ಪೊನ್ನಂಪೇಟೆ, ಡಿ.೨೭: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾನುವಾರದಂದು ಗೋಣಿಕೊಪ್ಪಲು ಸಮೀಪದ ಬಾಳಾಜಿಯ ಕೀರೆಹೊಳೆಯಲ್ಲಿ ನಡೆದಿದೆ.ಪೊನ್ನಂಪೇಟೆಯ ಸಂತ ಅಂತೋಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ, ಹುದಿಕೇರಿ ಸಮೀಪದ ಹೈಸೊಡ್ಲುರು ನಿವಾಸಿ ಮಂಡAಗಡ ಬೋಪಯ್ಯ ಅವರ ಪುತ್ರ, ೧೮ ವರ್ಷ ಪ್ರಾಯದ ಬೋಪಣ್ಣ ಮತ್ತು ಪೊನ್ನಂಪೇಟೆಯ ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರಾದ ಅಣ್ಣಪ್ಪ ಅವರ ಪುತ್ರ ಮನೇಶ್ ಎಂಬಿಬ್ಬರೇ ಮೃತಪಟ್ಟಿರುವ ವಿದ್ಯಾರ್ಥಿಗಳಾಗಿ ದ್ದಾರೆ. ಈ ಇಬ್ಬರು ಯುವಕರು ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಭಾನುವಾರದಂದು ೮ ಆಪ್ತ ಸ್ನೇಹಿತರ ತಂಡ ಬಾಳಾಜಿ ಗ್ರಾಮದತ್ತ ತೆರಳಿದೆ. ಈ ವೇಳೆ ಬೋಪಣ್ಣ, ಮನೇಶ್ ಮತ್ತು ಹೇಮಂತ್ ಎಂಬ ಮೂವರು ಮಧ್ಯಾಹ್ನ ೧೨ ಗಂಟೆ ಸಮಯದಲ್ಲಿ ಬಾಳಾಜಿ ಗ್ರಾಮದ ಮೂಲಕ ಹಾದುಹೋಗುವ ಕೀರೆಹೊಳೆಗೆ ಈಜಲು ತೆರಳಿದರು ಎನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ ಇಬ್ಬರು ನತದೃಷ್ಟ ವಿದ್ಯಾರ್ಥಿಗಳು ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ. ನೀರಿಗಿಳಿದವರ ಪೈಕಿ ಹೇಮಂತನನ್ನು ಸ್ಥಳೀಯ ಕಾರ್ಮಿಕರು ರಕ್ಷಿಸಿ ನೀರಿನಿಂದ ಮೇಲೆತ್ತುವಲ್ಲಿ ಯಶಸ್ವಿ ಯಾಗಿದ್ದಾರೆ. ನೀರಿನಲ್ಲಿ ಮುಳುಗಿದ್ದ ಬೋಪಣ್ಣನನ್ನು ರಕ್ಷಣೆ ಮಾಡಲು ಸ್ಥಳೀಯ ಕಾರ್ಮಿಕರು ಶಕ್ತಿಮೀರಿ ಶ್ರಮಿಸಿದರೂ ಬದುಕುಳಿಯಲಿಲ್ಲ.

ಈ ವಿದ್ಯಾರ್ಥಿಗಳ ತಂಡ ಪ್ರತಿ ಶನಿವಾರ ಮತ್ತು ಭಾನುವಾರದಂದು ಫುಟ್ಬಾಲ್ ಅಭ್ಯಾಸಕ್ಕಾಗಿ ಪೊನ್ನಂಪೇಟೆಗೆ ಬರುತ್ತಿದ್ದರು. ಎಂದಿನAತೆ ಭಾನುವಾರವೂ ಪೊನ್ನಂಪೇಟೆಗೆ ಆಗಮಿಸಿದ ವಿದ್ಯಾರ್ಥಿಗಳ ತಂಡ ಮಧ್ಯಾಹ್ನದ

(ಮೊದಲ ಪುಟದಿಂದ) ಸಮಯದಲ್ಲಿ ಬಾಳಾಜಿಯ ಕೀರೆಹೊಳೆಯತ್ತ ತೆರಳಿದಾಗ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಘಟನೆ ನಡೆದು ಕೆಲಹೊತ್ತು ಹೊಳೆಯಲ್ಲಿ ಎಷ್ಟೇ ಹುಡುಕಾಡಿದರೂ ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿರಲಿಲ್ಲ. ನಂತರ ಸ್ಥಳಕ್ಕೆ ಬಂದ ಗೋಣಿಕೊಪ್ಪಲು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳ ಪ್ರಯತ್ನವೂ ಫಲ ನೀಡಲಿಲ್ಲ. ಕೊನೆಗೆ ಸ್ಥಳದಲ್ಲಿದ್ದ ಬಿಹಾರ ಮೂಲದ ಸ್ಥಳೀಯ ಕಾರ್ಮಿಕರು ಸಾಹಸಮಯವಾಗಿ ನೀರಿನಲ್ಲಿ ಮುಳುಗಿ ಎರಡು ಮೃತದೇಹಗಳನ್ನು ಮೇಲೆ ತಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ವಿದ್ಯಾರ್ಥಿಗಳ ಪೋಷಕರ ರೋಧನ ಮುಗಿಲು ಮುಟ್ಟಿತ್ತು. ಎಂದಿನAತೆ ಬೆಳಗ್ಗೆ ಮನೆಯಿಂದ ತೆರಳಿದ ಕರುಳಕುಡಿಗಳು ಶವವಾಗಿ ಮಲಗಿದ್ದ ಹೃದಯವಿದ್ರಾವಕ ಸ್ಥಿತಿಯನ್ನು ಕಂಡ ಮೃತ ವಿದ್ಯಾರ್ಥಿಗಳ ತಾಯಂದಿರ ಗೋಳು ಹೇಳತೀರದಾಗಿತ್ತು.ಘಟನಾ ಸ್ಥಳಕೆ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರಾದ ರಾಮರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಮೃತ ಯುವಕರ ಮರಣೋತ್ತರ ಘಟನಾ ಸ್ಥಳಕೆ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರಾದ ರಾಮರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಮೃತ ಯುವಕರ ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಿ, ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮೃತ ದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಕುರಿತಂತೆ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ರಫೀಕ್, ಚನ್ನನಾಯಕ