ಸೋಮವಾರಪೇಟೆ, ಡಿ. 20: ಇಲ್ಲಿನ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 23.33ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಹೇಳಿದರು. ಆಲೇಕಟ್ಟೆ ರಸ್ತೆಯಲ್ಲಿರುವ ಸಂಘದ ರೈತ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2576 ಸದಸ್ಯರಿದ್ದು ಕೆ.ಸಿ.ಸಿ. ಸಾಲ ರೂ. 18.84 ಕೋಟಿ ನೀಡಲಾ ಗಿದೆ. ಪಾಲು ಬಂಡವಾಳ ರೂ. 2.34 ಕೋಟಿ, ಕ್ಷೇಮನಿಧಿ ರೂ.46.35, ಠೇವಣಿ ರೂ. 46.70 ಕೋಟಿಗಳಷ್ಟು ಸಂಗ್ರಹಿಸಲಾಗಿದೆ. ಸಂಘದ ಸದಸ್ಯರಿಗೆ ಶೇ.5 ಡಿವಿಡೆಂಡ್ ಘೋಷಿಸಲಾಗಿದ್ದು ಸದಸ್ಯರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ನಿರ್ದೇಶಕರುಗಳಾದ ವೈ.ಎಂ. ನಾಗರಾಜು, ಎಸ್.ಬಿ. ಈರಪ್ಪ, ಕವಿತ ವಿರೂಪಾಕ್ಷ, ಕೆ.ಪಿ. ಭಾನುಪ್ರಕಾಶ್, ಡಿ.ಸಿ. ರಾಜು ದಳವಾಯಿ, ಕೆ.ಎಸ್. ವಿಜಯ, ಹೆಚ್.ಎಲ್. ವಿಜೇಂದ್ರ, ಎ.ಜೆ. ಕೃಷ್ಣಪ್ಪ, ಪಿ.ಎಸ್. ರವಿಕುಮಾರ್, ವಿ. ಹರೀಶ್, ಪದ್ಮಾವತಿ, ಮೇಲ್ವಿಚಾರಕರಾದ ಟಿ.ಆರ್. ಪ್ರವೀಣ್ ಮತ್ತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ.ಪಿ. ಹರೀಶ್ ಉಪಸ್ಥಿತರಿದ್ದರು.