ವೀರಾಜಪೇಟೆ ಡಿ. ೨೩: ಕ್ರಿಸ್ಮಸ್ ಆಚರಣೆ ಸಂಭ್ರಮ ಆರಂಭ ಗೊಂಡಿದ್ದು, ಕ್ರೆöÊಸ್ತರ ಮನೆ, ಚರ್ಚ್, ಅಂಗಡಿ ಮಳಿಗೆ, ಮಾಲ್‌ಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.ವೀರಾಜಪೇಟೆಯಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಚರ್ಚ್ಗಳಲ್ಲಿ ಪೂರ್ವಭಾವಿ ಸಿದ್ಧತೆ ನಡೆದು, ಕ್ರಿಸ್ಮಸ್ ತಿಂಗಳ ನಾಲ್ಕು ರವಿವಾರ ಚರ್ಚ್ನಲ್ಲಿ ಬಲಿ ಪೂಜೆಗಳು ನೆರವೇರಿತು.
ವೀರಾಜಪೇಟೆ ಭಾಗದ ಕ್ರೆöÊಸ್ತರ ಮನೆಗಳಲ್ಲಿ ಮತ್ತು ಚರ್ಚ್ಗಳಲ್ಲಿ ಕ್ರಿಸ್ಮಸ್ ಸಂಬAಧಿತ ಗೋದಲಿ (ಕ್ರಿಬ್) ರಚನೆಗೆ ತಯಾರಿಗಳಾಗಿವೆ. ಕ್ರಿಸ್ಮಸ್ ಗೀತೆಗಳ (ಕ್ಯಾರಲ್) ಗಾಯನಕ್ಕೆ ಸಂಬAಧಿಸಿ ಚರ್ಚ್ಗಳಲ್ಲಿ ತರಬೇತಿಗಳಾಗಿವೆ. ಮನೆಮನೆೆಗಳಿಗೆ ತೆರಳಿ ಕ್ರಿಸ್ಮಸ್ ಸಂದೇಶ ಸಾರುವ ಕ್ರಿಸ್ಮಸ್ ಕ್ಯಾರಲ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕ್ರಿಸ್ಮಸ್ ಸಂತೋಷವನ್ನು ಹಂಚಿಕೊಳ್ಳಲು ಕಳುಹಿಸುವ ಕ್ರಿಸ್ಮಸ್ ಶುಭಾಶಯ ಕಾರ್ಡ್ಗಳು, ಗೋದಲಿ, ಮನೆ ಮತ್ತು ಮನೆಯ ಆವರಣ, ಚರ್ಚ್ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್)ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ವೇಷ ಭೂಷಣ ಇತ್ಯಾದಿಗಳು ಮಾರುಕಟ್ಟೆಗೆ ಬಂದಿದ್ದು, ಅಂಗಡಿ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಅವುಗಳ ಭರ್ಜರಿ ಮಾರಾಟವೂ ನಡೆಯುತ್ತಿದೆ.
ಮಾಲ್, ಮಳಿಗೆಗಳಲ್ಲಿ ಹಾಗೂ ದೊಡ್ಡ ಹೊಟೇಲ್‌ಗಳಿರುವ ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕೃತ ವಾಗಿವೆ. ವೈವಿಧ್ಯಮಯ ಅಲಂಕಾರಿಕ ವಸ್ತುಗಳು ಮಾರಾಟವಾಗುತ್ತಿದೆ.
ಬೇಕರಿಗಳಲ್ಲಿ ಕ್ರಿಸ್ಮಸ್ ಕೇಕ್ ಮತ್ತು ಕ್ರಿಸ್ಮಸ್ ವಿಶೇಷ ತಿಂಡಿ ಕುಸ್ವಾರ್ ಮಾರಾಟ ಆರಂಭವಾಗಿದೆ. ಕ್ರಿಸ್ಮಸ್ ಸ್ಪೆಷಲ್ ಕೇಕ್ ಜತೆಗೆ ವಿವಿಧ ಬಗೆಯ ಆರ್ಡಿನರಿ ಪ್ಲಮ್ ಕೇಕ್, ಘೀ ಪ್ಲಮ್ ಕೇಕ್, ವೈಟ್ ಪ್ಲಮ್ ಕೇಕ್, ಎಗ್‌ಲೆಸ್ ಪ್ಲಮ್ ಕೇಕ್, ಶುಗರ್ ಘೀ ಪ್ಲಮ್ ಕೇಕ್‌ಗಳನ್ನು ಕೂಡ ತಯಾರಿಸಲಾಗಿದೆ. - ಈಶಾನ್ವಿ