ಕುಶಾಲನಗರ, ಡಿ. 19: ಕುಶಾಲನಗರ ಹೌಸಿಂಗ್ ಬೋರ್ಡ್ ಉದ್ಭವ ಸುಬ್ರಮಣ್ಯ ದೇವಾಲಯದಲ್ಲಿ ಷಷ್ಠಿ ಅಂಗವಾಗಿ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಅಂಗವಾಗಿ ಶನಿವಾರ ದೇವಾಲಯದಲ್ಲಿ ಹೋಮ, ಹವನಾದಿ ವಿಶೇಷ ಕಾರ್ಯಕ್ರಮಗಳೊಂದಿಗೆ ಧ್ವಜಾರೋಹಣ ನಡೆಯಿತು. ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಪೂಜಾ ವಿಧಿವಿಧಾನಗಳು ಮಾತ್ರ ಜರುಗಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷರಾದ ಚಿಕ್ಕೇಗೌಡ ತಿಳಿಸಿದ್ದಾರೆ.