ಡಿಸೆಂಬರ್ ತಿಂಗಳ ೨೪ ರ ನಡುರಾತ್ರಿ (ಇಂದು) ಕ್ರೆöÊಸ್ತರಿಗೆ ಸಂತಸದ ಸಂಭ್ರಮದ ರಾತ್ರಿ. ಡಿಸೆಂಬರ್ ೨೫ ರಂದು ವಿಶ್ವದಾದ್ಯಂತ ಕ್ರೆöÊಸ್ತರು ತಮ್ಮ ರಕ್ಷಕ, ದೇವಕುಮಾರ ಭಗವಾನ್ ಯೇಸುವಿನ ಜಯಂತಿ ಅಂದರೆ ‘‘ಕ್ರಿಸ್ಮಸ್’’ ಹಬ್ಬದ ಆಚರಣೆಯ ಸಂಭ್ರಮದ ದಿನ. ಚಳಿ ಇದ್ದರೂ ಲೆಕ್ಕಿಸದೇ ನಿದ್ರೆಯನ್ನು ಬಡಿದೋಡಿಸಿ, ನವನವೀನ ವೈ-ವಿದ್ಯಮಯ ಉಡುಪನ್ನು ಧರಿಸಿ, ಚರ್ಚುಗಳಲ್ಲಿ ನಡೆಯುವ ವೈಭವದ ಬಲಿಪೂಜೆಯಲ್ಲಿ ಭಾಗವಹಿಸಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ, ಕೇಕ್ ಸವಿಯುತ್ತಾ, ಕ್ರಿಸ್ಮಸ್ ಸ್ಟಾರ್ಗಳು (ನಕ್ಷತ್ರಗಳು) ರಾರಾಜಿಸುತ್ತಿರುವ ಹಾಗೂ ಎಷ್ಟೇ ದುಃಖ-ನೋವು-ಕಷ್ಟಗಳು ಇದ್ದರೂ ಕ್ಷಣಕಾಲವಾದರೂ ಯೇಸು ಕಂದನ ಜನನದ ಸಂಭ್ರಮವನ್ನು ಅನುಭವಿಸಿ, ಯೇಸುವಿಗೆ ಸ್ತುತಿಯನ್ನು ಸಲ್ಲಿಸಿ ನಮಿಸುವ ಒಂದು ಸಂತಸದ ಹಬ್ಬ- ಕ್ರಿಸ್ಮಸ್. ಆದರೆ ಈ ವರ್ಷ ಛಿoviಜ- ೧೯ ರ ಪರಿಣಾಮವಾಗಿ ಆಚರಣೆಯಲ್ಲಿ ಸ್ವಲ್ಪ ಬದಲಾವಣೆ ಇರಬಹುದಾದರೂ ಸಂಸ್ಕೃತಿಗನುಗುಣವಾಗಿ ನಡೆಯಲಿದೆ. ಬೈಬಲ್ ಶ್ರೀ ಗ್ರಂಥದ ಪ್ರಕಾರ ದೇವರು ತಮ್ಮ ಸೃಷ್ಟಿಯಲ್ಲಿ ಸರ್ವವನ್ನು ಸೃಷ್ಟಿಸಿ ಕೊನೆಯಲ್ಲಿ ತಮ್ಮ ಹೋಲಿಕೆಯಲ್ಲಿ ನರಮಾನವರನ್ನು, ಗಂಡು- ಹೆಣ್ಣಾಗಿ ರೂಪಿಸಿದರು. ಅವರನ್ನು ಆಶೀರ್ವದಿಸಿ " ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ, ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿಕೊಳ್ಳಿರಿ, ಸಮುದ್ರದ ಮೀನುಗಳ ಮೇಲೆಯೂ, ಆಕಾಶದ ಪಕ್ಷಿಗಳ ಮೇಲೆಯೂ, ಭೂಮಿಯಲ್ಲಿ ಚಲಿಸುವ ಎಲ್ಲಾ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ" ಎಂದರು. ಹೀಗೆ ದೇವರು ಮಾನವನನ್ನು ಸೃಷ್ಟಿಸಿ ಸರ್ವ ಸೃಷ್ಟಿಗಳ ಮೇಲೆ ಅಧಿಕಾರವಿತ್ತನು. ಇಸ್ರಯೇಲ್ ದೇಶದ ಗಲಿಲೇಯ ಪ್ರಾಂತ್ಯದ ನಜರೇತಿನಲ್ಲಿ ಜೋಸೇಫನೆಂಬ ಯುವ ಬಡಗಿಯೊಬ್ಬನಿದ್ದ. ಈತನು ಸದ್ಗುಣ ಸಂಪನ್ನನಾಗಿದ್ದ, ಮುಖದಲ್ಲಿ ಸದಾ ಮುಗುಳ್ನಗೆ ಹೊಂದಿದ್ದ. ಹೊಳಪಿನ ಕಣ್ಣುಗಳಲ್ಲಿ ವಿಶೇಷ ಆಕರ್ಷಣೆ ಹೊಂದಿದ್ದ. ಈತನ ಮನೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿ ಕಡಿದಾದ ಗುಡ್ಡದ ತಪ್ಪಲಿನಲ್ಲಿ ಮಧ್ಯಮ ವರ್ಗಕ್ಕೆ ಸೇರಿದ ಜೋಕಿಂ ಮತ್ತು ಅನ್ನಮ್ಮ ದಂಪತಿಗಳ ಒಂದು ಕುಟುಂಬವಿತ್ತು. ಇವರ ಪುತ್ರಿ, ಮೇರಿಗೆ, ದಾವಿದ ಅರಸನ ವಂಶಜನಾದ ಜೋಸೇಫನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು . ‘ಗಬ್ರಿಯೇಲ್' ಎಂಬ ದೇವದೂತನು ಆಕೆಗೆ ಕಾಣಿಸಿಕೊಂಡು ‘‘ದೈವಾನುಭರಿತಳೇ, ನಿನಗೆ ಶುಭವಾಗಲಿ, ಸರ್ವೇಶ್ವರ ನಿನ್ನೊಡನೆ ಇದ್ದಾರೆ’’ ಎಂದನು. ಇದನ್ನು ಕೇಳಿದಾಗ ಮರಿಯಳು ತಬ್ಬಿಬ್ಬಾದಳು. ದೇವದೂತನು ಮುಂದುವರೆದು ‘‘ಮರಿಯಾ, ನೀನು ಅಂಜಬೇಡ, ದೇವರ ಅನುಗ್ರಹ ನಿನಗೆ ಲಭಿಸಿದೆ. ಇದೋ, ನೀನು ಒಬ್ಬ ಮಗನನ್ನು ಹಡೆಯುವೆ, ಆತನಿಗೆ ‘ಯೇಸು’ ಎಂದು ಹೆಸರಿಡಬೇಕು. ಆತನು ಮಹಾಪುರುಷನಾಗುವನು, ದೇವರ ಪುತ್ರ ಎನಿಸಿಕೊಳ್ಳುವನು. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ’’ ಎಂದನು. ಆಗ ಮರಿಯಳು ‘‘ ಇದೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ’’ ಎಂದಳು. ದೇವದೂತನು ನಂತರ ಅದೃಶ್ಯನಾದನು.
ಇತ್ತ ಕಡೆ, ಜೋಸೇಫನು ನೀತಿವಂತನಾಗಿದ್ದು, ಮರಿಯಳು ಗರ್ಭವತಿ ಯಾಗಿರುವುದನ್ನು ಅರಿತು ಆಕೆಯ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಯಾರಿಗೂ ತಿಳಿಯದಂತೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದು ಯೋಚಿಸುತ್ತಿ ದ್ದಾಗಲೇ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು "ದಾವೀದ ವಂಶದ ಜೋಸೇಫನೇ, ಮರಿಯಳನ್ನು ನಿನ್ನ ಪತ್ನಿಯಾಗಿ ಸ್ವೀಕರಿಸಲು ಅಂಜಬೇಡ. ಆಕೆ ಒಂದು ಮಗುವನ್ನು ಹಡೆಯುವಳು. ಆತನಿಗೆ ಯೇಸು ಎಂದು ಹೆಸರಿಡಬೇಕು. ಆತ ಲೋಕದ ಜನರನ್ನು ಪಾಪಗಳಿಂದ ರಕ್ಷಿಸಿ ಉದ್ಧಾರ ಮಾಡುವನು’’ ಎಂದನು. ಕ್ರಿಸ್ತನ ಜನನದ ಅಂದಿನ ಕಾಲದಲ್ಲೂ ಜನಗಣತಿ ಇತ್ತು. ಔಗುಸ್ತ್ ಎಂಬ ಚಕ್ರವರ್ತಿಯ ಕಾಲದಲ್ಲಿ ಜನಗಣತಿಗೆ ಆದೇಶವಾದಾಗ ಜನರು ತಮ್ಮ ಸ್ವಂತ ಊರಿಗೆ ಹೋಗಬೇಕಿತ್ತು. ಅಂತೆಯೇ ಜೋಸೇಫನು ದಾವಿದನ ವಂಶದವನಾಗಿದ್ದರಿAದ ಜುದೇಯ ನಾಡಿನ ಬೆತ್ಲೆಹೇಮಿಗೆ ಪರಿಪೂರ್ಣ ಗರ್ಭವತಿಯಾಗಿದ್ದ ಮರಿಯಳನ್ನು ಕರೆದುಕೊಂಡು ಹೋದನು. ಮರಿಯಾಳಿಗೆ ಪ್ರಸವ ವೇದನೆ ಪ್ರಾರಂಭವಾದರೂ, ಯಾರ ಮನೆಯಲ್ಲಾಗಲಿ, ಛತ್ರದಲ್ಲಾಗಲಿ ಸ್ಥಳ ಸಿಗಲಿಲ್ಲ. ಪಕ್ಕದಲ್ಲೇ ಇದ್ದ ಗೋದಲಿಯಲ್ಲಿ ಕಂದನಿಗೆ ಜನ್ಮ ನೀಡಿ ಇದ್ದ ಬಟ್ಟೆಯಲ್ಲೇ ಮಗುವನ್ನು ಸುತ್ತಿ ಮಲಗಿಸಿದಳು. ಅದೇ ನಾಡಿನಲ್ಲಿ ಕೆಲವು ಕುರುಬರು ಹೊಲಗಳಲ್ಲಿ ಇದ್ದುಕೊಂಡು ರಾತ್ರಿಯಲ್ಲಿ ಕುರಿಮಂದೆಗಳನ್ನು ಕಾಯುತ್ತಿದ್ದರು. ಇದ್ದಕ್ಕಿದ್ದಂತೆ ದೇವದೂತನು ಅವರಿಗೆ ಕಾಣಿಸಿಕೊಂಡು, ಅವರ ಸುತ್ತಲೂ ಪ್ರಕಾಶವು ಆವರಿಸಿತು. ದೂತನು ಅವರಿಗೆ ‘‘ಭಯಪಡಬೇಡಿ, ಇದೋ ಜನರೆಲ್ಲಾರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ, ‘ಇಂದೇ ದಾವಿದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾನೆ. ಅವರೇ ಪ್ರಭು ಯೇಸು ಕ್ರಿಸ್ತ. ಇದೋ ನಿಮಗೊಂದು ಸೂಚನೆ, ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯಲ್ಲಿ ಮಲಗಿಸಿರುವುದನ್ನು ಕಾಣುವಿರಿ' ಎಂದನು. ತಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತ ಪರಿವಾರವೊಂದು ಕಾಣಿಸಿಕೊಂಡಿತು. ‘‘ಮಹೋನ್ನತರಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಜನಿಗೆ ಶಾಂತಿ’’ ಎಂದು ಸರ್ವೇಶ್ವರನ ಸ್ತುತಿ ಮಾಡಿತು. ದೇವದೂತನ ಮುನ್ಸೂಚನೆಯಂತೆ, ಮರಿಯಳನ್ನು ಜೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಕಂದನನ್ನು ಕುರುಬರು ಕಂಡರು. ಅವರ ಸಂದೇಶದAತೆ, ಕುರುಬರು ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ, ತಾವು ಕಂಡದ್ದನ್ನು, ಕೇಳಿದ್ದನ್ನು ನೆನೆಯುತ್ತಾ ಹಿಂತಿರುಗಿದರು. ಎಲ್ಲವೂ ನೆರವೇರಿದ್ದನ್ನು ಮರಿಯಳು ಸ್ಮರಿಸಿಕೊಂಡಳು. ಅಂದು ಕ್ರಿಸ್ತನ ಜನನ ತಂದAತಹ ಆನಂದ, ನೆಮ್ಮದಿ, ಶಾಂತಿಗಾಗಿ ಇಂದಿನ ಜಗತ್ತು ಹಂಬಲಿಸುತ್ತಿದೆ. ಪ್ರಸ್ತುತ ಸಮಾಜದಲ್ಲಿ ಮಾನವನ ಬಾಳು ಹಿಂದೆAದಿಗಿAತಲೂ ಅಸಹನೀಯವಾಗಿದೆ. ಒಂದೆಡೆ ಕೊರೊನಾ ದಂತಹ ಸಾಂಕ್ರಾಮಿಕ ರೋಗ, ಮತ್ತೊಂದೆಡೆ ದ್ವೇಷ, ಹಿಂಸೆ, ವೈಮನಸ್ಸು, ಭೃಷ್ಟಾಚಾರ, ಆರ್ಥಿಕ ಮುಗ್ಗಟ್ಟು, ಪ್ರಕೃತಿ ವಿಕೋಪಗಳ ಮಧ್ಯದಲ್ಲಿ ಜೀವನದ ಗೋಳು, ಅಂತ್ಯವಿಲ್ಲದೇ ಸಾಗುತ್ತಿದೆ. ಆದರೆ ಅದಕ್ಕೆಲ್ಲಾ ಪರಿಹಾರವಿಲ್ಲವೇ ? ಖಂಡಿತವಾಗಿ ಇದೆ. ನಾವು ನಿರಾಶರಾಗಬೇಕಿಲ್ಲ, ಜನಿಸಿದಾಗ ಈ ಲೋಕಕ್ಕೆ ಏನನ್ನೂ ತರಲಿಲ್ಲ. ಸಾಯುವಾಗ ಈ ಲೋಕದಿಂದ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದರೆ ಭೂಲೋಕದಲ್ಲಿ ಬದುಕಿದ್ದಾಗ ಮಾಡಿದ ಸೇವೆ, ತೋರಿದ ಪ್ರೀತಿ, ಸದ್ಗುಣಗಳು ನಮ್ಮನ್ನು ಮನುಕುಲ ಸ್ಮರಿಸುವಂತೆ ಮಾಡುತ್ತದೆ. ಪ್ರತಿಯೊಂದು ಧರ್ಮದ ಪ್ರತಿಯೊಂದು ಹಬ್ಬವೂ ಮಾನವನ ಜೀವಿತಕ್ಕೆ ಹೊಸತನವನ್ನು ನೀಡುತ್ತದೆ. ಪ್ರತಿವರ್ಷವೂ ಹಬ್ಬಗಳು ಮರುಕಳಿಸುವಂತೆ, ನಮ್ಮ ಜೀವನದಲ್ಲೂ ದೈವ ಭಕ್ತಿ, ಪ್ರೀತಿ, ಸಹನೆ, ಪರೋಪಕಾರ, ತಾಳ್ಮೆಗಳೆಂಬ ಸದ್ಗುಣಗಳು ಮರುಕಳಿಸಲಿ. ದ್ವೇಷ- ಅಸೂಯೆಗಳನ್ನು ಹೊರದೂಡಿ, ಪ್ರೀತಿಯ, ಐಕ್ಯತೆಯ, ಕ್ಷಮಾಪಣೆಯ ನವಜೀವನವನ್ನು ಹೊಂದುವ ಪ್ರಯತ್ನವನ್ನಾದರೂ ಮಾಡೋಣವೇ? ಸರ್ವರಿಗೂ ಕ್ರಿಸ್ಮಸ್ ಹಾಗೂ ಬರಲಿರುವ ನೂತನ ವರ್ಷದ ಹಾರ್ಧಿಕ ಶುಭಾಶಯಗಳು.
-ಚಾರ್ಲ್ಸ್ ಡಿಸೋಜ, ಉಪನ್ಯಾಸಕರು, ವೀರಾಜಪೇಟೆ.