ಮಡಿಕೇರಿ, ಡಿ. ೨೭: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯಿತು. ವೀರಾಜಪೇಟೆ ತಾಲೂಕಿನ ೩೮ ಗ್ರಾ.ಪಂ. ಪೈಕಿ ೩೫ ಪಂಚಾಯ್ತಿಗಳಿಗೆ ನಡೆದ ಚುನಾವಣೆ ಯಾವುದೇ ಅಡ್ಡಿ ಇಲ್ಲದೆ ಸುಸೂತ್ರವಾಗಿ ಜರುಗಿತು. ಚೆಂಬೆಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ದೇವಣಗೇರಿ, ಬಿಟ್ಟಂಗಾಲ, ಕಾರ್ಮಾಡು ೩, ರ‍್ವತ್ತೋಕ್ಲುವಿನ ಹಳ್ಳಿಗಟ್ಟು, ಹಾತೂರುವಿನ ಕುಂದ ಈಚೂರು, ಕೈಕೇರಿ, ದೇವರಪುರದ ಹೆಬ್ಬಾಲೆ ೪, ನಾಲ್ಕೇರಿ ಅರಣ್ಯ, ಟಿಶೆಟ್ಟಿಗೇರಿಯ ಈಸ್ಟ್ ನೆಮ್ಮೆಲೆ ೧ ಹಾಗೂ ೨, ಕುಟ್ಟದ ಮಂಚಳ್ಳಿ ಅರಣ್ಯ ವ್ಯಾಪ್ತಿಯ ವಾರ್ಡ್ಗಳಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದ ಹಿನ್ನೆಲೆ ೧೩ ಮತಗಟ್ಟೆಗಳಲ್ಲಿ ೫೪ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಉಳಿದ ೧೮೩ ಮತಗಟ್ಟೆಗಳಲ್ಲಿ ಶಾಂತಿ ಯುತವಾಗಿ ಮತದಾನ ನಡೆಯಿತು. ಮತದಾನ ಬಹಿಷ್ಕರಿಸಿದ್ದ ಆರ್ಜಿ ಗ್ರಾಮದಲ್ಲಿ ಮತದಾರರು ಹಕ್ಕು ಚಲಾಯಿಸಿದರು. ತಹಶೀಲ್ದಾರ್ ಮನವೊಲಿಸಿ ಮತದಾನ ಮಾಡುವಂತೆ ಕೋರಿದ್ದರು. ಸಮಸ್ಯೆ ಪರಿಹರಿಸುವ ಭರವಸೆ ಹಿನ್ನೆಲೆ ಗ್ರಾಮಸ್ಥರು ಮತದಾನದಲ್ಲಿ ಪಾಲ್ಗೊಂಡರು.
೧೩೬ ಕ್ಷೇತ್ರಗಳ, ೩೬೬ ಸ್ಥಾನಗಳಿಗೆ ೯೨೪ ಅಭ್ಯರ್ಥಿಗಳು ಎರಡನೇ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಲು ಅಂತಿಮ ಕಣದಲ್ಲಿದ್ದರು. ಹಲವರು ಪಕ್ಷಗಳ ಬೆಂಬಲದಿAದ ಕಣಕ್ಕಿಳಿದಿದ್ದರೆ, ಕೆಲವರು ಸ್ವತಂತ್ರö್ಯ ಅಭ್ಯರ್ಥಿಗಳಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕೊನೆ ಹಂತದಲ್ಲಿ ಅಭ್ಯರ್ಥಿಗಳು ಮತಗಟ್ಟೆಗೆ ಬರುವ ಮತದಾರರ ಬಳಿ ಮತಯಾಚಿಸುವ ದೃಶ್ಯಗಳು ಕಂಡುಬAದವು. ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು, ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಎಲ್ಲಾ ಮತಗಟ್ಟೆಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿತ್ತು. ಮತದಾರರ ಬಳಿ ಮತಯಾಚಿಸುವ ದೃಶ್ಯಗಳು ಕಂಡುಬAದವು. ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು, ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಎಲ್ಲಾ ಮತಗಟ್ಟೆಗಳ ಸುತ್ತಲಿನ ೨೦೦ ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿತ್ತು.
(ಮೊದಲ ಪುಟದಿಂದ) ಶೇ ೫೮.೬೩ ಮತದಾನವಾಯಿತು. ೫ ಗಂಟೆಯ ಹೊತ್ತಿಗೆ ಶೇ. ೬೯.೫೧ ಮತದಾನವಾಯಿತು.
