ಬ್ರಿಟನ್‌ನಿಂದ ಬರುವವರಿಗೆ ಮಾರ್ಗಸೂಚಿ

ಬೆಂಗಳೂರು, ಡಿ. ೨೩: ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿ, ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗೆ ಕೆಲವು ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ಬ್ರಿಟನ್‌ನಿಂದ ಆಗಮಿಸುವ ಎಲ್ಲಾ ಪ್ರಯಾಣಿಕರೂ ಆಗಮಿಸುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕಿದೆ, ಆರ್‌ಟಿ-ಪಿಸಿಆರ್ ನೆಗೆಟಿವ್ ಬಂದರೂ ೧೪ ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿರಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ. ಬಿಎಲ್‌ಆರ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ. ರಾಜ್ಯ ಸರ್ಕಾರ ಹೊರಡಿಸುವ ಸುತ್ತೋಲೆಯ ಪ್ರಕಾರ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಲಂಡನ್‌ನಿAದ ನೇರವಾಗಿ ಅಥವಾ ಲಂಡನ್‌ನಿAದ ಬೇರೆಡೆಗೆ ತೆರಳಿ ಭಾರತಕ್ಕೆ ಬರುವ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.

ಲಡಾಕ್‌ಗೆ ಸೇನಾ ಮುಖ್ಯಸ್ಥ ಭೇಟಿ

ನವದೆಹಲಿ, ಡಿ. ೨೩: ಚೀನಾದೊಂದಿಗೆ ಗಡಿ ಸಂಘರ್ಷ ಹೊಂದಿರುವ ಪೂರ್ವ ಲಡಾಕ್‌ನ ಅತಿ ಎತ್ತರದ ಫಾರ್ವರ್ಡ್ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎA. ನರವಣೆ, ಒಟ್ಟಾರೆ ಮಿಲಿಟರಿ ತಯಾರಿಗಳ ಪರಾಮರ್ಶೆ ನಡೆಸಿದ್ದಾರೆ. ಕಳೆದ ಜೂನ್ ತಿಂಗಳಿAದ ಪೂರ್ವ ಲಡಾಕ್‌ನಲ್ಲಿ ಸೇನೆ ನಿಲುಗಡೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಲಡಾಕ್‌ನ ರೆಚಿನ್ ಲಾ ಸೇರಿದಂತೆ ಫಾರ್ವರ್ಡ್ ಪ್ರದೇಶಗಳಿಗೆ ಭೇಟಿ ನೀಡಿ ಈ ಚಳಿಗಾಲದಲ್ಲಿ ಅಲ್ಲಿನ ಸೈನಿಕರ ಸ್ಥಿತಿಗತಿ, ಪ್ರದೇಶದ ಪರಿಸ್ಥಿತಿ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪೂರ್ವ ಲಡಾಕ್‌ನ ಹಲವು ಪರ್ವತ ಭಾಗಗಳಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನವಿದ್ದು ಯಾವುದೇ ಕ್ಷಣದಲ್ಲಿಯೂ ಯುದ್ಧವೇರ್ಪಡುವ ಸನ್ನಿವೇಶದಂತಿದೆ. ಸುಮಾರು ೫೦ ಸಾವಿರ ಭಾರತೀಯ ಸೇನಾಪಡೆಗಳು ನಿಯೋಜನೆಗೊಂಡಿವೆ. ಚೀನಾ ಕೂಡ ಸರಿಸುಮಾರು ಅಷ್ಟೇ ಪ್ರಮಾಣದ ಸೇನೆಯನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಫೈರ್ ಅಂಡ್ ಫುö್ಯರಿ ಕಾರ್ಪ್ಸ್ ಎಂದು ಕರೆಯಲ್ಪಡುವ ಲೇಹ್ ಮೂಲದ ೧೪ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಪೂರ್ವ ಲಡಾಕ್‌ನ ಸ್ಥಿತಿಗತಿ ಬಗ್ಗೆ ಸೇನಾ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.

