ಕುಶಾಲನಗರ, ಡಿ. 14: ಕೊಡಗು ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಗೆ ಸಿದ್ಧತೆ ನಡೆದಿದೆ.

ಮಡಿಕೇರಿ ತಾಲೂಕಿನಲ್ಲಿ 9 ಸ್ಥಾನಕ್ಕೆ ಸ್ಪರ್ಧಿಸಿದ್ದ 9 ಮಂದಿ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ. ವೀರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ 8 ಸ್ಥಾನಗಳಿಗೆ ಮಾತ್ರ ಆಯ್ಕೆ ನಡೆಯಬೇಕಿದೆ. ಇಲ್ಲಿ 20 ಮಂದಿ ಶಿಕ್ಷಕರು ಚುನಾವಣಾ ಕಣದಲ್ಲಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಇದರಲ್ಲಿ 24 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಾ. 15ರಂದು (ಇಂದು) ಮತದಾನ ನಡೆಯಲಿದೆ.