ಕೂಡಿಗೆ, ಡಿ. 18: ಕೂಡಿಗೆಯ ಹಾರಂಗಿ ನದಿಯ ದಡದ ಬಳಿ ತೆಗೆಯಲಾಗಿದ್ದ ಇಂಗು ಗುಂಡಿಗೆ ಹಸುವೊಂದು ಬಿದ್ದ ಘಟನೆ ನಡೆದಿದ್ದು, ಸ್ಥಳೀಯ ಅಂಗಡಿಯವರು ಸಾರ್ವಜನಿಕ ಸಹಕಾರದೊಂದಿಗೆ ಹಸುವನ್ನು ಮೇಲೆತ್ತಿದ್ದಾರೆ. ಇಂಗು ಗುಂಡಿಯಲ್ಲಿ ನೀರು ಇಲ್ಲದ ಕಾರಣ ಹಸು ಬದುಕಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಇಂಗು ಗುಂಡಿಯನ್ನು ಮುಚ್ಚುವಂತೆ ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.