ಖಲಿಸ್ತಾನಿ ಭಯೋತ್ಪಾದಕನ ಬಂಧನ

ನವದೆಹಲಿ, ಡಿ. ೨೩: ಖಲಿಸ್ತಾನ್ ಪ್ರತ್ಯೇಕರಾಜ್ಯಕ್ಕಾಗಿ ಭಾರತದಲ್ಲಿ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಸೈಪ್ರಸ್‌ನಿಂದ ಗಡಿಪಾರು ಮಾಡಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಶಸ್ತಾçಸ್ತç ಕಾಯ್ದೆ, ಮಹಾರಾಷ್ಟç ಪೊಲೀಸ್ ಕಾಯ್ದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪಿ ಗುರ್ಜೀತ್ ಸಿಂಗ್ ವಿರುದ್ಧ ಪ್ರಧಾನ ತನಿಖಾ ಸಂಸ್ಥೆ ಎನ್‌ಐಎ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಿಸಿತ್ತು. ಗುರ್ಜೀತ್ ಸಿಂಗ್ ಮುಖ್ಯ ಆರೋಪಿಯಾಗಿದ್ದು ಇವನೊಂದಿಗೆ ಹರ್ಷಲ್ ಮತ್ತು ಮೊಯಿನ್ ಖಾನ್ ಎಂಬಿಬ್ಬರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗುವ ಮೂಲಕ ಖಲಿಸ್ತಾನ್ ಪ್ರತ್ಯೇಕ ರಾಜ್ಯ ರಚನೆಯ ಅಂತಿಮ ಗುರಿಯೊಂದಿಗೆ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸುವ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ವಕ್ತಾರರು ತಿಳಿಸಿದ್ದಾರೆ.

ಜಿಲ್ಲಾ ನ್ಯಾಯಾಧೀಶ ಅಮಾನತು

ಡೆಹ್ರಾಡೂನ್, ಡಿ. ೨೩: ಉತ್ತರಾಖಂಡ ಹೈಕೋರ್ಟ್ ಡೆಹ್ರಾಡೂನ್ ಜಿಲ್ಲಾ ನ್ಯಾಯಾಧೀಶ ಪ್ರಶಾಂತ್ ಜೋಶಿಯವರನ್ನು ಅಮಾನತುಗೊಳಿಸಿದೆ ಹಾಗೂ ಅವರು ನ್ಯಾಯಾಂಗ ಅಧಿಕಾರಿಯಾಗಿ ಅನುಚಿತ ನಡವಳಿಕೆ ತೋರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ತಾ. ೨೨, ೨೦೨೦ ರ, ಅವರ ಕಾರ್ಯ ಮತ್ತು ನಡವಳಿಕೆ ಅನುಚಿತವಾಗಿದೆ, ಇದು ಉತ್ತರಾಖಂಡ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು, ೨೦೦೨ ರ ಅನೇಕ ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ ಗಂಭೀರ ದುಷ್ಕöÈತ್ಯಕ್ಕೆ ಕಾರಣವಾಗಿದೆ ಎಂದು ಹೇಳಿದೆ. ತಾ. ೨೧ ಮತ್ತು ೨೨ ರಂದು ಕ್ಯಾಂಪ್ ಕೋರ್ಟ್ಗೆ ಹಾಜರಾಗಲು ಮಸ್ಸೂರಿಗೆ ಪ್ರಯಾಣಿಸುತ್ತಿದ್ದಾಗ ನ್ಯಾಯಾಧೀಶರು ತಮ್ಮ ಅಧಿಕೃತ ಜಿಲ್ಲಾ ನ್ಯಾಯಾಧೀಶ ಎಂಬ ಫಲಕವನ್ನು ಖಾಸಗಿ ಆಡಿ ಕಾರಿನಲ್ಲಿ ಬಳಸಿದ್ದಾರೆಂದು ಆರೋಪ ಕೇಳಿಬಂದ ನಂತರ ಹೈಕೋರ್ಟ್ ಈ ಮೇಲಿನ ಕ್ರಮ ಕೈಗೊಂಡಿದೆ. ೨೦೨೦ ರ ತಾ. ೨೨ ರಂದು ಹೈಕೋರ್ಟ್ ನೀಡಿದ ಆದೇಶದಲ್ಲಿ, ಅಮಾನತುಗೊಂಡ ಅವಧಿಯಿಂದ ಮುಂದಿನ ಆದೇಶದವರೆಗೆಪ್ರಶಾಂತ್ ಜೋಶಿ ಅವರು ಜಿಲ್ಲಾ ನ್ಯಾಯಾಧೀಶರ ಪ್ರಧಾನ ಕಚೇರಿಯ ರುದ್ರಪ್ರಯಾಗದೊಡನೆ ಸಂಬAಧ ಹೊಂದಿರಲಿದ್ದಾರೆ. ಅಲ್ಲದೆ ಅವರು ನ್ಯಾಯಮೂರ್ತುಗಳ ಪೂರ್ವಾನುಮತಿ ಪಡೆಯದೆ ಸ್ಟೇಷನ್ ನಿಂದ ಹೊರ ಹೋಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮತಾಂತರಗೊAಡರೆ ತಡೆಯಲು ಸಾಧ್ಯವಿಲ್ಲ

