ಮಡಿಕೇರಿ, ಡಿ. 24: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮದೆನಾಡು ಗ್ರಾಮದಲ್ಲಿ ತಾ. 21 ರ ರಾತ್ರಿ ಅಕ್ರಮ ಬೇಟೆ ಸಂದರ್ಭ ವ್ಯಕ್ತಿಯೋರ್ವರು ಗುಂಡೇಟಿಗೆ ಬಲಿಯಾಗಿರುವ ಪ್ರಕರಣದ ಆರೋಪಿ ಬೆಳ್ಯಪ್ಪ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅಂದು ರಾತ್ರಿ ಗುಂಡೇಟಿಗೆ ಪರಮೇಶ್ವರ್ (ಕಿರಣ್) ಎಂಬವರು ಸಾವಿಗೀಡಾಗಿದ್ದು ಈ ಬಗ್ಗೆ ಮೃತರ ಸಹೋದರ ಕೀರ್ತನ್ ಕೊಲೆ ಪ್ರಕರಣದಂತೆ ದೂರು ನೀಡಿದ್ದರು. ಇದರಂತೆ ಮೊಕದ್ದಮೆ ದಾಖಲಾಗಿದ್ದು, ಬಂಧಿತ ಆರೋಪಿ ಬೆಳ್ಯಪ್ಪನನ್ನು 40 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬ ಬಗ್ಗೆ ತನಿಖೆ ಮುಂದುವರಿಯುತ್ತಿರುವುದಾಗಿ ವೃತ್ತ ನಿರೀಕ್ಷಕ ದಿವಾಕರ್ ತಿಳಿಸಿದ್ದಾರೆ.