ವೀರಾಜಪೇಟೆ, ಡಿ. ೨೩: ವೀರಾಜಪೇಟೆ ಸಮುಚ್ಚಯ ನ್ಯಾಯಾಲಯಗಳ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ಐ.ಆರ್. ಪ್ರಮೋದ್ ಹಾಗೂ ಉಪಾಧ್ಯಕ್ಷರಾಗಿ ಬಾಚಟ್ಟೀರ ಎನ್. ಸುಬ್ಬಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆವರಣದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮಂಡೇಪAಡ ಕೆ. ದಿನೇಶ್, ಜಂಟಿ ಕಾರ್ಯದರ್ಶಿ ವಿ.ಎನ್. ಪ್ರೀತಮ್, ಖಜಾಂಚಿಯಾಗಿ ವಿ.ಜಿ. ರಾಕೇಶ್ ಹಾಗೂ ಸಮಿತಿಯ ಸದಸ್ಯರುಗಳಾಗಿ ಕೆ.ಸಿ. ಪ್ರದ್ಯುಮ್ನ, ಎನ್.ಎಸ್. ಪ್ರಶಾಂತ್, ಕೆ.ವಿ. ಸುನೀಲ್, ಎನ್. ನರೇಂದ್ರನಾಥ್ ಕಾಮತ್, ಎ.ಆರ್. ರಂಜನ್ ಹಾಗೂ ಸಿ.ಕೆ. ಪೊನ್ನಣ್ಣ ಅವರುಗಳು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಆಯ್ಕೆ ಸಂದರ್ಭ ಚುನಾವಣಾಧಿಕಾರಿಯಾಗಿ ವಕೀಲ ಎಂ.ಎA. ಪೂವಣ್ಣ ಕಾರ್ಯನಿರ್ವಹಿಸಿದರು.