ನಾಪೋಕ್ಲು, ಡಿ. 19: ಸಂಘ ಅಭಿವೃದ್ಧಿ ಹೊಂದಲು ಸರ್ವ ಸದಸ್ಯರ ಸಹಕಾರ ಮತ್ತು ಆಡಳಿತ ಮಂಡಳಿ ಸದಸ್ಯರ ಪ್ರಾಮಾಣಿಕ ಶ್ರಮ ಅಗತ್ಯ ಎಂದು ಕುಂಜಿಲ ವಿವಿಧೋದ್ಧೇಶ ಸಹಕಾರ ಧವಸ ಭಂಡಾರದ ಅಧ್ಯಕ್ಷ ಕಲ್ಯಾಟಂಡ ಎ. ರಘು ತಮ್ಮಯ್ಯ ಹೇಳಿದರು.
ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಧವಸಭಂಡಾರದ ನೂರನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘಕ್ಕೆ ಮೇಚಂಡ ಕುಟುಂಬಸ್ಥರು 1960ರಲ್ಲಿ 10 ಸೆಂಟ್ ಜಾಗ ನೀಡಿದ್ದು ಅವರು ಸ್ಮರಣಾರ್ಹರು ಎಂದರು. ಕಲ್ಯಾಟಂಡ ಮುತ್ತಪ್ಪ ಮಾತನಾಡಿ ಸಂಘದ ಪ್ರತಿಯೊಬ್ಬ ಸದಸ್ಯರು ಓರ್ವ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ನಡೆದ ಧವಸಭಂಡಾರದ ನೂರನೇ ವರ್ಷದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘಕ್ಕೆ ಮೇಚಂಡ ಕುಟುಂಬಸ್ಥರು 1960ರಲ್ಲಿ 10 ಸೆಂಟ್ ಜಾಗ ನೀಡಿದ್ದು ಅವರು ಸ್ಮರಣಾರ್ಹರು ಎಂದರು. ಕಲ್ಯಾಟಂಡ ಮುತ್ತಪ್ಪ ಮಾತನಾಡಿ ಸಂಘದ ಪ್ರತಿಯೊಬ್ಬ ಸದಸ್ಯರು ಓರ್ವ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿದರೆ ಸಂಘ ಬೆಳೆಯುತ್ತದೆ ಎಂದರು. ಮಾಜಿ ಅಧ್ಯಕ್ಷ ಎನ್. ಸೋಮಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ತೋಟತಂಡ ಚಿತ್ರ ಹಾಗೂ ಮೇದಂಡ ಪ್ರಾರ್ಥನ ಇವರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕಲಿಯಂಡ ಡಿ. ಅಪ್ಪಣ್ಣ, ಪದಾರ್ಥಿ ಕೃಷ್ಣಯ್ಯ, ಕಂಬೇಯಂಡ ವಿ. ಪಳಂಗಪ್ಪ, ಕಣಿಯರ ಎನ್. ನಾಣಯ್ಯ, ಕಲಿಯಂಡ ಡಿ. ಅಪ್ಪಣ್ಣ, ಎನ್.ಎಂ. ಸುಬ್ರಮಣಿ, ಕೈಬುಲಿರ ಎ. ಅಯ್ಯಪ್ಪ, ಪೇರಿಯಂಡ ಎಂ. ಶೋಭ, ಐಕೊಳಂಡ ಎಂ. ಡಾಟಿ ಅಯ್ಯಪ್ಪ, ಇದ್ದರು.