ಮಡಿಕೇರಿ, ಡಿ. 24: ಗೋಣಿಕೊಪ್ಪಲು - ಪೊನ್ನಂಪೇಟೆ ರಸ್ತೆಯಲ್ಲಿ ಇಂದು ಅಪರಾಹ್ನದ ವೇಳೆಗೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು 11 ಗಂಟೆಯಿಂದ 1 ಗಂಟೆಯ ತನಕವೂ ವಾಹನ ಸಂಚಾರ ದುಸ್ತರವಾಗಿತ್ತೆನ್ನಲಾಗಿದೆ. ಕಿ.ಮೀ. ಗಟ್ಟಲೆ ವಾಹನಗಳು ಸರತಿ ಸಾಲಿನಲ್ಲೇ ಸಂಚರಿಸುವಂತಾಗಿತ್ತು. ಲಾರಿಯೊಂದು ರಸ್ತೆಯಲ್ಲಿ ದುರಸ್ತಿಗೊಂಡ ಪರಿಣಾಮ ಈ ಪ್ರಸಂಗ ಎದುರಾಯಿತಾದರೂ ವಾಹನದಟ್ಟಣೆಯೂ ಹೆಚ್ಚಾಗಿತ್ತು. ಬಹುತೇಕ ಹೊರ ಜಿಲ್ಲೆ - ರಾಜ್ಯಗಳ ವಾಹನಗಳೇ ಕಂಡು ಬಂದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕ್ರಿಸ್‍ಮಸ್ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಈಗಾಗಲೇ ಪ್ರವಾಸಿಗಳು ಭರ್ತಿಯಾಗಿದ್ದಾರೆ ಎಂದು ಅವರುಗಳು ಹೇಳಿದ್ದಾರೆ.