*ಗೋಣಿಕೊಪ್ಪಲು, ಡಿ. 14 : ಪೆÇನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ 2019-20ನೇ ಸಾಲಿನಲ್ಲಿ 100.11 ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ. 83.34 ಲಕ್ಷ ಕ್ರೋಡಿಕೃತ ವ್ಯಾಪಾರ ಲಾಭ ಮತ್ತು ರೂ. 37.01 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ಮಾಹಿತಿ ನೀಡಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸಂಘದ ವಾರ್ಷಿಕ ವರದಿ ನೀಡಿದರು. ಸಂಘದ 2651 ಸದಸ್ಯರುಗಳ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭದ ಹಾದಿ ಕಂಡು ಅಭಿವೃದ್ದಿ ಕಾಣಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಕಳೆದ ಸಾಲಿನಂತೆಯೇ ಈ ಬಾರಿ ಶೇ.25ರಷ್ಟು ಡಿವಿಡೆಂಟ್ ಫಂಡನ್ನು ನೀಡಲಾಗುವುದು ಎಂದು ಹರ್ಷ ವ್ಯಕ್ತಪಡಿಸಿ ಮಾತನಾಡಿದರು. ಸದಸ್ಯರು ಪಾಲು ಹಣ 71.99 ಲಕ್ಷ, ಸಂಘದ ಕ್ಷೇಮನಿಧಿ 106.31 ಲಕ್ಷ, ಇತರೆ ಠೇವಣಿ ನಿಧಿಗಳು ಸೇರಿ 539.22 ಲಕ್ಷ, ಇತರೆ ಸಂಸ್ಥೆಗಳ ಪಾಲು ಮತ್ತು ಠೇವಣಿ 182.46 ಲಕ್ಷ ತೊಡಗಿ ಸಲಾಗಿದೆ. ಸಂಘದ ಚರಸ್ಥಿರಾಸ್ತಿ ಮೌಲ್ಯ 279.08 ಲಕ್ಷಗಳಾಗಿದೆ ಎಂದು ತಿಳಿಸಿದರು.
1930ರಲ್ಲಿ ಪೆÇನ್ನಂಪೇಟೆ ನಾಡು ಕ್ರಾಪ್ ಲೋನ್, ಸೇಲ್ ಮತ್ತು ಸಪ್ಲೈ ಎಂಬ ನಾಮಕಾರಣದಿಂದ ಪ್ರಾರಂಭ ವಾದ ಸಂಘವು ತನ್ನ ಕಾರ್ಯಕ್ಷೇತ್ರ ವನ್ನು ಪೆÇನ್ನಂಪೇಟೆ ನಾಡಿನ 15 ಗ್ರಾಮಗಳು ಮತ್ತು ಶ್ರೀಮಂಗಲ ನಾಡಿನ 6 ಗ್ರಾಮಗಳು ಒಳಗೊಂಡಂತೆ 21 ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತ ಸದಸ್ಯರ ಅನುಕೂಲಕ್ಕಾಗಿ ಸಂಘವು ಉತ್ತಮ ಮಟ್ಟದ ವ್ಯವಸಾಯೋಪಕರಣ, ಗೊಬ್ಬರ, ಕ್ರಿಮಿನಾಶಕ, ಸಿಮೆಂಟ್, ಹತ್ಯಾರು, ಬಟ್ಟೆ, ಮುಳ್ಳು ತಂತಿ, ಆರ್.ಸಿ.ಸಿ. ಮೋರಿ, ಪೈಪ್, ಸೇರಿದಂತೆ ಅಕ್ಕಿಗಿರಣಿ, ಇಂಡಿಯನ್ ಆಯಿಲ್ ಕಾಪೆರ್Çೀರೇಷನ್ ಸೇರಿದಂತೆ ರೈತರಿಗಾಗಿ ಭತ್ತ, ಕಾಫಿ, ಕಾಳುಮೆಣಸು, ದಾಸ್ತಾನು ಮಾಡಲು ಗೋದಾಮು ಸೌಲಭ್ಯವನ್ನು ಹೊಂದಿದೆ. ರೈತ ಸದಸ್ಯರ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಘಟಕವು ಕಾಫಿ ಗಿರಣಿ ಘಟಕವನ್ನು ಸಹ ಪ್ರಾರಂಭಿಸಿದೆ. ಇದರೊಂದಿಗೆ ಸಂಘವು 1.80 ಎಕರೆ ಕಾಫಿ ತೋಟವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ಈ ಎಲ್ಲಾ ಉತ್ತಮ ವ್ಯವಹಾರ ಆಡಳಿತದಲ್ಲಿನ ಪಾರದರ್ಶಕತೆ, ವ್ಯಾಪಾರ ವಹಿವಾಟುಗಳ ಮುಂಚೂಣಿಯನ್ನು ಕಂಡು ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಪುರಸ್ಕರಿಸಿದೆ. ಜಿಲ್ಲೆಯಲ್ಲಿ ನಮ್ಮ ಸಂಸ್ಥೆ ಎರಡನೇ ಸ್ಥಾನವನ್ನು ಅಲಂಕರಿಸಿದೆ ಎಂದರು.
ಸಂಘವು ಅಭಿವೃದ್ದಿಯನ್ನು ಹೊಂದಲು ಸದಸ್ಯರೊಂದಿಗೆ ಸಂಘದ ನಿರ್ದೇಶಕರು ಮತ್ತು ನೌಕರರ ಗಣನೀಯ ಸೇವೆಯೇ ಬಹುಮುಖ್ಯ ಎಂದು ಶ್ಲಾಘಿಸಿದರು. ಮುಂದಿನ ಅವಧಿಯಲ್ಲಿ ಮತ್ತಷ್ಟು ಅಭಿವೃದ್ದಿ ಹೊಂದಲು ಮತ್ತು ಸಂಘದ ಸದಸ್ಯರುಗಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ಆಡಳಿತ ಮಂಡಳಿ ನಡೆಸಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಪದಾರ್ಥಿ ಎಸ್. ಮಂಜುನಾಥ್, ನಿರ್ದೇಶಕರುಗಳಾದ ಮುದ್ದಿಯಡ ಎ. ಸೋಮಯ್ಯ, ಚೋಡುಮಾಡು ಪಿ. ಶ್ಯಾಮ್, ಐನಂಡ ಬೋಪಣ್ಣ, ಮೊಣ್ಣಪ್ಪ, ಬೊಟ್ಟಂಗಡ ದಶಮಿ ದೇಚಮ್ಮ, ಮೂಕಳೇರ ಪಿ. ಶಾರದ, ಬಿಲ್ಲವರ ಎಸ್. ಚಂದ್ರಶೇಖರ್, ಪುತ್ತಮನೆ ಜೀವನ್ ದೇವದಾಸ್, ಹೆಚ್.ಹೆಚ್. ತಮ್ಮಯ್ಯ, ಹಾಲುಮತದ ಎಂ. ಡಿಕ್ಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಪೂನಂ ಉಪಸ್ಥಿತರಿದ್ದರು.