ಕೋಲ್ಕತ್ತಾ, ಡಿ. ೨೩: ವಯಸ್ಕ ಹೆಣ್ಣು ಮಗಳು ತನ್ನ ಇಚ್ಛೆಯಂತೆ ಮದುವೆಯಾಗಿ ಧರ್ಮ ಮತಾಂತರಗೊAಡರೆ ಯಾರೂ ಹಸ್ತಕ್ಷೇಪ ಮಾಡಿ ತಡೆಯಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ. ೧೯ ವರ್ಷದ ಯುವತಿ ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ನಂತರ ಕೋಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಆಕೆಯ ತಂದೆ, ತಮ್ಮ ಮಗಳ ಮೇಲೆ ಪ್ರಭಾವ ಬೀರಿ ಅನ್ಯ ಧರ್ಮದ ವ್ಯಕ್ತಿ ಮದುವೆಯಾಗಿದ್ದು, ತನ್ನ ಮಗಳ ಹೇಳಿಕೆಯನ್ನು ಮ್ಯಾಜಿಸ್ಟೆçÃಟರ ಮುಂದೆ ದಾಖಲು ಸಹ ಮಾಡಿಕೊಳ್ಳಲು ಬಿಡಲಿಲ್ಲ ಎಂದು ಆರೋಪಿಸಿದ್ದರು. ಯುವತಿಯ ತಂದೆ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ಪೊಲೀಸರು ಯುವತಿಯನ್ನು ಜ್ಯುಡಿಷಿಯಲ್ ಮ್ಯಾಜಿಸ್ಟೆçÃಟ್ ಮುಂದೆ ಹಾಜರುಪಡಿಸಿದಾಗ ಆಕೆ ತನ್ನ ಇಷ್ಟದ ಪ್ರಕಾರವೇ ಮದುವೆಯಾಗಿರುವುದಾಗಿ ತಿಳಿಸಿದಳು.

ಫಾದರ್ ಥಾಮಸ್‌ಗೆ ಜೀವಾವಧಿ ಶಿಕ್ಷೆ

ತಿರುವನಂತಪುರ, ಡಿ. ೨೩: ಕೇರಳ ರಾಜ್ಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ತಿರುವನಂತಪುರA ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಶಿಕ್ಷೆ ಪ್ರಕಟಿಸಿದ್ದು, ತಪ್ಪಿತಸ್ಥರಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ೧೯೯೨ರ ಮಾರ್ಚ್ ೨೭ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ ೧೯ ವರ್ಷ ವಯಸ್ಸಿನ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು. ಆದರೆ ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿಗೆ ಮನವಿ ಮಾಡಿದ್ದರು. ನಂತರ ಪ್ರಕರಣದ ತನಿಖೆಯನ್ನು ಕ್ರೆöÊಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು. ಆದರೆ ಕ್ರೆöÊಂ ಬ್ರಾಂಚ್ ಪೊಲೀಸರು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಷರಾ ಹಾಕಿದರು. ೧೯೯೩ ಮಾರ್ಚ್ ೨೯ಕ್ಕೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು.

ಇಸ್ರೇಲ್ ಸರ್ಕಾರ ದಿಢೀರ್ ಪತನ

ಜೆರುಸಲೆಮ್, ಡಿ. ೨೩: ಬೆಂಜಮಿನ್ ನೆತಾನ್ಯಹು ನೇತೃತ್ವದ ಇಸ್ರೇಲ್ ಸರ್ಕಾರ ದಿಢೀರ್ ಪತನವಾಗಿದ್ದು, ಮತ್ತೊಮ್ಮೆ ಇಸ್ರೇಲ್‌ನಲ್ಲಿ ಅವಧಿಗೂ ಮುನ್ನವೇ ಚುನಾವಣೆ ಎದುರಾಗಿದೆ. ಆ ಮೂಲಕ ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಸರ್ಕಾರ ಪತನವಾಗಿದ್ದು, ನಾಲ್ಕನೇ ಬಾರಿಗೆ ಇಸ್ರೇಲ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿ ಗಾಂಟ್ಜ್ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ನೆತನ್ಯಾಹು ಅವರ ಲಿಕುಡ್ ಪಾರ್ಟಿ ಮತ್ತು ಗಾಂಟ್ಜ್ ನೇತೃತ್ವದ ಬ್ಲೂ ಆಯಂಡ್ ವೈಟ್ ಪಾರ್ಟಿ ಮೈತ್ರಿ ಸರ್ಕಾರವು ಉಭಯ ಪಕ್ಷಗಳ ಕಿತ್ತಾಟದಿಂದಾಗಿ ಕೊನೆಯಾಗಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿದ್ದು, ಮಾ. ೨೩ಕ್ಕೆ ಮತದಾನ ನಿಗದಿಯಾಗಿದೆ.