ವೀರಾಜಪೇಟೆ, ಡಿ.21 : ಜಿಲ್ಲೆಯಲ್ಲಿ ಸಾಹಿತ್ಯದೊಂದಿಗೆ ಭಾಷೆ ಮತ್ತು ssಸಂಸ್ಕøತಿಗೆ ಹಿರಿಮೆ ತಂದ ಅನೇಕ ಸಾಹಿತಿಗಳಿದ್ದಾರೆ. ಅವರನ್ನು ನೆನಪಿಸಿಕೊಂಡು ಯುವ ಜನತೆ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಉಳಿಸಿ ಬೆಳೆಸಬೇಕು ಎಂದು ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಕರೆ ನೀಡಿದರು.ವೀರಾಜಪೇಟೆ ಪುರಭವನದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂಭ್ರಮ ಮೊಣ್ಣಂಡ ಚಂಗಪ್ಪ ಸ್ಮಾರಕ ದತ್ತಿ ನಿಧಿ ಭಾಷಣ ಸ್ವರ್ಧೆ, ಸ್ವರಚಿತ ಗೀತಗಾಯನ ಗೋಷ್ಠಿ ಹಾಗೂ ಐ.ಮಾ ಮುತ್ತಣ್ಣ ಮತ್ತು ಬಿ.ಡಿ ಗಣಪತಿ ಜನ್ಮ ಶತಮಾನೋತ್ಸವ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಐ.ಮಾ. ಮುತ್ತಣ್ಣ ಹಾಗೂ ಬಿ.ಡಿ. ಗಣಪತಿ ಮೂರು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇವರ ಪುಸ್ತಕಗಳನ್ನು ತರ್ಜುಮೆ ಹಾಗೂ ಮರು ಮುದ್ರಣ ಮಾಡುವ ಕೆಲಸ ನಮ್ಮ ಅಕಾಡೆಮಿಯಿಂದ ನಡೆದಿದೆ. ಬಿ ಡಿ ಗಣಪತಿ ನಡಿಕೇರಿಯಂಡ ಚಿಣ್ಣಪ್ಪ , ಹರದಾಸ ಅಪ್ಪಚ್ಚ ಕವಿ ಅಂತವರಿಂದ ಕೊಡವ ಭಾಷೆ ಉಳಿದು ಬೆಳೆಯುವಂತಾಗಿದೆ. ನಾವು ಮಂಗಳೂರು ವಿಶ್ವವಿದ್ಯಾನಿಲಯದ ಅನುಮತಿ ಪಡೆದು ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಾಗೂ ಚಿಕ್ಕ ಅಳುವಾರದಲ್ಲಿನ ವಿಶ್ವವಿದ್ಯಾಲಯದಲ್ಲಿ ಕೊಡವ ಭಾಷೆಯ ಸ್ನಾತಕೋತ್ತರ ಪದವಿ ಕೊರ್ಸ್‍ಅನ್ನು ಆರಂಭಿಸಿದ್ದು ವಯೋಮಿತಿ ಇಲ್ಲದೆ ಇದರ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಅಡೆ ತಡೆ ನಡುವೆ ಪರಿಷತ್ ಜಿಲ್ಲೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿz.É ಕೊಡಗಿನ ಮಾಣಿಕ್ಯದಂತಿರುವ ಹಿರಿಯ ಸಾಹಿತಿಗಳನ್ನು ಇಂದಿನವರು ಮರೆತುಬಿಟ್ಟಿದ್ದಾರೆ ಇವರನ್ನು ಸ್ಮರಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು. ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಐ.ಮಾ. ಮುತ್ತಣ್ಣ ಮತ್ತು ಬಿ.ಡಿ. ಗಣಪತಿ ಒಂದು ನೆನಪು ಎಂಬ ವಿಚಾರ ಮಂಡನೆ ಮಾಡಿದರು.
ಹಿರಿಯ ಸಾಹಿತಿಗಳಾದ ಭಾಗೀರತಿ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮೀತಾ, ಉಪಾಧ್ಯಕ್ಷ ಹರ್ಷವರ್ಧನ
(ಮೊದಲ ಪುಟದಿಂದ) ಮುಖ್ಯಾಧಿಕಾರಿ ಶ್ರೀಧರ್, ಪರಿಷತ್ ನಿರ್ದೇಶಕ ಪಾರ್ಥಚಿಣ್ಣಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭ ಗೀತಗಾಯನ, ಹಾಗೂ ಕವಿಗೋಷ್ಠಿ ಮತ್ತು ಭಾಷಣ ಸ್ಪರ್ಧೆ ನಡೆಯಿತು.