ಮಡಿಕೇರಿ, ಡಿ.21: ಕೊಡಗಿನ ಕುಟ್ಟ ಸಮೀಪದ ಕಾಯಿಮಾನಿ ಕೆರೆಯೊಂದರಲ್ಲಿ ಕಂಡು ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಪರಿಸರ ತಜ್ಞರಾದ ಬೋಸ್ ಮಾದಪ್ಪ , ಸತೀಶ್ ಸಾಹಸಮಯವಾದ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಕಾಯಿಮಾನಿಯ ಕಾಫಿ ಬೆಳೆಗಾರ ತೀತಿರ ಕಂಬಣ್ಣ ಎಂಬವರಿಗೆ ಸೇರಿದ ದೊಡ್ಡ ಕೆರೆಯೊಂದರಲ್ಲಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಕಂಬಣ್ಣ ಅವರ ಕಾರ್ಮಿಕರು ಗಮನಿಸಿ ತಮ್ಮ ಮಾಲೀಕರಿಗೆ ತಿಳಿಸಿದ್ದಾರೆ. ಕೂಡಲೇ ಕಂಬಣ್ಣ ಕುತೂಹಲದಿಂದ ಸ್ಥಳಕ್ಕೆ ಬಂದು ನೋಡಿದಾಗ ದೊಡ್ಡ ಕಾಳಿಂಗ ಸರ್ಪವೊಂದು ನೀರಿನಲ್ಲಿ ಈಜಾಡುತ್ತಿದ್ದ ದೃಶ್ಯ ಕಂಡುಬಂತು.ಹಾವಿನ ಬಗ್ಗೆ ಬೋಸ್ ಮಾದಪ್ಪ ಅವರಿಗೆ (ಮೊದಲ ಪುಟದಿಂದ) ವಿಷಯ ತಿಳಿಸಿದರು. ತಕ್ಷಣ ಕಾರ್ಯಪ್ರವೃತ್ತ ರಾದ ಬೋಸ್ ಮಾದಪ್ಪ ಗೋಣಿಕೊಪ್ಪಲಿನ ಪರಿಸರ ತಜ್ಞ ಸತೀಶ್ ಅವ ರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೆರೆಯೊಳಗಿದ್ದ ಕಾಳಿಂಗ ಸರ್ಪ ವನ್ನು ಪತ್ತೆಹಚ್ಚಿ ದರು. ಕೆರೆಯೊಳಗೆ ಇರುವ ಭಾರೀ ಗಾತ್ರದ ಈ ಹಾವನ್ನು ಸಂರಕ್ಷಿ ಸುವುದು ಸತೀಶ್ ಮತ್ತು ಬೋಸ್ ಮಾದಪ್ಪ ತಜ್ಞ ಜೋಡಿಗಳಿಗೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಸತತವಾಗಿ 3 ಗಂಟೆಗಳ ಕಾಲ ನಡೆದ ಸಾಹ ಸಮಯವಾದ ಈ ಕಾರ್ಯಾಚರಣೆ ಯಲ್ಲಿ ಕೊನೆಗೂ 14 ಅಡಿ ಉದ್ದವಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿದು ನೀರಿ ನಿಂದ ಮೇಲೆ ತರುವಲ್ಲಿ ಯಶಸ್ವಿ ಯಾದರು. ಅಂದಾಜು 12 ವರ್ಷ ಪ್ರಾಯವಿರುವ ಈ ಗಂಡು ಕಾಳಿಂಗ ಸರ್ಪ ಆರೋಗ್ಯವಾಗಿದೆ. ಆಹಾರ ಕ್ಕಾಗಿ ಬೇಟೆಯಾಡುತ್ತಾ ಬಂದ ಇದು ಕೆರೆಯೊಳಗೆ ಸೇರಿಕೊಂಡಿರ ಬಹುದು ಎಂದು ಅಭಿಪ್ರಾಯ ಪಟ್ಟರು. ಸೆರೆಹಿಡಿದ ಈ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಬ್ರಹ್ಮಗಿರಿ ವನ್ಯಜೀವಿ ವಲಯದ ಅರಣ್ಯದಲ್ಲಿ ಬಿಡುಗಡೆ ಮಾಡಲಾಯಿತು ಎಂದು ಬೋಸ್ ಮಾದಪ್ಪ ಅವರು ತಿಳಿಸಿದ್ದಾರೆ.