ಸೋಮವಾರಪೇಟೆ, ಡಿ. ೨೩: ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾAಧಿ ಹುಟ್ಟುಹಬ್ಬದ ಪ್ರಯುಕ್ತ ದೇಶದಲ್ಲಿ ಕೋಮು ಸೌಹಾರ್ದತೆ ಹಾಗೂ ಶಾಂತಿ ನೆಲೆಸಬೇಕೆಂದು ಪ್ರಾರ್ಥಿಸಲು ಇಲ್ಲಿನ ಆಂಜನೇಯ ದೇವಾಲಯದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪದಾಧಿಕಾರಿಗಳಾದ ಸತ್ಯನಾರಾಯಣ, ಗಿರೀಶ, ಪ್ರಸನ್ನ, ಪುನೀತ, ಮನೋಜ್, ಮುರಳಿ, ಸೂರ್ಯ ಸೇರಿದಂತೆ ಇತರರು ಪಾದಯಾತ್ರೆ ನಡೆಸಿದರು.