ಕೂಡಿಗೆ, ಡಿ. ೨೯: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ತಿಂಗಳಿನÀಲ್ಲಿ ಏಳು ಕಡೆ ಇಸ್ಪೀಟ್ ಆಟವಾಡುತ್ತಿದ್ದವರನ್ನು ಬಂಧಿಸಿ ಪ್ರಕರಣ ದಾಖಲಿಸಿ ರೂ. ೩೦ ಸಾವಿರದಷ್ಟು ಹಣ ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಈ ವ್ಯಾಪ್ತಿಯ ಸೀಗೆಹೊಸೂರು, ತೊರೆನೂರು, ಅಳುವಾರ, ಹೆಬ್ಬಾಲೆಯ ಕೆಲವು ದಿನಸಿ ಅಂಗಡಿಗಳಲ್ಲಿ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಮದ್ಯ ವಶ, ಕಳ್ಳ ಸಾಗಾಣಿಕೆ ಮಾಡುತ್ತಿದ್ದ ರೂ. ೨೧ ಲಕ್ಷ ಮೌಲ್ಯದ ಬೀಟಿ ಮರ ವಶ ಪ್ರಕರಣ ದಾಖಲು, ರೂ. ೬ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನದ ಮಾಲನ್ನು ವಶಪಡಿಸಿಕೊಂಡಿದ್ದು, ಕಳೆದ ೧೫ ವರ್ಷಗಳಿಂದಲೂ ತಲೆಮರೆಸಿಕೊಂಡಿದ್ದ ೪ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿ ವರ್ಗ ಪತ್ತೆ ಹಚ್ಚಿದ್ದಾರೆ.