಬಂಧ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ರೂಪಾಂತರಿತ ವೈರಸ್ ಹರಡದಂತೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ೨೭ ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಯುಕೆಯಿಂದ ಬಂದವರು ಕಡ್ಡಾಯ ಟೆಸ್ಟ್ ಮಾಡಿಸಬೇಕು. ತಪುö್ಪ ವಿಳಾಸ ಕೊಟ್ಟವರನ್ನು ಟ್ರಾö್ಯಕ್ ಮಾಡಿ ಟ್ರೇಸ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಅವರನ್ನು ಆದಷ್ಟು ಬೇಗ ಟ್ರೇಸ್ ಮಾಡುತ್ತೇವೆ ಎಂದು ಹೇಳಿದರು.

ಮದರಸಾಗಳು ಸಾಮಾನ್ಯ ಶಿಕ್ಷಣ ಸಂಸ್ಥೆಗಳು

ಗುವಾಹಟಿ, ಡಿ. ೨೮: ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆಯೊಂದನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಮೈತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ. ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ, ೧೯೯೫ ಮತ್ತು ಅಸ್ಸಾಂ ಮದರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದರಸಾ ಶಿಕ್ಷಣ ಸಂಸ್ಥೆಗಳ ಮರು-ಸಂಘಟನೆ) ಕಾಯ್ದೆ, ೨೦೧೮ ಅನ್ನು ರದ್ದುಗೊಳಿಸುವ ಮಸೂದೆಯನ್ನು ಮಸೂದೆ ೨೦೨೦ನ್ನು ಮಂಡಿಸಲಾಗಿದೆ. ಈ ಮಸೂದೆ ಮಂಡನೆ ನಂತರ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಮದರಸಾಗಳನ್ನು ಮುಚ್ಚುವ ಅಥವಾ ಖಾಸಗಿ ಮದರಸಾಗಳನ್ನು ನಿಯಂತ್ರಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದರು. ಮದರಸಾಗಳನ್ನು ಮಾಧ್ಯಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ಶಾಲೆಗಳಾಗಿ ಪರಿವರ್ತಿಸುವ ಪ್ರಸ್ತಾವವನ್ನು ಮಸೂದೆ ಹೊಂದಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಯ ಸ್ಥಾನಮಾನ, ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಯಾವುದೇ ಬದಲಾವಣೆ ಮಾಡುತ್ತಿಲ್ಲ. ಅಸ್ಸಾಂನಲ್ಲಿ ಸರ್ಕಾರದಿಂದ ನಡೆಯಲ್ಪಡುತ್ತಿರುವ ಇಂತಹ ೬೦೦ ಮದರಸಾಗಳಿದ್ದು, ಅವುಗಳನ್ನು ೧೯೧೫ರಲ್ಲಿ ಪರಿಚಯಿಸಲಾಗಿತ್ತು. ರಾಜ್ಯ ಸರ್ಕಾರದಿಂದ ನಡೆಯಲ್ಪಡುವ ಮದರಸಾಗಳು ಮತ್ತು ಸಂಸ್ಕöÈತ ಕಲಿಕಾ ಕೇಂದ್ರಗಳ ಮೇಲೆ ಸರ್ಕಾರ ವಾರ್ಷಿಕವಾಗಿ ರೂ. ೨೬೦ ಕೋಟಿ ವೆಚ್ಚ ಮಾಡುತ್ತಿದೆ.

ತಾ. ೩೦ ರಂದು ಕೇಂದ್ರದಿAದ ರೈತರ ಸಭೆ

ನವದೆಹಲಿ, ಡಿ. ೨೮: ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತ ಸಂಘಟನೆಗಳ ಮುಖಂಡರೊAದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ತಾ. ೩೦ ರಂದು ಸಭೆ ಕರೆದಿದೆ. ತಾ. ೩೦ ರಂದು ಮಧ್ಯಾಹ್ನ ೨ ಗಂಟೆಗೆ ದೆಹಲಿಯ ವಿಜ್ಞಾನಭವನದಲ್ಲಿ ಈ ಸಭೆ ನಡೆಯಲಿದೆ. ಕೇಂದ್ರ ಸರ್ಕಾರ ಕಳೆದ ಗುರುವಾರ, ತಾನು ಎಲ್ಲಾ ಸಮಸ್ಯೆಗಳ ಕುರಿತು ಮುಕ್ತ ಮಾತುಕತೆಗೆ ಸಿದ್ಧವಿದ್ದು, ಅದಕ್ಕೆ ನೀವೇ ದಿನಾಂಕ ಮತ್ತು ಸಮಯ ನಿಗದಿಪಡಿಸುವಂತೆ ರೈತ ಮುಖಂಡರಿಗೆ ಪತ್ರ ಬರೆದಿತ್ತು. ಅದರಂತೆ ರೈತ ಮುಖಂಡರು ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ತಾ. ೨೯ ರಂದು ದಿನಾಂಕ ನಿಗದಿ ಮಾಡಿದ್ದರು. ಈಗ ಕೇಂದ್ರ ಸರ್ಕಾರ ತಾ. ೩೦ಕ್ಕೆ ರೈತ ಮುಖಂಡರ ಸಭೆ ಕರೆದಿದೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳ ಸಾವಿರಾರು ರೈತರು ಕಳೆದ ಒಂದು ತಿಂಗಳಿAದ ಪ್ರತಿಭಟನೆ ನಡೆಸುತ್ತಿದ್ದಾರೆ.

ವಾಹನದಲ್ಲಿ ಜಾತಿ ಹೆಸರು ಹಾಕಿದರೆ ದಂಡ

ಲಖನೌ, ಡಿ. ೨೮: ಜಾತಿ ಸೂಚಕ ಹೆಸರುಗಳನ್ನು ವಾಹನಗಳ ಮೇಲೆ ಬರೆಸಿದರೆ ದಂಡ ವಿಧಿಸುವ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ. ಉತ್ತರ ಪ್ರದೇಶ ಸಾರಿಗೆ ಆಯುಕ್ತರು ಈ ಆದೇಶ ಹೊರಡಿಸಿದ್ದು, ಈ ರೀತಿಯಾದ ಬರಹಗಳು ಯಾವುದೇ ನಂಬರ್ ಪ್ಲೇಟ್‌ಗಳು ಹಾಗೂ ವಾಹನಗಳ ಮೇಲೆ ಕಂಡುಬAದಲ್ಲಿ ಈಗಾಗಲೇ ಇರುವ ನಿಯಮಗಳ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಕಚೇರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಪ್ರಕಾರ ಸಾಮಾನ್ಯವಾಗಿ ನೀಡಬಹುದಾದ ಚಲನ್‌ಗಳನ್ನೇ ಈ ಪ್ರಕರಣಗಳಲ್ಲಿಯೂ ನೀಡಬೇಕಾಗುತ್ತದೆ, ಕಾನೂನಿನಲ್ಲಿ ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ವ್ಯಕ್ತಿಯ ಸಾಮಾಜಿಕ ಸ್ತರವನ್ನು ಪ್ರದರ್ಶಿಸುವುದು, ಜಾತಿಗಳ ಹೆಸರನ್ನು ಬರೆಸಿಕೊಳ್ಳುವುದು ರಾಜ್ಯದಲ್ಲಿ ಟ್ರೆಂಡ್ ಆಗುತ್ತಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆ ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಲು ಸೂಚಿಸಲಾಗಿದೆ ಎಂದು ಯುಪಿ ಸಾರಿಗೆ ಆಯುಕ್ತ ಧೀರಜ್ ಸಾಹು ತಿಳಿಸಿದ್ದಾರೆ.