ಸೋಮವಾರಪೇಟೆ, ಡಿ.೨೭: ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಎಮ್ಮೆ ಸುಗ್ಗಿ ಉತ್ಸವ ನಗರಳ್ಳಿ ಸುಗ್ಗಿ ಬನದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮದಿAದ ನಡೆಯಿತು.

ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ, ಎಡದಂಟೆ, ಕುಂದಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಬೆಟ್ಟದಕೊಪ್ಪ, ಇನಕನಳ್ಳಿ, ಕೊತ್ತನಳ್ಳಿ, ಬೀಕಳ್ಳಿ, ಜಕ್ಕನಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಸ್ಥರು ಸುಗ್ಗಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸುಗ್ಗಿಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ನಂತರ ಎಮ್ಮೆ ಸುಗ್ಗಿ ಬನದಲ್ಲಿ ದೇವಿಗೆ ಕಾಣಿಕೆೆ ಒಪ್ಪಿಸಿ, ಎಮ್ಮೆ ಹಾಗೂ ಕೋಣಕ್ಕೆ ದೇವರ ಒಡೆಕಾರರು ಪೂಜೆ ಸಲ್ಲಿಸಿ, ಅವುಗಳನ್ನು ಕಾಡಿಗೆ ಓಡಿಸಲಾಯಿತು.

ಈ ಸಂದರ್ಭ ಸಮಿತಿಯ ಅಧ್ಯಕ್ಷ ಕೆ.ಟಿ. ಜೋಯಪ್ಪ, ಕಾರ್ಯದರ್ಶಿ ಎನ್.ಕೆ. ಪ್ರಕಾಶ್, ದೇವರ ಒಡೆಕಾರರಾದ ವೆಂಕಟೇಶ್, ತನುಶಿ, ರಾಜು, ಸತೀಶ್, ಶಶಿಕುಮಾರ್ ಮತ್ತಿತರರು ಇದ್ದರು. ಉತ್ಸವದಲ್ಲಿ ಭಾಗವಹಿಸಿದ್ದ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.