ವೀರಾಜಪೇಟೆ, ಡಿ. ೨೭: ವೀರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠಕ್ಕೆ ಸೇರಿದ ವೀರಾಜಪೇಟೆಯಲ್ಲಿರುವ ಚಿಕ್ಕಮಠಕ್ಕೆ ಸೇರಿದ ಕುಕ್ಲೂರು ಗ್ರಾಮ ವ್ಯಾಪ್ತಿಯ ಸರ್ವೆ ನಂ ೨೭೪ರಲ್ಲಿರುವ ೪.೧೫ ಎಕರೆ ಜಾಗದ ವಿವಾದಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ಎ. ಪಾಟೀಲ್, ನಟರಾಜ್ ರಂಗಸ್ವಾಮಿ ಅವರುಗಳ ವಿಭಾಗೀಯ ಪೀಠ ಚಿಕ್ಕ ಮಠದ ಪರವಾಗಿ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ವೀರಾಜಪೇಟೆ ಪಟ್ಟಣದ ಹೃದಯಭಾಗದಲ್ಲಿರುವ ಈ ೪ ಎಕರೆ ೧೫ ಸೆಂಟು ಜಾಗವನ್ನು ೩೧-೦೫-೨೦೧೬ ರಂದು ಜಾಗದ ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಇದು ಪೈಸಾರಿ ಎಂದು ಪರಿಗಣಿಸಿ ಆಗಿನ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಅವರು ಇದರಲ್ಲಿ ಎರಡು ಎಕರೆ ಜಾಗವನ್ನು ಆಧುನಿಕ ಸಮುಚ್ಚಯ ನ್ಯಾಯಾಲಯ ಸಂಕೀರ್ಣಕ್ಕೆ ಹಾಗೂ ಉಳಿದ ಎರಡು ಎಕರೆ ಹದಿನೈದು ಸೆಂಟು ಜಾಗವನ್ನು ಅಗ್ನಿಶಾಮಕ ದಳದ ಘಟಕಕ್ಕೆ ಮಂಜೂರು ಮಾಡಿ ಆದೇಶ ಹೊರಡಿಸಿದ ವಿರುದ್ಧ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.ಶತಮಾನದ ಹಿಂದೆಯಿAದಲೇ ಈ ೪.೧೫ ಸೆಂಟು ಜಾಗ ವೀರಾಜಪೇಟೆಯ ಚಿಕ್ಕ ಮಠಕ್ಕೆ ದಾನವಾಗಿ ಬಂದಿದ್ದು ಅಂದಿನಿAದಲೇ ಜಾಗzಅಭಿವೃದ್ಧಿಗೆ ಮಠ ವಿರೋಧಿಯಲ್ಲ. ಸಾರ್ವಜನಿಕ ಅಭಿವೃದ್ಧಿಯನ್ನು ಸಾರ್ವಜನಿಕ ಸೇವೆಯನ್ನು ಮಠ ಬೆಂಬಲಿಸಲಿದೆ. ಅರಮೇರಿ ಮಠವು ಒಂದು ಧಾರ್ಮಿಕ ಸಂಸ್ಥೆಯಾಗಿದ್ದು ಈ ಮಠ ಆರ್ಥಿಕವಾಗಿ ಸದೃಢವಾಗ ಬೇಕಾಗಿದೆ. ಈ ಮಠದ ಜಾಗ ಸರಕಾರಕ್ಕೆ ಬೇಕಿದ್ದರೆ ಈ ಜಾಗ ಮಠಕ್ಕೆ ಸೇರಿದ್ದೆಂದು ಮೊದಲು ಒಪ್ಪಿಕೊಳ್ಳಲಿ. ನಂತರ ನ್ಯಾಯಸಮ್ಮತವಾಗಿ ಪರಿಹಾರ ನಿಗದಿಪಡಿಸಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಿ ಎಂದು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
À ದಾಖಲೆಗಳೆಲ್ಲ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸರ್ವೆ ನಂ ೮೦/೧ ೮೦/೨ರ ಜಾಗವು ಅರಮೇರಿ ಕಳಂಚೇರಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೆಸರಿನಲ್ಲಿದೆ. ಜಾಗದ ಸ್ವಾಧೀನವು ಮಠದ ವಶದಲ್ಲಿದೆ. ವೀರಾಜಪೇಟೆ ಅರಮೇರಿ ಕಳಂಚೇರಿಯ ಚಿಕ್ಕಮಠದ ಜಾಗದ ಕುರಿತು ಮಾಲೀಕತ್ವದ ವಿವಾದ ತೀರ್ಮಾನವಾಗಲಿ ನಂತರ ಮಠದ ಜಾಗಕ್ಕೆ (ಮೊದಲ ಪುಟದಿಂದ) ಸಂಬAಧಿಸಿದAತೆ ನಿರ್ಧರಿಸೋಣ ಎಂಬುದು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಅನಿಸಿಕೆಯಾಗಿದೆ.
ಕಳೆದ ೧೯೦೫ ರಿಂದಲೂ ಈ ಜಾಗವು ಮಠದ ಸ್ವಾಧೀನದಲ್ಲಿದ್ದು ಜಾಗದ ದಾಖಲೆಗಳೆಲ್ಲ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಹೆಸರಿನಲ್ಲಿ ಖಾತೆ ಮುಂದುವರೆದಿದೆ. ೨೦೧೬ರಲ್ಲಿದ್ದ ಆಗಿನ ಜಿಲ್ಲಾಧಿಕಾರಿಯವರು ಇದನ್ನು ಪೈಸಾರಿ ಎಂದು ವಿವಾದ ಸೃಷ್ಟಿಸಿ ಅರಮೇರಿ ಕಳಂಚೇರಿಯ ಚಿಕ್ಕಮಠದ ಹೆಸರಿಗೆ ಕಳಂಕತAದಿದ್ದಾರೆ. ಸಾರ್ವಜನಿಕ ಸೋಮವಾರಪೇಟೆ, ಡಿ.೨೭: ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಎಮ್ಮೆ ಸುಗ್ಗಿ ಉತ್ಸವ ನಗರಳ್ಳಿ ಸುಗ್ಗಿ ಬನದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿAದ ನಡೆಯಿತು.
ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ, ಎಡದಂಟೆ, ಕುಂದಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಇನಕನಳ್ಳಿ, ಕೊತ್ತನಳ್ಳಿ, ಬೀಕಳ್ಳಿ, ಜಕ್ಕನಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸುಗ್ಗಿಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ನಂತರ ಎಮ್ಮೆ ಸುಗ್ಗಿ ಬನದಲ್ಲಿ ದೇವಿಗೆ ಕಾಣಿಕೆೆ ಒಪ್ಪಿಸಿ, ಎಮ್ಮೆ ಹಾಗೂ ಕೋಣಕ್ಕೆ ದೇವರ ಒಡೆಕಾರರು ಪೂಜೆ ಸಲ್ಲಿಸಿ, ಅವುಗಳನ್ನು ಕಾಡಿಗೆ ಓಡಿಸಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕಾರ್ಯದರ್ಶಿ