ಸೋಮವಾರಪೇಟೆ, ಡಿ. 20: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆs ಅಧ್ಯಕ್ಷ ಬಿ.ಎಂ. ರಾಮ್‍ಪ್ರಸಾದ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬಿ.ಎಂ. ರಾಮ್‍ಪ್ರಸಾದ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘದ ಮೂಲಕ ರೂ. 90,77,12,091 ವ್ಯಾಪಾರ ವಹಿವಾಟು ನಡೆಸುವ ಮೂಲಕ ರೂ. 21,96,984 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 16 ಲಾಭಾಂಶ ನೀಡಲಾಗುವುದು ಎಂದರು.

ಸದಸ್ಯರಿಗೆ ಉತ್ತಮ ಮತ್ತು ತ್ವರಿತವಾಗಿ ಸೇವೆ ನೀಡುವ ಉದ್ದೇಶದಿಂದ ಎಲ್ಲ ವ್ಯವಹಾರಗಳನ್ನು ಗಣಕೀಕರಣ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಭದ್ರತಾ ಕಪಾಟು ಸೌಲಭ್ಯ ಮಾಡಲಾಗಿದೆ. ಮೃತಪಟ್ಟ ಸದಸ್ಯರಿಗೆ ರೂ. 10 ಸಾವಿರ ಮರಣ ನಿಧಿ ಸ್ಥಾಪನೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 6 ಮಂದಿ ಸದಸ್ಯರು ಮೃತರಾಗಿದ್ದು, ಮೃತರ ಕುಟುಂಬಕ್ಕೆ ರೂ. 60 ಸಾವಿರ ನೀಡಲಾಗಿದೆ ಎಂದರು.

ಸಂಘದಲ್ಲಿ ನೂತನವಾಗಿ ಜಂಟಿ ಬಾಧ್ಯತಾ ಗುಂಪು ಸಾಲ ಯೋಜನೆಯನ್ನು ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ಸದಸÀ್ಯರಿಗೆ ಉತ್ತಮ ಸೇವೆ ಸಲ್ಲಿಸುವ ಪ್ರಯತ್ನಗಳಾಗುತ್ತಿವೆ. ಸದಸ್ಯರು ಸಂಘದಿಂದ ಪಡೆದ ಎಲ್ಲ ರೀತಿಯ ಸಾಲಗಳನ್ನು ಸೂಕ್ತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀಕಾಂತ್, ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಬಿ.ಪಿ. ಶಿವಕುಮಾರ್, ಎಚ್.ಕೆ. ಮಾದಪ್ಪ, ವರಲಕ್ಷ್ಮೀ ಸಿದ್ಧೇಶ್ವರ, ಶೋಭಾ ಶಿವರಾಜು, ಬಿ.ಆರ್. ಮೃತ್ಯುಂಜಯ, ಎಂ.ಸಿ. ರಾಘವ, ಎಚ್.ಆರ್. ವೆಂಕಪ್ಪ, ಬಿ. ಶಿವಪ್ಪ, ಕೆ.ಬಿ. ಸುರೇಶ್, ಮಹೇಶ್ ತಿಮ್ಮಯ್ಯ, ಕೆ.ಆರ್. ದಿವ್ಯ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ತಾರಾ ಉಪಸ್ಥಿತರಿದ್ದರು.