ವೀರಾಜಪೇಟೆ, ಡಿ. ೨೭: ಕೋವಿಡ್-೧೯ ಹಿನ್ನೆಲೆ ಸರಕಾರದ ಮಾರ್ಗಸೂಚಿಯಂತೆ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಥರ್ಮಲ್ ಸ್ಕಿçÃನ್ ಪರೀಕ್ಷೆಯಾದ ನಂತರ ಪರಸ್ಪರ ಅಂತರ ಕಾಯ್ದುಕೊಂಡು ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.

ವೀರಾಜಪೇಟೆ ವಿಭಾಗದ ಕೊಡಗು-ಕೇರಳ ರಾಜ್ಯ ಹೆದ್ದಾರಿ ಭಾಗವಾದ ಆರ್ಜಿ ಗ್ರಾಮ ಪಂಚಾಯಿತಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆ ೭ ಗಂಟೆಯಿAದ ನೀರಸ ಮತದಾನ ಉಂಟಾಗಿ ನಂತರ ಮತದಾನದ ವೇಗ ಪಡೆದುಕೊಂಡಿತು. ಅಪರಾಹ್ನ ಒಂದು ಗಂಟೆ ವೇಳೆಗೆ ಶೇಕಡ ೪೫ ರಷ್ಟು ಮತದಾನವಾಯಿತು. ಬೇಟೋಳಿ ಗ್ರಾಮ ಪಂಚಾಯಿತಿ ಯಲ್ಲಿಯೂ ಅಪರಾಹ್ನದ ವೇಳೆಗೆ ಶೇಕಡ ೪೦ ರಷ್ಟು ಮತದಾನ ನಡೆಯಿತು.

ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ ಮರೂರು ಗ್ರಾಮದ ಮಹಿಳಾ ಸಮಾಜ ಹಾಗೂ ಅಂಗನವಾಡಿ ಮತಗಟ್ಟೆಗಳಲ್ಲಿ ಕಾರ್ಮಿಕ ಮತದಾರರು ಮತಗಟ್ಟೆ ಆರಂಭಗೊAಡ ತಕ್ಷಣ ಮತದಾನ ಮಾಡಿ ಕಾಫಿ ತೋಟದ ಕೆಲಸಕ್ಕೆ ಹಾಜರಾದರು. ಕಾಕೋಟು ಪರಂಬುವಿನ ಪ್ರಾಥಮಿಕ ಶಾಲೆ ಯಲ್ಲಿಯೂ ಮತದಾರರು ಉತ್ಸಾಹ ದಿಂದ ಮತದಾನ ಮಾಡಿದರು.

ಅಮ್ಮತ್ತಿ, ಕಾವಾಡಿ, ಕಣ್ಣಂಗಾಲ ಬಿಟ್ಟಂಗಾಲ, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಮಿಕರು, ಇತರ ಮತದಾರರು ಆಸಕ್ತಿಯಿಂದ ಮತದಾನ ಮಾಡಿದರು. ವೀರಾಜಪೇಟೆ ವಿಭಾಗದ ಮತಗಟ್ಟೆ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ನೂರು ಮೀಟರ್ ಅಂತರದಲ್ಲಿ ಪ್ರಚಾರ ಮಾಡುತ್ತಿದ್ದರು. ಮತದಾರರನ್ನು ಪರಿಷ್ಕೃತ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಈ ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.