ಚೆಟ್ಟಳ್ಳಿ, ಡಿ. ೨೭: ಎಸ್.ಎಸ್.ಎಫ್ ಪಾಲಿಬೆಟ್ಟ ಸೆಕ್ಟರ್ ಸಮಿತಿಯ ವಾರ್ಷಿಕ ಮಹಾಸಭೆ ಮಟ್ಟಮ್ ಶಾಖೆಯಲ್ಲಿ ಸೆಕ್ಟರ್ ಅಧ್ಯಕ್ಷ ಅಶ್ಕರ್ ಜೈನಿ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಕಾರ್ಯದರ್ಶಿಗಳಾದ ಶಕೀರ್ ಮಾಸ್ಟರ್ ಪೊನ್ನತ್ಮೊಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಜುನೈದ್ ಅಮ್ಮತ್ತಿ ಹಾಗೂ ವೀರಾಜಪೇಟೆ ಡಿವಿಷನ್ ಅಧ್ಯಕ್ಷರಾದ ಯೂಸುಫ್ ಜೈನಿ ಕಾರ್ಯಕರ್ತರಿಗೆ ತರಗತಿಯನ್ನು ನಡೆಸಿದರು. ಕಾರ್ಯಕ್ರಮದ ನಿರ್ವಹಣಾ ಅಧಿಕಾರಿಯಾಗಿ ಜಲಾಲ್ ಮುಸ್ಲಿಯಾರ್ ಆಗಮಿಸಿದ್ದರು.

ನಂತರ ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಫ್ನಾಸ್ ಹೊಲಮಾಳ, ಪ್ರಧಾನ ಕಾರ್ಯದರ್ಶಿಯಾಗಿ ಸಾಬಿತ್ ಮಾಲ್ದಾರೆ, ಕೋಶಾಧಿಕಾರಿಯಾಗಿ ಜಾಬಿರ್ ಹುಂಡಿ, ಉಪಾಧ್ಯಕ್ಷರಾಗಿ ಹಾರಿಸ್ ಬಯಾನಿ ಹುಂಡಿ, ಕಮರುದ್ದೀನ್ ಅಹ್ಸನಿ ಮಾಲ್ದಾರೆ ಹಾಗೂ ಕಾರ್ಯದರ್ಶಿಗಳಾಗಿ ರಶಾದ್ ಹೊಲಮಾಳ, ಲತೀಫ್ ಫೈಜಾನಿ ಹುಂಡಿ, ಮಿಸ್ಹಬ್ ಹುಂಡಿ, ರಂಷೀದ್ ಪಾಲಿಬೆಟ್ಟ, ಸ್ವಾಲಿಹ್ ಮಾಲ್ದಾರೆ, ರಂಶಾದ್ ಹೊಲಮಾಳ ಆಯ್ಕೆಯಾದರು.

ಈ ಸಂದರ್ಭ ಜಿಲ್ಲಾಸಮಿತಿ ಸದಸ್ಯ ಜುಬೈರ್ ಸಅದಿ, ಮಾಜಿ ಕಾರ್ಯದರ್ಶಿ ಜಾಬಿರ್ ಮಟ್ಟಮ್, ವೀರಾಜಪೇಟೆ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ನಿಜಾಮುದ್ದೀನ್ ಮಟ್ಟಂ, ಹಾರಿಸ್ ಸಖಾಫಿ ಮಟ್ಟಮ್ ಇನ್ನಿತರರು ಕಾರ್ಯಕರ್ತರು ಹಾಜರಿದ್ದರು.