ವೀರಾಜಪೇಟೆ, ಡಿ. 18: 15 ವರ್ಷ ವಯಸ್ಸಿನ ಅಪ್ರಾಪ್ತೆ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಆರೋಪದ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಅರಪಟ್ಟು ಗ್ರಾಮದ ಎರವರ ರವಿ ಎಂಬಾತನನ್ನು ಬಂಧಿಸಿದ್ದಾರೆ.
ಅರಪಟ್ಟು ಗ್ರಾಮದ ಕೆ.ಉತ್ತಪ್ಪ ಎಂಬವರ ಲೈನು ಮನೆಯಲ್ಲಿರುವ ರವಿ ತನ್ನ ಸಂಬಂಧಿಕ ಅಪ್ರಾಪ್ತೆಯೊಂದಿಗೆ ಎರಡು ತಿಂಗಳ ಹಿಂದಿನಿಂದಲೇ ಲೈಂಗಿಕ ಸಂಪರ್ಕ ಹೊಂದಿದ್ದು, ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಆಕೆಯ ಪೋಷಕರು ಆರೋಗ್ಯ ತಪಾಸಣೆ ಮಾಡಿಸಿದಾಗ ಗರ್ಭವತಿ ಎಂದು ಗೊತ್ತಾದ ನಂತರ ಅಪ್ರಾಪ್ತೆ ನೀಡಿದ ಸುಳಿವಿನ ಮೇರೆ ಪೊಲೀಸರು ಆಕೆಯ ಚಿಕ್ಕಮ್ಮನ ಮಗ ರವಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಮೊಕದ್ದಮೆ ಹೂಡಿದ್ದಾರೆ.