ಸೋಮವಾರಪೇಟೆ, ಡಿ. ೨೩ : ನಿನ್ನೆ ಮತದಾನದ ಸಂದರ್ಭ ಕಾರ್ಯಕರ್ತರ ನಡುವೆ ಬೂದಿ ಮುಚ್ಚಿದ ಕೆಂಡದAತಿದ್ದ ವೈಮನಸ್ಸು ಸಂಜೆಯ ವೇಳೆಗೆ ಭುಗಿಲೆದ್ದು, ಒಂದೇ ಊರಿನವರು ಬಡಿದಾಡಿಕೊಂಡಿದ್ದಾರೆ. ಈ ಸಂದರ್ಭ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರೂ, ಘಟನೆಯಿಂದ ಸಣ್ಣಪುಟ್ಟ ಗಾಯಗೊಂಡಿದ್ದ ಅಣ್ಣಪ್ಪ ಎಂಬವರು ಠಾಣೆಯಲ್ಲಿ ವಿರೋಧಿ ಬಣದವರ ವಿರುದ್ಧ ದೂರು ನೀಡಿದ್ದಾರೆ.

ಈ ದೂರಿಗೆ ಸಂಬAಧಿಸಿದAತೆ ಇಂದು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ವಿಚಾರಣೆ ನಡೆದು ಬಜೆಗುಂಡಿಯ ನಿವಾಸಿ, ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಬಿ.ಎಂ. ಪ್ರಶಾಂತ್ ಸೇರಿದಂತೆ ಇತರರಿಂದ ಮುಚ್ಚಳಿಕೆ ಬರೆಸಿಕೊಂಡು, ಪ್ರಕರಣವನ್ನು ಇತ್ಯರ್ಥಪಡಿಸಿ ಕಳುಹಿಸಿಕೊಡಲಾಗಿತ್ತು.

ಇಂದು ಮಧ್ಯಾಹ್ನ ೩.೩೦ರ ಸಮಯದಲ್ಲಿ ಬೇಳೂರು ಗ್ರಾ.ಪಂ. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಜಿ. ಪ್ರಶಾಂತ್ ಅವರು ತನ್ನ ಸ್ನೇಹಿತ ನವೀನ್ ಅವರನ್ನು ಕುಸುಬೂರಿನ ಮನೆಗೆ ಬಿಟ್ಟು ವಾಪಸ್ ಆಗುವ ಸಂದರ್ಭ, ಕಾರನ್ನು ತಡೆದ ಕೆಲವರು ಪ್ರಶಾಂತ್ ಅವರನ್ನು ಹೊರಗೆಳೆಯಲು ಯತ್ನಿಸಿದ್ದಾರೆ.

ಈ ಸಂದರ್ಭ ಕಾರಿನ ಡೋರ್‌ಗಳನ್ನು ಲಾಕ್ ಮಾಡಿಕೊಂಡ ಪ್ರಶಾಂತ್, ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕಾರಿನ ಡೋರ್‌ಗಳನ್ನು ಎಳೆಯಲು ಪ್ರಯತ್ನಿಸಿ, ಗಾಜನ್ನು ಒಡೆಯಲು ಮುಂದಾಗಿದ್ದ ಗುಂಪನ್ನು ಸ್ಥಳೀಯ ಕೆಲವರು ತಡೆದಿದ್ದಾರೆ.

ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಪ್ರಶಾಂತ್ ಅವರು ಪೊಲೀಸರಿಗೆ ದೂರು ನೀಡಿದ್ದು, ಬಜೆಗುಂಡಿಯ ನಿವಾಸಿಗಳಾದ ಮಹಮ್ಮದ್ ಕುಂಞ, ಅಶ್ರಫ್, ನೌಷಾದ್, ಮಹಮ್ಮದ್ ರಿಯಾಜ್, ಭುವನೇಶ್, ರವಿ, ಕೇಬಲ್ ರಿಯಾಜ್, ವಿಜಯ್, ಸಫಾನ್, ನಾಸಿರ್, ಇಸ್ಮಾಯಿಲ್, ಫೌಜಿಲ್, ಪಾದು, ಮಹಮ್ಮದ್ ಬಿಲಾಲ್, ಸಮೀರ್ ಸೇರಿದಂತೆ ಇತರರು ತನ್ನ ಕಾರನ್ನು ತಡೆದು ಕೊಲೆ ಮಾಡುವ ಉದ್ದೇಶದಿಂದ ಕಾರಿಗೆ ಒಡೆದು ನಷ್ಟಪಡಿಸಿದ್ದೂ ಅಲ್ಲದೇ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಶೈಲೇಂದ್ರ, ಪೊಲೀಸ್ ವೃತ್ತ ನಿರೀಕ್ಷಕರುಗಳಾದ ಮಹೇಶ್, ಎಂ. ಮಹೇಶ್, ಠಾಣಾಧಿಕಾರಿಗಳಾದ ಶ್ರೀಧರ್, ಶಿವಶಂಕರ್ ಅವರುಗಳು ರಾತ್ರಿಯ ವರೆಗೂ ಸೋಮವಾರಪೇಟೆಯಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದು, ದೂರಿಗೆ ಸಂಬAಧಿಸಿದAತೆ ಕ್ರಮಕೈಗೊಂಡಿದ್ದಾರೆ.

ರಾಜಕೀಯ ಹಿನ್ನೆಲೆಯಿಂದ ಘರ್ಷಣೆಗಳು ನಡೆದ ಹಿನ್ನೆಲೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು, ಸ್ಥಳೀಯರು ಪೊಲೀಸ್ ಠಾಣೆಯ ಆವ