ಹೆಬ್ಬಾಲೆ, ಡಿ. 18: ಗ್ರಾಮದೇವತೆ ಶ್ರೀಬನಶಂಕರಿ ಅಮ್ಮನವರ ಹಬ್ಬದ ಅಂಗವಾಗಿ ಸ್ಥಳೀಯರಿಗೆ ಏರ್ಪಡಿಸಿದ್ದ ಎತ್ತಿನಗಾಡಿ ಓಟ ಸೇರಿದ್ದ ಜನರ ಗಮನ ಸೆಳೆಯಿತು ಸ್ಥಳೀಯ ಮಾದರಿ ಯುವಕ ಸಂಘದ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಎತ್ತಿನ ಗಾಡಿ ಓಟ ಹಾಗೂ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು. ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟಗಳನ್ನು ಜಿ.ಪಂ.ಸದಸ್ಯ ಎಚ್.ಆರ್.ಶ್ರೀನಿವಾಸ್ ಉದ್ಘಾಟಿಸಿದರು.

ಈ ಸಂದರ್ಭ ಮಾಜಿ ಸೈನಿಕ ಪುಟ್ಟಗೌಡ, ಎಪಿಸಿಎಂಸಿ ನಿರ್ದೇಶಕ ಎಚ್.ಟಿ.ನಾಗೇಶ್, ರಾಜಶೇಖರ್, ಸಂಘದ ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ರವೀಂದ್ರ, ಕಾರ್ಯದರ್ಶಿ ಅಭಿಲಾಷ್, ಖಜಾಂಚಿ ಸುದರ್ಶನ್, ಸದಸ್ಯರಾದ ಅಕ್ಷಯ, ಭರತ್, ಸಚಿನ್, ತೀರ್ಪುಗಾರರಾಗಿ ಶಿಕ್ಷಕ ಎಚ್.ಎಸ್.ಗಿರೀಶ್, ಬಸವರಾಜು ಕಾರ್ಯನಿರ್ವಹಿಸಿದರು.