ಗೋಣಿಕೊಪ್ಪಲು, ಡಿ. 18: ಗೋಣಿಕೊಪ್ಪಲುವಿನ ಉಪ ವಿಭಾಗದಲ್ಲಿ ಗ್ರಾಹಕರ ಸಮಸ್ಯೆಗಳ ಕುರಿತು ತಾ. 19 ರಂದು (ಇಂದು) ಬೆಳಿಗ್ಗೆ 11.30 ಗಂಟೆಗೆ ಗ್ರಾಹಕರ ಸಭೆ ನಡೆಯಲಿದೆ. ಗೋಣಿಕೊಪ್ಪ ಉಪ ವಿಭಾಗಕ್ಕೆ ಸೇರಿದ ಗೋಣಿಕೊಪ್ಪ, ಶ್ರೀಮಂಗಲ, ಬಾಳೆಲೆ ಶಾಖೆಗೆ ಒಳಪಡುವ ಗ್ರಾಹಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿ ಕುಂದು ಕೊರತೆಗಳನ್ನು ಚರ್ಚಿಸಬಹುದಾಗಿದೆ. ಅಲ್ಲದೆ ಶಾಖಾ ವ್ಯಾಪ್ತಿಗೆ ಒಳಪಡುವ ಗ್ರಾಹಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.