ಮಡಿಕೇರಿ, ಡಿ. 19: ಮೂರ್ನಾಡು ಬಳಿಯ ಹೊಸ್ಕೇರಿಯ ಬಲ್ಲಚಂಡ ವಿಠಲ ಎಂಬವರ ತೋಟದಲ್ಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಅವರ ಪುತ್ರ ಗಗನ್ಗೆ ವಿದ್ಯುತ್ ಸ್ಪರ್ಶಗೊಂಡ ಘಟನೆ ನಿನ್ನೆ ನಡೆದಿದೆ. ಕಬ್ಬಿಣದ ಕಂಬವೊಂದರಿಂದ ಮಗುವಿಗೆ ವಿದ್ಯುತ್ ಸ್ಪರ್ಶವಾಗಿದ್ದು ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದು ಬಂದಿದೆ. ಈ ವ್ಯಾಪ್ತಿಯಲ್ಲಿ ಹಲವು ಕಬ್ಬಿಣದ ಕಂಬಗಳು ಇದ್ದು ಪ್ರಾಣಕ್ಕೆ ಅಪಾಯ ಇರುವುದರಿಂದ ತಕ್ಷಣವೇ ಚಿಸ್ಕಾಂ ಇಲಾಖೆ ಕಂಬಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.