ಸೂಕ್ತ ಭದ್ರತೆ: ತಾಲೂಕಿನಲ್ಲಿ ೫೦ ಸೂಕ್ಷö್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು, ೧೮ ಅತೀ ಸೂಕ್ಷö್ಮ, ೪ ನಕ್ಸಲ್ ಪೀಡಿತ, ೧೧೧ ಸಾಮಾನ್ಯ ಕ್ಷೇತ್ರ, ಇದರೊಂದಿಗೆ ೧೨೮ ಮಾನವ-ಪ್ರಾಣಿ ಸಂಘರ್ಷ ಇರುವ ಪ್ರದೇಶ ಎಂದು ಗುರುತಿಸಲ್ಪಟ್ಟ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
೧ ಡಿವೈಎಸ್‌ಪಿ, ೪ ವೃತ್ತ ನಿರೀಕ್ಷಕರು, ೧೧ ಸಬ್ ಇನ್ಸ್ಪೆಕ್ಟರ್, ೩೩ ಎಎಸ್‌ಐ, ೨೬೦ ಪೋಲಿಸರು, ೧ ಕೆಎಸ್‌ಆರ್‌ಪಿ, ೩ ಡಿಎಆರ್ ತುಕಡಿ, ನಕ್ಸಲ್ ಪೀಡಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ೩ ಶಸ್ತçಸಜ್ಜಿತ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು ಮೂರು ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ ೨೨೦ ಪಿಆರ್‌ಓ, ೨೨೦ ಎಪಿಆರ್‌ಓ, ೪೪೦ ಪೋಲಿಂಗ್ ಆಫೀಸರ್‌ಗಳನ್ನು ನಿಯೋಜಿಸಲಾಗಿತ್ತು.
ನಿಷೇಧಾಜ್ಞೆ ಜಾರಿ ಹಿನ್ನೆಲೆ ಎಲ್ಲಾ ವಿಧದ ಸಂತೆ, ಜಾತ್ರೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಎಲ್ಲಾ ವಿಧದ ಮದ್ಯಗಳ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಬಾರ್, ರೆಸ್ಟೋರೆಂಟ್, ಕ್ಲಬ್, ಹೊಟೇಲ್‌ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿತ್ತು. ಚುನಾವಣೆ ಹಿನ್ನೆಲೆ ತಾಲೂಕಿಗೆ ಹೊಂದಿಕೊAಡತೆ ಇರುವ ಕೇರಳ ರಾಜ್ಯದ ೫ ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು.
ಕೊರೊನಾ ಸೋಂಕಿತರಿAದ ಮತದಾನ
ಕೋವಿಡ್ ಹಿನ್ನೆಲೆ ಪ್ರತಿ ಮತಗಟ್ಟೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಪ್ರತಿ ಮತಗಟ್ಟೆಯಲ್ಲಿ ಥರ್ಮಲ್ ಸ್ಕಾö್ಯನರ್ ಮೂಲಕ ಮತದಾರರ ಉಷ್ಣಾಂಶ ಪರೀಕ್ಷೆ ನಡೆಸಿ ಬಳಿಕ ಮತಗಟ್ಟೆಗೆ ಕಳುಹಿಸಲಾಯಿತು. ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್ ಸೋಂಕಿತರು ಕೊನೆಯ ಒಂದು ಗಂಟೆ ಅವಧಿಯೊಳಗೆ ಗ್ರಾ.ಪಂ ಪಿಡಿಓಗೆ ಮಾಹಿತಿ ನೀಡಿ ಆರೋಗ್ಯ ಇಲಾಖೆಯ ಸೂಚನೆಯೊಂದಿಗೆ ಬಂದು ಮತದಾನ ಮಾಡಲು ಅವಕಾಶ ಕಲ್ಪಿಸಿದ ಹಿನ್ನೆಲೆ ತಾಲೂಕಿನಲ್ಲಿ ೨೩ ಕೊರೊನಾ ಸೋಂಕಿತರ ಪೈಕಿ ೪ ಕೊರೊನಾ ಸೋಂಕಿತರು ಮತದಾನ ಮಾಡಿದರು. ಅಮ್ಮತ್ತಿ-ಒಂಟಿಯAಗಡಿ, ಪುಲಿಯೇರಿ, ಗುಹ್ಯ, ಕರಡಿಗೋಡು ಬೂತ್‌ಗಳಲ್ಲಿ ನಾಲ್ವರು ಪ್ರತ್ಯೇಕವಾಗಿ ಮತ ಚಲಾಯಿಸಿದರು.
ಸೋಂಕಿತರನ್ನು ಮತಗಟ್ಟೆಗೆ ಕರೆತರಲು ಹಾಗೂ ಕರೆದೊಯ್ಯಲು ಆರೋಗ್ಯ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಮತದಾನಕ್ಕೆ ಬರುವ ಸೋಂಕಿತರು ಪಿಪಿಇ ಕಿಟ್ ಧರಿಸಿ ಹಕ್ಕು ಚಲಾಯಿಸಿದರು. ಕೋವಿಡ್ ಲಕ್ಷಣಗಳು ಕಂಡುಬAದ ವ್ಯಕ್ತಿಗಳನ್ನು ಕೂಡಲೇ ಐಸೂಲೇಟ್ ಮಾಡಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡುವ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿತ್ತು. ಮತದಾನಕ್ಕೆ ನಿಗಧಿಪಡಿಸಿದ ಕೊಠಡಿಯಲ್ಲಿ ಶೇ.೧ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸಲಾಗಿತ್ತು. - ಹೆಚ್.ಜೆ. ರಾಕೇಶ್